ಪುಟ:ಮಡಿ-ಮೈಲಿಗೆಯ ಗುಟ್ಟು.djvu/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಡಿಮೈಲಿಗೆಗಳ ಗುಟ್ಟು, ಸುಧಾರಕ, ಈ ಪ್ರಕಾರ ಮನಸ್ಸಿನ ವಿವೇಚನೆಯಿರುತ್ತದೆ. ಇದರಿಂದ ನಿನಗೆ ಮನಸ್ಸೆಂದು ಯಾತಕ್ಕೆ ಅನ್ನ ಬೇಕೆಂದು ಗೊತ್ತಾಗಿರಬಹುದು. ಇನ್ನು ಈ ಮನೋಧರ್ಮದ ವಿಷಯವಾಗಿ ಕೆಲವು ಸಂಗತಿಗಳನ್ನು ಹೇಳುತ್ತೇನೆ ಕೇಳು. ಯಾವದೊಂದು ಗತಿಯು ನಮ್ಮ ಮನಸಿನಲ್ಲಿ ಉತ್ಪನ್ನವಾದಾಗ ಎಷ್ಟೋ ಪ್ರಸಂಗ ಗಳಲ್ಲಿ ಅದರಲ್ಲಿ ಅನ್ಯ ಗತಿಯು ಪ್ರವೇಶ ಮಾಡಲಿಕ್ಕೆ ಸ್ವಲ್ಪವೂ ಅವಕಾಶ ಸಿಕ್ಕು ವದಿಲ್ಲ, ಎಂಬದು ನಮ್ಮ ಅನುಭವಕ್ಕೆ ಬರುತ್ತದೆ. ಇದರ ಕಾರಣವೇನೆಂದರೆನಮ್ಮ ಮನಸಿಗೂ ಮತ್ತು ಆ ಗತಿ ವಿಶಿಷ್ಟ ಕ್ಕೂ ಇರುವ ಸಂಬಂಧವು ಸ್ಕೂಲ ರೂ ಪದಿಂದ ಇಂದ್ರಿಯ ದ್ವಾರಾ ಇಲ್ಲವೆ ಸೂಕ್ಷ್ಮ ರೂಪದಿಂದ ಪ್ರತ್ಯಕ್ಷ ಮನಸ್ಸಿನ ವರೆಗೆ ತಲುಪಿ ಗತಿ ಉತ್ಪನ್ನ ಮಾಡುವ ಶಕ್ತಿಯ ಮೇಲೆ ತನ್ನ ಸಂಸ್ಕಾರದ ಕಸು ವನ್ನು ಹೆಚ್ಚಿಸುತ್ತದೆ. ಇದು ಹ್ಯಾಗಂದರೆ ಇದಕ್ಕೆ ಒಂದು ಸ್ಕೂಲ ಉದಾಹ. ರಣೆಯನ್ನು ತಕ್ಕೊಳ್ಳೋಣ. ಯಾವದಾದರೊಂದು ಧಾತುಮಯ ಪಾತ್ರೆಯ ಬಳಿಯಲ್ಲಿ ಉರಿಯುತ್ತಿ ರುವ ಅಗ್ಗಿಷ್ಟಿಗೆಯನ್ನು ಇಟ್ಟಿದೆಯೆಂದು ತಿಳಿಯುವಾ; ಆ ಅಗ್ಗಿಷ್ಟಿಗೆಯೊಳಗಿನ ಬೆಂಕಿಯಿಂದ ಮೊದಲು ಆ ಪಾತ್ರೆಯಲ್ಲಿ ಅಗ್ಗಿಷ್ಟಿಗೆಯ ಕಡೆಗಿದ್ದ ಭಾಗವು ಮಾತ್ರ ಕಾಯುವದು. ಪಾತ್ರೆಯ ಉಳಿದ ತಣ್ಣನ್ನ ಭಾಗವು ಅದನ್ನು ತಣ್ಣಗೆ ಮಾಡಲಿಕ್ಕೆ ಪ್ರಯತ್ನಿಸುತ್ತಿದ್ದರೂ ಅದು ಕಾಯುವದು. ಆ ಭಾಗವು ಕಾಯ್ದ ದ್ದು ನಮಗೆ ಸ್ಪರ್ಶದಿಂದ ಗೊತ್ತಾಗುತ್ತದೆ. ಇಲ್ಲಿ ಪಾತ್ರೆಗೆ ಪ್ರತ್ಯಕ್ಷ ಬೆಂಕಿಯು ತಗಲದಿದ್ದರೂ ಅದು ಕಾಯುತ್ತ ದಷ್ಟೇ; ಅಂದರೆ ಇಲ್ಲಿ ಯಾವ ಯಾವ ಕ್ರಿಯೆ ಗಳು ನಡೆಯುತ್ತವೆಂಬದನ್ನು ನಿರೀಕ್ಷಿಸುವಾ; ಮೊದಲು ಇದ್ದಲಿಯ ಪರಮಾಣುಗಳಲ್ಲಿ ಬೇರೆ ಯಾವದೊ೦ದು ಸುಡು ವ ಪದಾರ್ಥದಿಂದ ವಿವಕ್ಷಿತ ಗತಿಯುಂಟಾಗುತ್ತದೆ. ಮತ್ತು ಅವರಿಂದ ಇದ್ದ ಲಿಯ ಯಾವದೊಂದು ಭಾಗದ ಪರಮಾಣುಗಳು ವಿವಕ್ಷಿತ ಗತಿಯಿಂದ ಚಲನವ ಲನ ಕ್ರಿಯೆಯನ್ನು ನಡೆಸುತ್ತವೆ. ಆಗ ನಾವು ಬೆಂಕಿ ಹೊತ್ತಿತೆಂದು ಅನ್ನು ವೆವು. ಅದರ ಈ ಗತಿಯು ಹಾಗೆಯೇ ಸಾಗಲಿಕ್ಕೆ ಆಕ್ಸಿಜನವು ಸಹಾಯಕಾರಿಯಾಗು ಇದೆ. ಇದು ಆ ಪರಮಾಣಗಳೊಳಗಿನ ಗತಿಪ್ರವಾಹ ವಾಯುವಿಗೆ ಕೂಡಿತೆಂದರೆ, ಕೆಲವು ಪರಮಾಣುಗಳ ತರಂಗವು ಏಳುವದು, ಅದರಿಂದ ನಮಗೆ ಪ್ರಕಾಶವು ಗೋಚರಿಸುವದು, ಬೆಂಕಿಯೆಂದರೆ, ಇದ್ದಲಿಯ ಪರಮಾಣುಗಳ ಗತಿಯು ತೀರಾ ಪರಾವ