ಪುಟ:ಮಡಿ-ಮೈಲಿಗೆಯ ಗುಟ್ಟು.djvu/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Y ಮಡಿ-ಮೈಲಿಗೆಗಳ ಗುಟ್ಟು. ತರಕ್ಕೆ ಮನಸ್ಸು ಕದಿರುವದನ್ನು ನೋಡಿದರೆ ಈಗ ನನಗೇ ಆಶ್ಚರ್ಯವಾಗುತ್ತದೆ! ಹಾ! ಹಾಯ! ನಾವೆಷ್ಟು ಮೂರ್ಖತನಕ್ಕೆ ಹೋದೆವೆಲ್ಲ? ಶಿವ ಶಿವ! ರಾಯರೇ, ನಿಮ್ಮ ಸಂಗತಿಯು ಸಿಕ್ಕದ್ದು ಬಹಳ ಒಳಿತಾಯಿತು. ನಿಮ್ಮಿಂದ ನನ್ನ ಅಜ್ಞಾನವಾದರೂ ದೂರವಾಯಿತು. ಇದಕ್ಕಾಗಿ ನಾನು ನಿಮ್ಮ ಉಪಕಾರವನ್ನು ಎಷ್ಟು ಸ್ಮರಿಸಿದರೂ ತೀರದು. - ಶಾಮರಾಯ-ಶಾಬಾಸ್? ಇಂಥ ಸದ್ಭುದ್ಧಿಯು ನಿನಗೆ ಹುಟ್ಟಿದ್ದಕ್ಕಾಗಿ ನನಗೆ ತುಂಬಾ ಸಂತೋಷವಾಗುತ್ತದೆ. ಇದರಿಂದ ನಮ್ಮ ಋಷಿಗಳ ಪುಣ್ಯವು ಬಲವಂತವಾಗಿರುತ್ತದೆಂದು ಅನ್ನ ಬೇಕಾಗುತ್ತದೆ. ಯಾಕೆಂದರೆ, ನಿನ್ನಂಥ ಪಕ್ಕಾ ಸುಧಾರಕನು ಇಷ್ಟು ಬೇಗನೆ ಹಾದಿಗೆ ಬಂದೀಯೆಂದು ನಾನು ಸ್ವಪ್ನದಲ್ಲಿ ಕೂಡಾ ಭಾವಿಸಿರಲಿಲ್ಲ. ಸುಧಾರಕ-ಛೇ, ಛೇ ರಾಯರೇ, ನನ್ನಿ೦ದ ಬಹಳ ತಪ್ಪಾಯಿತು. ಇಷ್ಟು ದಿವಸ ನಮ್ಮ ಧರ್ಮದ ವಿಷಯವಾಗಿ ನನ್ನಿಂದಅಪರಾಧವಾದದ್ದು ಆಗಿಹೋಯಿತು. ಇನ್ನು ಮುಂದೆ ನನ್ನಿಂದ ಅಂಥ ಅಪರಾಧಗಳು ಖಂಡಿತ ಅಗಲಿಕ್ಕಿಲ್ಲ, ಆದ್ದರಿಂದ ತಾವು ಇನ್ನು ಮುಂದೆ ನನಗೆ ಸುಧಾರಕನೆಂದು ಕರೆಯಬಾರದೆಂದು ನನ್ನ ಪ್ರಾರ್ಥ ನಯುಂಟು. ಶಾಮರಾಯ (ನಕ್ಕು)-ಇಷ್ಟು ದಿವಸ ನಿಜವಾಗಿ ನೀನು ಸುಧಾರಕನೇ ಇದ್ದದರಿಂದ ಆಗ ಬಿದ್ದ ಹೆಸರನ್ನು ಈಗ ಯಾಕೆ ತಪ್ಪಿಸಬೇಕು? ಆದರೆ ಈಗ ಆ ಹೆಸರನ್ನು ವಿನೋದಪರವಾಗಿ ಕರೆಯೋಣ. ಸುಧಾರಕ-ನಿಮ್ಮ ಇಷ್ಟ; ರಾಯರೇ, ಇನ್ನು ಮುಂದೆ ನನ್ನ ನಿಮ್ಮ ಧರ ವು ಒಂದೇ ಆಯಿತಲ್ಲವೇ? ಹಾಗಾದರೆ ನನಗೆ ತಿಳಿಯದ ವಿಷಯಗಳನ್ನು ಕೇಳಿ ಕೊಳ್ಳಲಿಯಾಗಿ ಶಾಮರಾಯ-ನೀನು ಬೇಕಾದ ವಿಷಯವನ್ನು ಕೇಳಬಹುದು. ಆ ಬಗ್ಗೆ. ನೀನು ಸಂಕೋಚಪಡುವ ಕಾರಣವಿಲ್ಲ. ನೀನು ಮೊದಲು ಕೇಳಿದ ಪ್ರಶ್ನೆಗಳಲ್ಲಿ ಇನ್ನೂ ಕೆಲವುಗಳಿಗೆ ನಾನು ಉತ್ತರ ಕೊಡಬೇಕಾಗಿದೆ. ಒಳ್ಳೇದು ಈಗ ಮತ್ತಾವ ಪ್ರಶ್ನೆ ಮಾಡುತ್ತೀ? - ಆಚಾರ್ಯ(ನಡುವೇ ಬಾಯಿಹಾಕಿ)-ಸರಿ! ಸರಿ! ರಾಯರೇ, ಇಪ್ಪತ್ತನೇ ಶತಮಾನದ ಸುಧಾರಕರು ಸಹ ನಿಮ್ಮ ಮಾತಿಗೆ ಒಡಂಬಟ್ಟ ಬಳಿಕ ನಿಮ್ಮ ಜಿಹ್ವಾ ಗ್ರದಲ್ಲಿ ಪ್ರತ್ಯಕ್ಷ ಶಾರದೆಯೇ ವಾಸಮಾಡಿದ ಹಾಗೆ ಕಾಣುತ್ತದೆ!