ಪುಟ:ಮಡಿ-ಮೈಲಿಗೆಯ ಗುಟ್ಟು.djvu/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಡಿ-ಮೈಲಿಗೆಗಳ ಗುಟ್ಟು, ಉಪಯೋಗಿಸುವ ಪದ್ಧತಿಯುಂಟು. ಆದ್ದರಿಂದ ಅವುಗಳ ಉಪಯೋಗವು ಕ್ವಚಿ ತ್ಯಾಗಿ ಮಾಡಲ್ಪಡುವದೆಂದು ಒಡೆದು ಹೇಳುವ ಕಾರಣವಿಲ್ಲ. ರೇಶ್ಮೀಯ ಬಟ್ಟೆಗ ಳಿಗೆ ಬೆಲೆ ಬಹಳಿರುವದರಿಂದ ಅವನ್ನೇನೋ ಒಳ್ಳೆ ಜತನದಿಂದಿಡುವರು. ಆದರೆ ಉಣ್ಣೆಯ ಹಾಗು ನಾರಬಟ್ಟೆಗಳಿಗೆ ಬೆಲೆ ಕಡಿಮೆಯಿರುವದರಿಂದ ಅವುಗಳ ಜತನದ ವಿಷಯವಾಗಿ ಅಷ್ಟೊಂದು ಲಕ್ಷ ಕೊಡುವದಿಲ್ಲ. ಕೆಲಕೆಲವರಂತೂ ಧಾಬಳಿ ಹಾಗು ನಾರಮಡಿಗಳಿಗೆ ತ್ರಿವೇಢಿಗಳಿಂದ ನೀರಿನ ದರ್ಶನವನ್ನು ಮಾಡಿಸಿರುವದಿಲ್ಲ. ದಿನಾಲು ಧೂಲಿ ಹಾಗು ಹೊಗೆಗಳನ್ನು ತಿಂದು ಅವು ಬಣ್ಣದಿರುಗಿರುತ್ತವೆ. ಜೇಡ ಮೊದ ಲಾದ ಸಣ್ಣ ಪ್ರಾಣಿಗಳು ಅವುಗಳಲ್ಲಿ ಮನೆ ಕಟ್ಟಿ ಕೊಂಡು ಕುಟುಂಬ ಸಮೇತವಾಗಿ ವಾಸವಾಗಿರುತ್ತವೆ. ಇಂಥ ಆ ಬಟ್ಟೆಗಳು ಬರಿಯ ಕೈಯಿಂದ ಮುಟ್ಟುವದಕ್ಕೂ ಅಯೋಗ್ಯವಾಗಿರುವಾಗ, ಅವು ಮಡಿಬಟ್ಟೆಗಳೆಂಬ ಭಾವನೆಯಿಂದ ಆ ಮನೆಯವರು ಅವನ್ನು ನಿಶ್ಯ೦ಕೆಯಿಂದ ಉಪಯೋಗಿಸಿಕೊಳ್ಳುವರು. ಅವುಗಳನ್ನು ಉಟ್ಟುಕೊಂಡು ಮಡಿನೀರು ತರುವರು, ಊಟಮಾಡುವರು. ಇಂಥ ಕಲ್ಮಲ ಬಟ್ಟೆಗಳನ್ನು ಹೀಗೆ ಉಪಯೋಗಿಸಬಹುದೇ ಎಂದು ಯಾರಾದರೂ ಕೇಳಿದರೆ 'ಇವನು ಚಿಂತೆ? ಎಂದು ಆಗ್ಧತೆಯಿಂದ ಉತ್ತರಕೊಡುವರು. ಹಾಯ್, ಹಾಯ್! ಇ೦ಥ ಜನರ ಸಂಖ್ಯಾಬಾಹುಳ್ಯದಿಂದ ಮಡಿ-ಮೈಲಿಗೆಗಳ ಸದುದ್ದೇಶವು ಎಲ್ಲಿ ರಸಾತಲವನ್ನು ಹೊಂದುವದೋ ಎಂಬ ಅಂಜಿಕೆಯು ನನ್ನನ್ನು ಬಾಧಿಸುತ್ತಲಿದೆ. ಅಪ್ಪಾ ಸುಧಾ ರಕಾ, ನೀವೆಲ್ಲರು ಸುಧಾರಕರಾಗಿ ಮಡಿ-ಮೈಲಿಗೆಗಳ ಪರವಿಯನ್ನು ಬಿಟ್ಟಿದ್ದ ಇದಕ್ಕೆ ಕಾರಣವು. ಪಾಶ್ಚಾತ್ಯ ಶಿಕ್ಷ ಣ ದಿ ೦ ದ ಮಹಾಮಹೋಪಾ ಧ್ಯಾಯರಿಗಿಂತಲೂ ಸಂಡಿತರೆನಿಸಿಕೊಳ್ಳುವ ನೀವು, ಹೀಗೆ ಮಡಿ-ಮೈಲಿಗೆಯ ವಿಷ ಯವನ್ನು ನಿರಾಕರಣ ಮಾಡಿದ್ದರಿಂದ ಸಾಮಾನ್ಯರು ನಿಮ್ಮ ಅನುಕರಣಮಾಡಿದರು ಗಂಡಸರೆನ್ನುವವರ ಹಾಡು ಹೀಗೆ ಆದಬಳಿಕ ಹೆಣ್ಣು ಮಕ್ಕಳು ತಿಳಿದಾಗಲಿ, ತಿಳಿ ಯದಾಗಲಿ ಮಡಿ-ಮೈಲಿಗೆಗಳನ್ನು ಈ ವರೆಗೂ ಪಾಲಿಸುತ್ತ ಬಂದಿರುವರು. ಅವ ರಿಗೆ ಮಡಿ-ಮೈಲಿಗೆಯ, ಸ್ಪರ್ಶಾಸ್ಪರ್ಶತೆಯ ನಿಜವಾದ ಕಾರಣವು ತಿಳಿಯದು. ನೀರು ಕುಡಿಯಬೇಕಾದರೂ ಕೂಡ ಧಾಬಳಿಯನ್ನು ಉಟ್ಟು ಕೊಳ್ಳಬೇಕೆಂಬದನ್ನು ಮಾತ್ರ ಅವರು ಬಲ್ಲರು. ಇಲ್ಲಿ ಒಂದು ಸಂಗತಿಯು ನೆನಪಾಯಿತು, ಹೇಳುತ್ತೇನೆ ಕೇಳು. ನಾನು ಒಂದುಸಲ ರೇಲ್ವೆ ಬಂಡಿಯಲ್ಲಿ ಪ್ರವಾಸಕ್ಕೆ ಹೊರಟಿದ್ದೆನು. ಆ ದಿವಸ ಬಂಡಿಯಲ್ಲಿ ತುಂಬಾಗದ್ದಲವಿತ್ತು. ಸ್ಪರ್ಶರೂ ಆಸ್ಪರ್ತರೂ ಸಮಸ್ತರೂ ಸೇರಿದ್ದರು. ಹೀಗಿರಲು ಒಂದು ದೊಡ್ಡ ಸ್ಟೇಶನ್ನವು ಬಂದಿತು. ಅಲ್ಲಿ ಹತ್ತುವ