ಪುಟ:ಮಡಿ-ಮೈಲಿಗೆಯ ಗುಟ್ಟು.djvu/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಡಿ-ಮೈಲಿಗೆಗಳ ಗುಟ್ಟು, ಹಿರಿಯರು, ಅನುಭವಿಕರು. ನಾನು ಹೇಳುವ ಸಂಗತಿಯು ನಿಮಗೆ ತಿಳಿಯದೆ ಇರ ತಕ್ಕ ಸಂಗತಿಯಲ್ಲ. ಆದರೂ ಸದ್ಯಕ್ಕೆ ಮಾತಾಡುವ ಪ್ರಸಂಗಬಂದದ್ದರಿಂದ ನಿಮ್ಮ ಮುಂದೆ ಎರಡು ಮಾತುಗಳನ್ನು ಹೇಳುತ್ತೇನೆ. ರಾಯರೇ, ನಾನು ಸಹ ಆ ಪಂಗಡಕ್ಕೆ ಸೇರಿದವನೇ; ಆದರೆ ಈಗ ನಿಮ್ಮ ಸಹವಾಸದಿಂದ ನನಗೆ ನಮ್ಮ ಪಂಗಡದವರ ಆಚರಣೆಯನ್ನು ಸ್ಮರಿಸಿದರೆ ಅಸಹ್ಯವಾಗುತ್ತದೆ. ನಮ್ಮವರು ಇಂ ಗ್ಲೀಷ ಕಲಿತು ಗ್ರಾಜುವಿಟ ಪದವಿಗೆ ಬಂದರೆಂದರೆ ದೊಡ್ಡ ನವಕರಿಯನ್ನು ಸಂ ಪಾದಿಸುವ ಹುಚ್ಚು ಅವರಿಗೆ ಗಂಟುಬೀಳುವದು. ಆದ್ದರಿಂದ ಅವರು ಯುರೋ ಪಿಯನ್ನರ ಪ್ರೀತಿಯನ್ನು ಪಡೆಯುವದಕ್ಕಾಗಿ ಅವರಂತೆ ಆಚರಿಸಹತ್ತು ವರು. ಅವರು ಬಿಸಿ ಬಿಸಿಯಾದ ಚಹವನ್ನು (ಟೀ) ಕುಡಿದರೆ ಅದಕ್ಕೂ ಹೆಚ್ಚು ಬಿಸಿಯಾದದ್ದನ್ನು ನಮ್ಮವರು ಕುಡಿಯುವರು. ಅವರು ಬಟು-ಪಾಟ್ಟನ್ನು ಗಳನ್ನು ಹಾಕಿಕೊಂಡರೆ ಇವರೂ ಹಾಕಿಕೊಳ್ಳುವರು. ಒಟ್ಟಿಗೆ ಇಂಗ್ಲಿಷರೊಡನೆ ಸಾರೂಪ್ಯತಾಮುಕ್ತಿ ಯನ್ನು ಪಡೆದರೇ ತಾವು ಹುಟ್ಟಿದ್ದಕ್ಕೆ ಸಾರ್ಥಕವೆಂದು ಭಾವಿಸುವರು. ಇದ ಕೈ ಯುರೋಪಿಯನ್ನರ ಅನುಗ್ರಹಕ್ಕೆ ಪಾತ್ರವಾಗಬೇಕೆಂಬ ನಮ್ಮ ಬಯಕೆಯೇ ಕಾರಣವು; ಮೊದಲು ನಮ್ಮ ವರು ಹೀಗೆ ಆಚರಿಸಿ ತಮ್ಮ ಮುಂದಿನ ಸಂತತಿಗೆ ಮಾರ್ಗತೋರಿಸಿಕೊಟ್ಟರು. ಈಗ ನಾವುಗಳೆಲ್ಲ ಯಾವ ಉದ್ದೇಶವೂ ಇಲ್ಲದೆ, ಬರಿಯ ಚಂದಕ್ಕಾಗಿ ಯುರೋಪಿಯನ್ನರ ಅನುಕರಣ ಮಾಡಹತ್ತಿರುತ್ತೇವೆ. ಮೂವತ್ತೆರಡು ಕೋಟಿ ಪ್ರಜೆಗಳು ಕ್ರಾಫುಬಿಟ್ಟರೆ ಅವರಿಗೆ ತಾನೇ ಯಾವ ಯುರೋ ಪಿಯನ್ನನು ನೌಕರಿಯನ್ನು ಕೊಡಿಸುವನು? ಕ್ರಾಫುಬಿಡುವದ, ಹ್ಯಾಟ್ ಹಾಕು ವದೂ ಈಗ ನಮಗೊಂದು ಫ್ಯಾಶನ್ನಾಗಿ ಕುಳಿತದೆ. ರಾಯರೇ, ಈಗ ನನಗೆ ಬಹಳಪಶ್ಚಾತ್ತಾಪವಾಗತೊಡಗಿದೆ. ನಾಳೆಗೇ ಈ ಕ್ರಾಫನ್ನು ತೆಗೆಯಿಸಿಬಿಡುತ್ತೇನೆ ಯಾವಾಗ ಬೆಳಗಾದೀತೋ ಎಂದು ನನಗೆ ಚಡಪಡಿಕೆಯಾಗಿದೆ. ನಾಳೆಗೆ ನೀವು ಬಳಿಗೆ ಬರಬೇಕಾದರೆ ಈ ತುದ ಅಸಹ್ಯ ರೂಪದಿಂದ ಬರಲಿಕ್ಕಿಲ್ಲ, ನನ್ನಂತೆ ನಮ್ಮ ಸುಧಾರಕರೆಲ್ಲರಿಗೂ ಪಶ್ಚಾತ್ತಾಪವಾದರೆ ಬಹಳ ಒಳಿತಾಗುವದು. ಮುಸಲ್ಮಾನ ಅರಸರ ಕಾಲದಲ್ಲಿ ದೊಡ್ಡ ದೊಡ್ಡ ಜಾಹಗೀರುಗಳೂ, ಮನಸಬದಾರಿಯ ಮೊದ ಲಾದವುಗಳಿಂದ ಹೇರಳವಾಗಿ ಐಶ್ವರ್ಯವು ದೊರೆಯುತ್ತಿದ್ದರೂ ನಮ್ಮ ಜನರು ಧರ್ಮಾಂತರ ಮಾಡುತ್ತಿರಲಿಲ್ಲ. ಇದಲ್ಲದೆ ಆಗ ನಮ್ಮವರಿಗೆ ಪ್ರಾಣಭಯವೂ ಇತ್ತು. ಈಗ ಅದರ ವಿರುದ್ಧ ಸ್ಥಿತಿಯಿರುತ್ತದೆ. ನಮಗೆ ಪ್ರಾಣಭಯವೂ ಇಲ್ಲ, ಐಶ್ವರ್ಯಾದಿಗಳು ದೊರೆಯುವ ಸಂಭವವೂ ಇಲ್ಲ. ಹೀಗಿದ್ದು, ನಾವು ಧರ್ಮಾ೦