ಪುಟ:ಮಡಿ-ಮೈಲಿಗೆಯ ಗುಟ್ಟು.djvu/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

9L ಮಡಿಮೈಲಿಗೆಗಳ ಗುಟ್ಟು, ಸುಧಾರಳ (ನಡುವೇ ಬಾಯಿ ಹಾಕಿ)-ರಾಯರೇ ಉನ್ನತಿಯನ್ನು ವದು ಮ ನುಷ್ಯಮಾತ್ರರೆಲ್ಲರಿಗೂ ಒಂದೇ ಆಗಿರುವದಷ್ಟೇ; ಹೀಗಿದ್ದು ಅಂತ್ಯಜರನ್ನು ಏ ನೊಂದು ಕಾರಣದಿಂದ ಸಮಾಜದಿಂದ ಹೊರಗಿಟ್ಟರೆ ಅವರ ಉನ್ನತಿಯು ಹ್ಯಾಗಾ ಗಬೇಕು? ಶಾಮರಾಯ-ತಮ್ಮಾ ಸುಧಾರಕಾ, ನೀನು ಉನ್ನತಿಯೆಂದು ಯಾತಕ್ಕೆ ಅನ್ನುತ್ತೀ? ಮೊದಲು ಉನ್ನತಿಯ ವ್ಯಾಖ್ಯೆಯನ್ನಾದರೂ ಹೇಳು. - ಸುಧಾರಕ-ಉನ್ನತಿಯೆಂದರೆ, ಸಮಾಜದಲ್ಲಿ ಪ್ರತಿಷ್ಟೆಯನ್ನು ಸಂಪಾದಿ ಸುವದು. ನಮ್ಮ ಅಂತ್ಯಜರನ್ನು ನಾವು ಮುಟ್ಟಿಸಿಕೊಳ್ಳದಿದ್ದರೆ, ಅವರೊಡನೆ ಬಳಿಕೆ ಮಾಡದಿದ್ದರೆ, ಅವರಿಗೆ ವಿದ್ಯಾ-ಬುದ್ದಿಗಳನ್ನು ಕಲಿಸದಿದ್ದರೆ ಅವರಿಗೆ ಇ೦ತ ಪ್ರತಿಷ್ಟೆಯು ಹ್ಯಾಗೆ ಪ್ರಾಪ್ತವಾಗುವದು? ಶಾಮರಾಯ-ತಮ್ಮ, ಅತ್ತೋನ್ನತಿಯ ಈ ಮಹಾ ವ್ಯಾಖ್ಯೆಯನ್ನು ಬಹು ಚನ್ನಾಗಿ ಹೇಳಿದೆ. ಸರಿ! ಸರಿ! ನೀನು ಹೇಳಿದ್ದೇ ಪರಮ ಶ್ರೇಷ್ಠವಾದ ಉನ್ನತಿಯಾಗಿದ್ದರೆ ಅದಕ್ಕೆ ಇಷ್ಟೊಂದು ಆಯಾಸವಾದರೂ ಯಾಕೆ ಬೇಕಾಗು ತಿತ್ತು? ನೀನು ಹೇಳಿದ್ದು ಆತ್ರೋನ್ನತಿಯಲ್ಲ; ಇ೦ಥ ವ್ಯಾಖ್ಯೆಗಳಿಂದಲೇ ನೀವು ಹಿಂದುಳಿದ ಜನಾಂಗ-ಹಿಂದುಳಿದ ಜನಾಂಗ ಎಂದು ಕಂಠ ಶೋಷಣ ಮಾಡಿ ಕೊಳ್ಳುತ್ತೀರಿ. ಇದು ಶುದ್ಧ ತಪ್ಪು; ಯಾಕಂದರೆ, ಪ್ರತಿಯೊಂದು ಜನಾಂಗ ವು ಲೌಕಿಕದಲ್ಲಿ ತನ್ನಷ್ಟಕ್ಕೆ ತಾನು ಪ್ರತಿಷ್ಠೆಯುಳ್ಳದ್ದೇ ಇರುತ್ತದೆ. ಇದಕ್ಕೂ ಅಧ್ಯಾತ್ಮ ವಿಷಯಕ್ಕೂ ಸಂಬಂಧವೇ ಇರುವದಿಲ್ಲ. ಪ್ರತಿಯೊಂದು ಜಾತಿಗೂ ಒಂದೊಂದು ಕುಲವಿದ್ಯೆಯಿರುವದರಿಂದ ಆಯಾವಿದ್ಯೆಗಳಲ್ಲಿ ಅವರು ನಿಪುಣರಿರು ತ್ತಾರೆ. ಈಗಿನ ಕಾಲದಲ್ಲಿ ಇಂಗ್ಲಿಷ ವಿದ್ಯೆಯೇ ವಿದ್ಯೆಯು; ಅದರ ವ್ಯತಿರಿಕ್ತ ವಾದದ್ದು ವಿದ್ಯೆಯಲ್ಲವೆಂಬ ಸಂಜ್ಞೆಯು ಪ್ರಾಪ್ತವಾಗುತ್ತ ನಡೆದದೆ. ಇದು ಮೌಢ ವಿಚಾರವೆಂದು ಯಾರು ತಾನೆ ಒಪ್ಪಲಾರರು? ಆರವತ್ತು ನಾಲ್ಕು ಕಲೆ ಗಳೂ ಹದಿನಾಲ್ಕು ವಿದ್ಯೆಗಳೂ ಜನಾಂಗದ ಪ್ರತಿಷ್ಠೆಗೋಸ್ಕರ ಸಿದ್ಧವಿರುವಾಗ ಇವುಗಳಲ್ಲಾವುದೆಂದರ ಅವಲಂಬನ ಮಾಡಿದ ಜನಾಂಗವು ಅಶಿಕ್ಷಿತವೆಂದೂ, ಹಿಂದುಳಿದದ್ದೆಂದೂ ಹ್ಯಾಗೆ ಅನ್ನಲಿಕ್ಕೆ ಬರುವದು? ಕಲಾ ಶೂನ್ಯವಾದ ಮತ್ತು ವಿದ್ಯಾ ವಿರಹಿತವಾದ ಜನಾಂಗವು ಮಾತ್ರ ಹಿಂದುಳಿದದ್ದೆಂದು ಹೇಳಬಹುದು. ಇ ರಲಿ; ಪರಸ್ಪರರ ಸ್ಪರ್ಶನ-ಬಳಿ ಕೆಮಾಡೋಣ ಇವೇ ಈಗಿನ ಕಾಲದಲ್ಲಿ ಸಮಾಜ ಪ್ರೇಮವೃದ್ಧಿಗೆ ಕಾರಣಗಳೆಂದು ತಿಳವಳಿಕೆಯಾಗಿದೆ. ಆದರೆ ಇವು ನಿಜವಾದ