ಪುಟ:ಮಡಿ-ಮೈಲಿಗೆಯ ಗುಟ್ಟು.djvu/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಡಿಮೈಲಿಗೆಗಳ ಗುಟ್ಟು, ಪ್ರೇಮವೃದ್ಧಿಯ ಕಾರಣಗಳಲ್ಲ. ಪರಸ್ಪರರು ತಮ್ಮ ಕುಲವಿದ್ಯೆಗಳಲ್ಲಿ ನಿಪುಣರಾಗಿ ತಮ್ಮ ವಿದ್ಯೆಯನ್ನು ಪರಸ್ಪರರಲ್ಲಿ ವಿನಿಮಯಿಸುತ್ತ ಹೋಗುವದೇ ಜಾತಿ ಜಾತಿ ಗಳ ಸ್ನೇಹಾಭಿವೃದ್ಧಿಗೆ ಕಾರಣವಾಗಿದೆ. ಸುವ್ಯವಸ್ಥೆಯ ಸಮಾಜ ರಚನೆಯಲ್ಲಿ ಒಂದು ಘಟಕವಾದ ಅಂತ್ಯಜ ವರ್ಗವು ಸರ್ವರಿಗೂ ಪ್ರಿಯವೂ, ಅವಶ್ಯವೂ ಆಗಿದೆ. ಈ ವ್ಯಾವಹಾರಿಕ ವಿಷಯವನ್ನು ಅಧ್ಯಾತ್ಮಿಕದಲ್ಲಿ ಬೆರೆಯಿಸಿ, ಅದಕ್ಕೆ ಪಾತ್ರವಾದ ಸಮಾಜವನ್ನು ಹಾಳು ಮೂಡುವದು ವಿಹಿತವಲ್ಲ. ಸುಧಾರಕರಾಯರೇ, ಈ ದಿನ ಈ ವಿಷಯವನ್ನು ಇಲ್ಲಿಗೇ ನಿಲ್ಲಿಸಿ ಬೇರೆ ವಿಷಯವನ್ನು ವಿವೇಚಿಸಿರಿ, ಈ ವಿಷಯವಾಗಿ ಕೊನೆಗೆ ಮಾತಾಡೋಣವಂತೆ! ಶಾಮರಾಯ. ಹಾಗಾದರೆ ಈಗ ನಿನಗೆ ಯಾವ ವಿಷಯವನ್ನು ಹೇಳ ಬೇಕು?'

  • ಸುಧಾರಕ-ಯಾವ ವಿಷಯವೆಂದು ಕೇಳುವದೇನು? ನಿಮ್ಮ ಕಡೆಗೆ ನಾವು ಯಾವ ವಿಷಯವನ್ನು ಕೇಳಬೇಕೆಂದು ಬಂದಿರುವೆವೋ ಅದೇ ವಿಷಯವ ನ್ನೇ ಮುಂದೆ ಸಾಗಿಸಬೇಕು.

ಶಾಮರಾಯ-ಹಾಗಲ್ಲಪ್ಪಾ, ಅಂತ್ಯಜ ಸಂಪರ್ಕವು ಇದೇ ವಿಷಯದೊ ಳಗಿನದೊಂದು ಭಾಗವಿದ್ದು, ಅದನ್ನು ನೀನು ಈಗ ಬೇಡವೆಂದು ಹೇಳಿದ್ದರಿಂದ ಮತ್ತಾವ ಭಾಗದಲ್ಲಿ ಪ್ರಶ್ನೆ ಮಾಡುತ್ತೀ ಎಂದು ಕೇಳಿದೆನು. ನೀನು ಬಾಯಿ ಬಿಚ್ಚಿ ಪ್ರಶ್ನೆ ಮಾಡಿದ ಹೊರತು ನಿನಗೆ ಇಂಥ ವಿಷಯವನ್ನೇ ಹೇಳಬೇಕೆಂಬುವದು ನನಗೆ ಹ್ಯಾಗೆ ತಿಳಿಯಬೇಕು? ಸುಧಾರಕ (ಮನಸ್ಸಿನಲ್ಲಿ)- ಈಗ ಇವರನ್ನು ಯಾವ ವಿಷಯವಾಗಿ ಕೇಳ ಬೇಕಾಯಿತು? ಹ! ತಿಳಿಯಿತು. ಮೊದಲು ಮನಸಿನ ವಿಷಯವಾಗಿ ಕೇಳುವಾ. (ಪ್ರಕಟವಾಗಿ) ರಾಯರೇ, ಮಾನಸಿಕ ಉನ್ನತಿಯು ಶ್ರೇಷ್ಠವಾದದ್ದು, ಸ್ಕೂಲ-ಸೂ ಗಳೆರಡರಿಂದ ಮನಸ್ಸಿನ ಮೇಲೆ ಪರಿಣಾಮವಾಗುವದು; ಮನಸ್ಸೇ ಎಲ್ಲ ಕಮ್ಮಿ ಮೂಲ ಕಾರಣ; ಎಂಬ ವಿಷಯಗಳನ್ನು ಹೇಳಿದಿರಷ್ಟೇ; ಆದರೆ ಮನೆ ಸೈಂದರೆ ಯಾವದು? ಅದರ ಸ್ವರೂಪವೇನು? ಎಂಬದರ ವಿಷಯವಾಗಿಯೇ ಮೊದಲು ಹೇಳಿರಿ, ಶಾಮರಾಯ-ಯೋಗ್ಯ ಪ್ರಶ್ನೆ ಮಾಡಿದೆ; ಈ ಮನಸ್ಸಿನ ವಿಚಾರದಿಂದ ನಿನ್ನಲ್ಲಿ ಯೋಗ್ಯ ವಿವೇಕವು ಅಂಕುರಿಸಬಹುದಾಗಿದೆ. ಈ ವಿಷಯವು ಸ್ವಲ್ಪ ಗಡಚಾಗಿದೆ. ಆದರೂ ನಿನ್ನ ಪ್ರಶ್ನೆಗೆ ಉತ್ತರ ಹೇಳುವೆನು ಕೇಳು, ವಾಸ್ತವ