ಪುಟ:ಮಡಿ-ಮೈಲಿಗೆಯ ಗುಟ್ಟು.djvu/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೪ ಮಡಿ-ಮೈಲಿಗೆಯ ಗುಟ್ಟು, ಎಷ್ಟೋಜನ ಪದವೀಧರರೂ ವಿದ್ವಾಂಸರೂ ಇರುವರಷ್ಟೇ; ಇಷ್ಟು ಜನ ವಿದ್ಯಾಸಂಸ ನರಿದ್ದರೂ ಅವರಲ್ಲಿ ಒಬ್ಬರಾದರೂ ಮನಸ್ಸಿನತೃಪ್ತಿ ಅಥವಾ ಮನಸ್ಸಮಾಧಾನವ ಇರುತ್ತದೇನೆಂಬದನ್ನು ವಿಚಾರಮಾಡು. ನಾನು ನನ್ನ ಅನುಭವದಿಂದ ಹೇಳುವದೇ ನಂದರೆ- ಚಿಕ್ಕಂದಿನಲ್ಲಿ ತಂದೆಯ ಶಿಕ್ಷಣದಲ್ಲಿದ್ದಾಗ ನಾನು ಸದಾಚಾರಿಯಾಗಿ ದೈನು, ಆಗ ನನ್ನಿಂದ ಮಡಿ-ಮೈಲಿಗೆಯ ನಿಯಮಗಳು ಚನ್ನಾಗಿ ಕಾಲಿಸಲ್ಪಡು. ತಿದ್ದವು. ಅದರಿಂದ ಚಿಕ್ಕ ತನದಲ್ಲಿ ನನ್ನಲ್ಲಿ ಸಮಾಧಾನವೂ ಮನಃಪ್ರಸನ್ನತೆಯ ವಿಶೇಷವಾಗಿತ್ತು. ಮುಂದೆ ನಾನು ಮನೆಯಿಂದ ಹೊರಬಿದ್ದು ಹೆಚ್ಚಿನ ಅಭ್ಯಾಸ ಕ್ಕಾಗಿ ಯಾವಾಗ ಶಹರವನ್ನು ಹಿಡಿದೆ. ಆಗ ನನ್ನ ಪರಿಸ್ಥಿತಿಯು ಬದಲಿಸಿಹ ಯಿತು, ಸರಿಕರ ಅನುಕರಣದಿಂದ ನಾನು ದುರಾಚಾರಿಯಾದೆನು, ಮಡಿ-ಮೈಲಿಗೆವಿಧಿ-ನಿಷೇಧಗಳ ವಿಚಾರವು ಕೈಬಿಟ್ಟಿತು. ಈ ಸ್ಥಿತಿಯಲ್ಲಿ ನನ್ನ ಮನಸ್ಸಿನ ಪ್ರಸನ್ನ -ಯ-ಸಮಾಧಾನವೂ ಹೇಳಹೆಸರಿಲ್ಲದೆ ಹೋದವು. ನಾನು ಎಮ್. ಎ. ಪರೀಕ್ಷೆ ಯಲ್ಲಿ ತೇರ್ಗಡೆಹೊಂದಿ ಪ್ರೋಫೇಸರನೆಂಬ ಬಿರುದಿಗೆ ಪಾತ್ರನಾದರೂ ನನ್ನ ಮನಸ್ಸು ನನ್ನ ಕೈಯಲ್ಲಿ ಇಲ್ಲದೆಹೋಯಿತು. ಇದು ನನ್ನ ಪೂಣ೯ ಅನುಭವಕ್ಕೆ ಬಂದಮಾತು. ಬಳಿಕ ನಾನು ಪುನಃ ಮನೆಗೆ ಬಂದು ನನ್ನ ಕೃತಕರ್ಮಕ್ಕೆ ಪಶ್ಚಾತ್ತಾಪಪಟ್ಟು ಯಾ ವಾಗ ಆರ್ಯಸಂಸ್ಕೃತಿಯಂತ ನಡೆಯಹತ್ತಿದೆನೋ ಆಗ ನನಗೆ ಶಾಂತಿಯು ದೊರ ಕಿತು. ಆಗ ನಾನು ಮಡಿ-ಮೈಲಿಗೆಯ ವಿಷಯವನ್ನು ಕುರಿತು ಅನೇಕ ಧರ್ಮ ಗ್ರಂಥಗಳನ್ನು ಪರಿಶೀಲಿಸಿ ನಾನು ನಿರ್ಧರಿಸಿದ ಸಂಗತಿಯ ಸಾರವನ್ನು ನಿನಗೆ ಹೇಳಿ ರುತ್ತೇನೆ. ನನ್ನಂತೆ ನನ್ನ ಹಲವು ವ್ಯವಸಾಯ ಬಂಧುಗಳು ಆಗ ಮನಸ್ಸಮಾಧಾನ ವಿಲ್ಲದೆ ಪೇಚಾಡುತ್ತಿದ್ದರೆಂಬದನ್ನಾದರೂ ನಾನು ಬಲ್ಲೆನು. ಅಪ್ಪಾ ಸುಧಾರಕ, ಇದರಿಂದ ಸಿದ್ಧವಾಗುವದೇನಂದರೆ ಮನಸ್ಸು ಸೂಕ್ಷ್ಮದರ್ಶಕಯಂತ್ರಕ್ಕೆ ಗೋಚ ರಿಸದ್ದರಿಂದ ಅದರಮೇಲಾಗುವ ಪರಿಣಾಮಗಳು ಅದಕ್ಕೆ ಗೋಚರಿಸುವದಿಲ್ಲ, ಮನ ಸ್ಸಿನ ಮೇಲಾಗುವ ಪರಿಣಾಮವು ಅನುಭವದಿಂದಲೇ ಗೊತ್ತಾಗತಕ್ಕದ್ದು, ಮಡಿಮೈಲಿಗೆಯ ವಿಷಯವು ಹೀಗಿದ್ದು ನೀನು ಮೊದಲನೇದಿನ ನಮ್ಮ ಕಡೆಗೆ ಬಂದಾಗ ಮಡಿ-ಮೈಲಿಗೆಯ ಆಚಾರಧರ್ಮವನ್ನು ತಿರಸ್ಕರಿಸಹತ್ತಿ, ಒಬ್ಬ ಅತಿ ಶೂದ್ರನ Dತರದ ತುಣುಕು, ನೂರಾರುಜನ ಬ್ರಾಹ್ಮಣರನ್ನು ಮೈಲಿಗೆ ಮಾಡುವದನ್ನು ಯಾವ ಬ್ರಾಹ್ಮಣನು ಸೂಕ್ಷ್ಮದರ್ಶಕಯಂತ್ರದಲ್ಲಿ ತೋರಿಸುವನೆಂದು ಕೇಳಿದ್ದಿ ಯಷ್ಟೇ; ಆ ಶಂಕೆಯು ನಿನ್ನಲ್ಲಿ ಈಗ ಉಳಿದಿರಬಹುದೇನು? ಸುಧಾರಕಛೇ; ರಾಯರೇ, ಈಗ ಶಂಕೆಯ ಮಾತನ್ನೇ ಆಡುವಹಾಗಿಲ್ಲ,