ಪುಟ:ಮಡಿ-ಮೈಲಿಗೆಯ ಗುಟ್ಟು.djvu/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೮ ಮಡಿಮೈಲಿಗೆಗಳ ಗುಟ್ಟು, ವಾಗಿ ವಿಚಾರಿಸಿದರೆ ಮನಸ್ಸೆಂಬದು ಬಹು ಗೂಢವಿರುತ್ತದೆ. ಕೆಲವರು ಮನ ಸೈಂದರೆ ಬೇರೆ ಏನೂ ಇಲ್ಲ; ಕೇವಲ ಕಲ್ಪನೆಗಳಿಗೆ ಮನಸ್ಸೆಂಬ ಸಂಜ್ಞೆಯಿರು ಇದೆ ೦ದು ಹೇಳುತ್ತಾರೆ; ಕೆಲವರು ಇಂದ್ರಿಯ ಸಮುಚ್ಚಯಗಳಿಂದ ಕ್ರಿಯಾ ರೂಪವನ್ನು ಉತ್ಪನ್ನ ಮಾಡುವ ಶಕ್ತಿಯೇ ಮನಸ್ಸೆಂದು ಕರೆಯುತ್ತಾರೆ.' ಅಧ್ಯಾತ್ಮ ವಿಚಾರದವರು ಮನಸ್ಸಿಗೆ-ಸ್ವತಂತ್ರ ಶಕ್ತಿ ರೂಪ ಸೂಕ್ಷ್ಮ ದೇಹದೊಳ ಗಿನ ಇಂದ್ರಿಯವೆಂದು ಭಾವಿಸುತ್ತಾರೆ, ಅದು ಹ್ಯಾಗೇ ಇರಲಿ; ಮನಸ್ಸಿನ ಶುದ್ಧ ಸ್ವರೂಪವು ಹ್ಯಾಗಿರುವದೆಂಬದು ಅದನ್ನೇ ಅಭ್ಯಾಸಿಸಿದ ಹೊರತು ತಿಳಿಯದು! ಆದರೂ ಮನಸ್ಸಿನ ವಿಕೃತ ಸ್ಥಿತಿಯ ಅನುಭವವು ಸಮಸ್ತರಿಗೂ ಇದ್ದೇ ಇರು ವದು. ಪ್ರತಿಯೊಬ್ಬನಿಗೆ ಮನಸ್ಸಿನದೆಂದು ಯಾವದೊಂದು ಕ್ರಿಯೆಯ ಭಾಸ ವಾಗಿಯೇ ಆಗುವದು. ಆ ಕ್ರಿಯೆಯ ಮೇಲಿಂದ ಮನಸ್ಸಿನ ಬೇಧವು ಸಹಜ ವಾಗುತ್ತದೆ. ಎಲ್ಲ ಕಡೆಗೂ ಹವೆಯು ತುಂಬಿಕೊಂಡಿರುತ್ತದೆ; ಆದರೆ ಅದು ಕಣ್ಣಿಗೆ ಕಾಣುವದಿಲ್ಲ; ಕೋಣೆಯಲ್ಲಿ ಸ್ಪಷ್ಟವಾಗಿ ಕುಳಿತಿರುವಾಗಲೂ ತ್ವಗಿಂದ್ರಿಯಕ್ಕೆ ಗೋಚರಿಸುವದಿಲ್ಲ. ಆದರೆ ಆ ಹವೆಯಲ್ಲಿ ಯಾವಾಗ್ಗೆ ಗತಿಯುತ್ಪನ್ನವಾಗುವ ದೊ ಆಗ್ಗೆ ಅದರ ಸ್ಪಷ್ಟ ಅನುಭವವು ಬರಹತ್ತುತ್ತದೆ. ಆಕಾಶದಲ್ಲಿ ಭ್ರಮಿ ಸುವ ಧೂಳಿಯಿಂದ ಹವೆಯು ಚಕ್ರಾಕಾರವಾಗಿ ತಿರುಗುತ್ತದೆಂಬದು ಭಾಸವಾ ಗುತ್ತದೆ. ಝಂಝಾವಾತದಿಂದ ವೃಕ್ಷಾದಿಗಳು ನೆಲಕ್ಕುರುಳಲು ಹವೆಯಲ್ಲಿ ಸಾಮರ್ಥ್ಯವಿದೆಯೆಂಬದು ಅನುಭವಕ್ಕೆ ಬರುತ್ತದೆ; ಮತ್ತು ಶ್ವಾಸೋಚ್ಛಾಸ ದಿಂದ ಹವೆಯು ಸರ್ವತ್ರವ್ಯಾಪಿಸಿರುವದೆಂಬದು ತಿಳಿಯುತ್ತದೆ. ಈ ಮೇರೆಗೆ ಸೂಕ್ಷ್ಮ ದ್ರವ್ಯ ರೂಪದಲ್ಲಿರುವ ಶಕ್ತಿಯು ಅದರ ಗತಿಯ ಮೇಲ್ಲಿಂದಲೇ ನಮ್ಮ ಅನುಭವಕ್ಕೆ ಬರುತ್ತದೆ. ಗತಿಯ ಹೊರತು ಆ ಶಕ್ತಿಯನ್ನು ಕಂಡು ಹಿಡಿಯುವದಕ್ಕೆ ಬೇರೆ ಮಾರ್ಗವಿಲ್ಲ. ಎಲ್ಲಿಯ ವರೆಗೆ ಆ ಶಕ್ತಿಯಲ್ಲಿ ಗತಿಯು ಉತ್ಪನ್ನವಾಗಿಲ್ಲವೋ ಮತ್ತು ಅದು ಎಲ್ಲಿಯ ವರೆಗೆ ಸ್ವಬ್ದವಾಗಿರುವ ದೋ ಅಲ್ಲಿಯ ವರೆಗೆ ಆ ಶಕ್ತಿಯು ಅಸ್ತಿತ್ವದಲ್ಲಿದ್ದರೂ ಅದರ ಭಾಸವು ನಮ ಗಾಗುವದಿಲ್ಲ. ಶಕ್ತಿಯು ಇರುವದೇನೋ ನಿಜ; ಆಗ ಶಕ್ತಿಯು ಯಾವ ಸ್ವರೂ ಪದಲ್ಲಿರುವದೋ ಆ ಸ್ವರೂಪವೇ ಅದರ ಮೂಲ ರೂಪವು. ಅದಕ್ಕೆ ಅಧಿಕೃತ ರೂಪವೆಂದು ಕರೆಯಬಹುದು. ಈ ಸೂಕ್ಷ್ಮ ಶಕ್ತಿಯ ಸ್ಥಿತಿಯು ಹ್ಯಾಗೋ ಹಾಗೆ ಮನಸ್ಸಿನ ಸ್ಥಿತಿಯ ಇರುತ್ತದೆ. ಈ ಮೇಲಿನ ವಿವೇಚನೆಯು ಮನಸ್ಸಿ ಕಿ