ಪುಟ:ಮಡಿ-ಮೈಲಿಗೆಯ ಗುಟ್ಟು.djvu/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೫ ಮಡಿಮೈಲಿಗೆಗಳ ಗುಟ್ಟು. ಲೇಖಾಂಕ ೪. ಶಾಮರಾಯ- ಮನುಷ್ಯನ ಅವನತಿ ಹಾಗು ಉನ್ನತಿಗಳಿಗೆ ಮನಸ್ಸೇ ಕಾರಣವು; 'ಮನ ಏವ ಮನುಷ್ಯಾಣಾಂ ಕಾರಣಂ ಬಂಧ ಮೋಕ್ಷಯೋಃ ಎಂದು ಭಗವಂತನು ಕೂಡಾ ಗೀತೆಯ ಮುಖಾಂತರವಾಗಿ ಉಪದೇಶಿಸಿರುತ್ತಾನೆ. ಆದ್ದರಿಂದ ಮನಸ್ಸು ನಿರ್ಮಲವಾಗಿರುವಂತೆ ಯಾವಾಗಲೂ ಎಚ್ಚರಪಡಬೇಕು. ಅದು ಪರಿಶುದ್ಧ ಸ್ಥಿತಿಯಲ್ಲಿರಬೇಕಾದರೆ, ಮನಸ್ಸು ನಿರ್ಮಲವಿಲ್ಲದವರ ಸಹವಾಸ ವನ್ನು ಮಾಡಕೂಡದು. ಅಂದರೆ ತಮೋಗುಣಿಗಳ ನೆರಳಿಗೆ ಸಹ ಹೋಗಬಾರದು. ಶೈಶವಾವಸ್ಥೆಯಲ್ಲಿ ಮನಸ್ಸು ನಿರ್ವಿಕಾರವಾಗಿರುವದು. ಆದರೆ ವಿಕಾರದ ಬೀ ಜಗಳು ಮಾತ್ರ ಆಗ ಅದರಲ್ಲಿ ಬಹು ಸೂಕ್ಷ್ಮವಾಗಿರುವವು; ಮುಂದೆ ಅವು ಸಂಗದಿಂದ ಪರಿಪುಷ್ಟವಾಗಿ ಯಾವ ಬಗೆಯ ಸಂಗವು ಘಟಿಸುವದೋ ಆ ಬಗೆಯ ವಿಕಾರಕ್ಕೆ ಗುರಿಮಾಡುವವು. ಮುಖ್ಯವಾಗಿ ಯಾವ ಗತಿಯು ಮನಸ್ಸಿಗೆ ತಗ ಲುವದೋ ಅದೇ ಗತಿಯನ್ನು ಅದು ಅಂಟಿಕೊಳ್ಳುವದು. ಆದ್ದರಿಂದ ಬ್ರಹ್ಮಕ್ಷತ್ರಿಯ-ವೈಶ್ಯ-ಶೂದ್ರರೆಂಬ ನಾಲ್ಕು ವ ಗ ಗ ಳು ಉತ್ಪನ್ನವಾಗಿರುವವು. “ಚಾತುರ್ವಣ್ಯ್ರಂ ಮಯಾ ಸೃಷ್ಟಂ ಗುಣಕರ್ಮ ವಿಭಾಗಶಃಎಂದು ಗೀತೆಯ ಲ್ಲಿ ಭಗವಂತನು ಹೇಳಿದ ಮರ್ಮವಾದರೂ ಇದೇ ಇರುವದು. ಸತ್ವ ವೃತ್ತಿಯು ಮೈ ಯುಂಡವನಿಂದ ಹಿಂಸಾಪರವಾದ ಕಾರ್ಯವು ಆಗದು. ಹಿಂಸಾಪರನಾದ ವನಿಂದ ಸಾತ್ವಿಕ ವೃತ್ತಿಯನ್ನು ತಾಳಲಿಕ್ಕಾಗದು. ಅಂದರೆ ಯಾವದಕ್ಕಾದ ರೂ ಜನ್ಮ ಸಿದ್ಧವಾದ ಗುಣವು ಬೇಕಾಗುತ್ತದೆ. ಅಂತ್ಯಜರಿಗೆ ಹಿಂಸಾ ಕ್ರಿಯೆಗಳು ಇಲ್ಲವೆ ತಾಮಸ ಅಥವಾ ಹೀನಕರ್ಮ ಗಳು ಜನ್ಮಸಿದ್ಧವಾದವುಗಳಾಗಿವೆ. ಅವರ ಸಹವಾಸದಿಂದ ಈಶ್ವರೋಪಾಸಕನಮನಸ್ಸನ್ನು ನಿರ್ಮಲವಾಗಿಟ್ಟು ಕೊಂಡವನ- ಸತ್ವ ವೃತ್ತಿಗೆ ಭಂಗವುಂಟಾಗುತ್ತದೆ. ಯಾಕಂದರೆ, ಸ್ಪರ್ಶ ಕ್ರಿಯೆಯಿಂದ ಏನು ಹೆಚ್ಚು ಕಡಿಮೆಯಾಗುತ್ತದೆಂಬದನ್ನು ಹಿಂದೆಯೇ ಹೇಳಿದೆ. ಮನಸ್ಸಿನ ಮೇಲೆ ಜಡಪದಾರ್ಥ ಹಾಗು ಚೈತನ್ಯಗಳ ಸಂ ಸಾಮವು ಆಗುತ್ತಿರುವದರಿಂದ ನಮ್ಮ ಮನಸ್ಸಿನ ವಿವಕ್ಷಿತ ಗತಿಯನ್ನು ಭದ್ರ ವಾಗಿ ಕಾಯ್ದು ಕೊಳ್ಳಬೇಕಾಗುತ್ತದೆ. ಹೀಗೆ ಮನಸ್ಸನ್ನು ಸಿದ್ಧಪಡಿಸಿಕೊಳ್ಳದಿದ್ದರೆ ನಮ್ಮ ಉನ್ನತಿಯು ಕುಂಠಿತವಾಗುವದು.