ಪುಟ:ಮಡಿ-ಮೈಲಿಗೆಯ ಗುಟ್ಟು.djvu/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆದಿ

ಎ ಡಿ-ಮೈಲಿಗೆಯ ಗುಟ್ಟು, ಸ್ತ್ರೀಯರಮೇಲೆ ದಯದೋರುತ್ತಿದ್ದ ಸುಧಾರಕರಲ್ಲಿ ಇಂದಿನವರೆಗೆ ಒಬ್ಬನಾದರೂ

ಕುರುಡ-ಕುಂಟ ಅಥವಾ ಕುರೂಪವುಳ್ಳ ವಿಧವೆಯರನು ಲಗ್ನವಾಗಿರುವದಿಲ್ಲ, ಗೌರಾಂಗದ ಸುಂದರಿಯರನ್ನು ನೋಡಿಯೇ ಅವರೊಡನೆ ಒಡನಾಡುತ್ತಿರುವರು. ಇದರಿಂದ ವಿಧವೆಯರ ವಿಷಯವಾಗಿದ್ದ ಅವರ ಕನಿಕರವು ಎಂಥದೆಂಬದು ಮೇಲೆ ಯೇ ಸಿದ್ಧವಾಗುತ್ತದೆ. ಇದರಂತೆ ಆಸ್ಪರ್ಶರನ್ನು ಕೂಡಿಕೊಳ್ಳುವದರಲ್ಲಾದರೂ ಅವರ ಮನೋದೌಬ೯ಲ್ಯವಿರುತ್ತದೆ. ಅಂದಮೇಲೆ ಆ ವಿಷಯದಲ್ಲಿ ಚರ್ಚೆಸಾಕು. ಸದ್ಯಕ್ಕೆ ಪ್ರಚಾರದಲ್ಲಿರುವ ಆಚರಣೆಯಲ್ಲಿ ತಪ್ಪು-ಒಪ್ಪುಗಳಿದ್ದರೆ ಹೇಳಿರಿ, - ಶಾಮರಾಯ-ದೇಶಕಾಲಮಾನದಂತೆ ಈ ಮಡಿ-ಮೈಲಿಗೆಯ ವಿಚಾರದಲ್ಲಿ ಜನರು ಬಹಳ ಅಭ್ಯಂತರಮಾಡಿಕೊಂಡಿರುವರು. ದಾಕ್ಷಿಣಾತ್ಯರಲ್ಲಿ ಮಡಿ-ಮೈಲಿ ಗೆಯ ನಿರ್ಬಂಧವು ಸ್ವಲ್ಪ ಶಿಥಿಲವೆಂದೇ ಹೇಳಬೇಕಾಗುವದು. ಈಗ ಶಿಥಿಲವಾಗಿ ತೋರುವದರಿಂದ ಪೂರ್ವದಿಂದಲೂ ಅವರು ಇದೇ ರೀತಿಯಾಗಿ ಆಚರಿಸುತ್ತ ಬಂದಿ ರುವರೆಂದು ಮಾತ್ರ ಹೇಳಲಿಕ್ಕಾಗದು. ಯಾಕಂದರೆ ನಮ್ಮ ದೇಶದಲ್ಲಾದರೂ ಈಗ ಎಷ್ಟೋ ಕಡಿಮೆಯಾಗಿದೆ. ಅಷ್ಟು ಕಠಿಣತರವಾದ ನಿರ್ಬಂಧವನ್ನು ಯಾರೂ ಪಾಲಿ ಸುವಂತೆ ತೋರುವದಿಲ್ಲ; ಇದ್ದರೆ ಅಪವಾದ ರೂಪವಾಗಿಯಾರಾದರೂ ಮಹಾತ್ಮರು ಇರಬಹುದು, ಇರಲಿ; ಒಟ್ಟಿಗೆ ಹೇಳತಕ್ಕದ್ದೇನಂದರೆ ಈಗ ಬಹುಶಃ ಜನರು ಧರ್ಮ ಶಾಸ್ತ್ರಾಜ್ಞೆಯಂತೆ ಈ ನಿಯಮವನ್ನು ಪಾಲಿಸುವದಿಲ್ಲ, ಅವರಿಗೆ ಅದು ಬೇಕಾಗಿ ರುವರೂ ಇಲ್ಲ. ಯಾಕ೦ದರೆ ಮನಸ್ಸು ವಿಷಯಾಸಕ್ತವಾಗಿರುವದರಿಂದ ಈಗಿನವ ರಿಗೆ ಅಧ್ಯಾತ್ಮದ ಕಡೆಗೆ ಲಕ್ಷವಿರುವದಿಲ್ಲ. ಸಾಧ್ಯವಾದಮಟ್ಟಿಗೆ ಈ ನಿರ್ಬಂಧವನ್ನು ಪಾಲಿಸುವದು ಪ್ರತಿಯೊಬ್ಬನ ಕರ್ತವ್ಯ ವಿರುವದು, ಪರಿಸ್ಥಿತಿಯು ಕೆಟ್ಟಿರುವದೆಂದು ಮನಬಂದಂತೆ ಕುಣಿದಾಡುವದು ಮತ್ತಿಷ್ಟು ಅಕಲ್ಯಾಣಕ್ಕೆ ಕಾರಣವು, ಆದ್ದರಿಂದ ಅನಾಚಾರಗಳನ್ನು ಸಂಪೂರ್ಣವಾಗಿ ಬಿಡಬೇಕು. ತೀರ ನಿಷಿದ್ಧ ಸಂಗತಿಗಳನ್ನು ಅಂದರೆ ಯಾವದನ್ನು ಮಾಡುವದರಿಂದ ನಮ್ಮ ಆರ್ಯಸಮಾಜಸಂಸ್ಕೃತಿಗೆ ಬಾಧೆಬರುವದೋ ಅಂಥವುಗಳನ್ನು ವರ್ಜಿಸುವದು ವಿಹಿತವು ಉಗಿಬಂಡಿಯಲ್ಲಿ ಕುಳಿತು ಊಟಮಾಡುವದು, ಖಾನಾವಳಿಯಲ್ಲಿ ಇಲ್ಲವೆ ಮನೆಯಲ್ಲಿ ಬೂಟುಟುಗಳನ್ನು ಹಾಕಿಕೊಂಡು ಊಟಮಾಡುವದೂ ಆರ್ಯಸಂಸ್ಕೃತಿಗೆ ನೀರು ಹಿಡಿ ಯುವ ಸಾಧನಗಳಾಗಿವೆ. ಆದ್ದರಿಂದ ಪೂರ್ವಜರು ಹಾಕಿದ ವಿಶಿಷ್ಟ ಪದ್ಧತಿಯಂತೆ ನಡೆಯುವದು, ನಮಗೆ ಶಾರೀರಿಕ ಹಾಗು ಮಾನಸಿಕ ಉನ್ನತಿಗಳ ದೃಷ್ಟಿಯಿಂದಬಹು ಹಿತಕರವಿರುತ್ತದೆ. ಸುಧಾರಕಾ, ನೀನೇ ವಿಚಾರಮಾಡು; ಈಗ ನಮ್ಮ ದೇಶದಲ್ಲಿ