ಪುಟ:ಮಡಿ-ಮೈಲಿಗೆಯ ಗುಟ್ಟು.djvu/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಡಿ-ಮೈಲಿಗೆಗಳ ಗುಟ್ಟು, ಟ್ಟಿಗೆ ಇಂದ್ರಿಯ ದಮನವನ್ನು ಮಾಡಬೇಕಾಗುತ್ತದೆ. ಸಿಕ್ಕ ಪದಾರ್ಥಗಳನ್ನು ಸಿಕ್ಕ ಹೊತ್ತಿನಲ್ಲಿ ತಿನ್ನು ಪದೇ ಮೊದಲಾದ ಶ್ವೇಚ್ಛಾಚಾರಗಳಿಂದ ಅಲಿಪ್ತನಿರಬೇ ಕಾಗುತ್ತದೆ. ಒಂದುರೀತಿಯಿಂದ ಅವನು ಶಾರೀರಿಕ ಸುಖದ ವಿಷಯವಾಗಿ ಮನ ಸೃನ್ನು ಕಲ್ಲು ಮಾಡಿ, ನಿಃಸ್ವಾರ್ಥನಾಗಬೇಕಾಗುತ್ತದೆ. ಈ ಮಡಿ-ಮೈಲಿಗೆಯ ನಿಯಮವು ಇಂದ್ರಿಯಗಳಿಗೂ-ವಿಷಯಕ್ಕೂ ಇರುವ ಸಂಬಂಧವನ್ನು ಕಡಿಮೆ ಮಾಡುತ್ತದೆ; ಮತ್ತು ದೇಹಾಭಿಮಾನವನ್ನು ಮರೆಯಿಸಿ, ಶರೀರ ಹಾಗು ಮನ *ುಗಳು ಜಗತ್ತಿನ ಉಪಯೋಗಕ್ಕೆ ಬೀಳುವ ಹಾಗೆ ಅವುಗಳಲ್ಲಿ ಪವಿತ್ರತೆಯನ್ನೂ ಸಾಮರ್ಥ್ಯವನ್ನೂ ಉಂಟುಮಾಡುತ್ತದೆ. ಆದ್ದರಿಂದ ಇಂಥ ಕಠಿಣ ನಿಯಮಗಳ ನ್ನು ಪಾಲಿಸುವದಕ್ಕೆ ಯಾರು ತಾನೇ ಒಪ್ಪಿಕೊಳ್ಳುವರು? ೮೪ ಲಕ್ಷ ಯೋನಿ ಗಳಲ್ಲಿ ಪರಿಭ್ರಮಣ ಮಾಡಿ ಮಾಡಿ ಭವಚಕ್ರಕ್ಕೆ ಬೇಸತ್ತು ಪುಣ್ಯವಶಾತ್ ಮನುಷ್ಯ ಯೋನಿಯಲ್ಲಿ ಜನ್ಮ ತಾಳಿದ ಜೀವನು ಮಾತ್ರ ಭವಚಕ್ರವನ್ನು ನೀಗಲಾಡುವ ಅಧ್ಯಾತ್ಮ ವಿಚಾರವನ್ನು ಮಾಡಿದರೆ ಮಾಡಬೇಕು. ಈ ಮನುಷ್ಯರಲ್ಲಿಯ ಸತ್ವ ಪ್ರಧಾನವಾದ ಬ್ರಾಹ್ಮಣ ವರ್ಣವು ಅಧ್ಯಾತ್ಮ ವಿಚಾರಕ್ಕೆ ಹೆಚ್ಚು ಪ್ರಾಶಸ್ಯವ ನ್ನು ಕೊಟ್ಟಿತು. ಅ೦ತೇ ಆ ವರ್ಣವು ಈ ನಿಯಮಗಳನ್ನು ಪಾಲಿಸುವ ಗುತ್ತಿ ಗೆಯನ್ನು ಹೊತ್ತಿತು. ವಸ್ತುಸ್ಥಿತಿಯು ಹೀಗಿದ್ದದರಿಂದ ಎಲ್ಲ ನಿಯಮಗಳು ಬ್ರಾಹ್ಮಣರಲ್ಲಿಯೇ ಯಾಕೆ ಉಳಿದವೆಂದು ಅವರ ಮೇಲೆ ವಕ್ರದೃಷ್ಟಿಯನ್ನು ಚಲ್ಲು ವ ಕಾರಣವಿಲ್ಲ. ಸುಧಾರಕರಾಯರೆ, ಬ್ರಾಹ್ಮಣರು ಈಗ ಮಡಿ-ಮೈಲಿಗೆಯ ನಿಯಮ ವನ್ನು ಬಿಟ್ಟಿದ್ದರಿಂದ ಆಗಿರುವ ಹೆಚ್ಚು ಕಡಿಮೆಯೇನು? ಶಾಮರಾಯ-ಏನು ಹೆಚ್ಚು-ಕಡಿಮೆಯಾಗಿರುವದೆಂಬದು ನಿನ್ನ ಲಕ್ಷದಲ್ಲಿ ಬರುವದಿಲ್ಲವೇನು? ಯಾವದೊಂದು ಹೊರೆಯ ಕಟ್ಟು ಸಡಿಲಿದರೆ ಅಥವಾ ಹರಿದ ರೆ ಅದರಲ್ಲಿದ್ದ ಕಾಷ್ಠ ತುಂಡುಗಳು ಅವ್ಯವಸ್ಥ ಸ್ಥಿತಿಯನ್ನು ಹೊಂದುವಂತೆ ಬ್ರಾಹ್ನ ಣರಲ್ಲಿಯ ವ್ಯಕ್ತಿಗಳು ಈ ಬಂಧನ ತಪ್ಪಿದ್ದರಿಂದ ಮನಬಂದಂತ ಆಚರಿಸಹತ್ತಿವೆ. ಈ ಮನಸೋಕ್ತ ಆಚರಣೆಯಿಂದ ಆ ವ್ಯಕ್ತಿಗಳಲ್ಲಿಯ ವಿಷಯವ್ಯಾಮೋಹವು ಬೆಳೆದಿದೆ. ನಿಃಸ್ವಾರ್ಥಬುದ್ದಿಯು ನಾಮಶೇಷವಾಗಿದೆ. ಜಗತ್ತಿನ ಹಿತವನ್ನು ಸಾಧಿಸು ವಂಥ ಪವಿತ್ರತೆಯು ನಷ್ಟವಾಗಿದೆ. ಇದಕ್ಕೂ ಹೆಚ್ಚಿನ ಅನರ್ಥವು ಇನ್ನೇನಾಗಬೇಕು? ಸುಧಾರಕಾ, ಹಿಂದೂಜನರ ಉದಾತ್ತ ವಿಚಾರಗಳ ಮಾದರಿಯನ್ನು ನಿನಗೆ ಇಷ್ಟು ಹೇಳುತ್ತೇನೆ ಕೇಳು. ಸ್ಪರ್ಶಾಸ್ಪರ್ಶತೆಯಲ್ಲಿ ನಮ್ಮ ವರಷ್ಟು ಸೂಕ್ಷ್ಮ