ಪುಟ:ಮಡಿ-ಮೈಲಿಗೆಯ ಗುಟ್ಟು.djvu/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಡಿ-ಮೈಲಿಗೆಯ ಗುಟ್ಟು, ೪೫ ನೀವು ಹೇಳುವ ವಿಷಯಗಳನ್ನು ನಾನು ಚನ್ನಾಗಿ ಮನನ ಮಾಡಿಕೊಂಡಿದ್ದೇನೆ. ಅದರಲ್ಲಿ ನನಗೆ ಸಂಶಯವುಂಟಾಗಿದ್ದರೆ ನಾನು ಸುಧಾರಕರ ಪಂಥವನ್ನು ಬಿಡುತ್ತಿದ್ದಿಲ್ಲ. ಆಚಾರ್ಯರಾಯರೇ, ನಮ್ಮ ಸುಧಾರಕರು ನಿಜವಾಗಿಯೇ ಮಡಿ-ಮೈ ಲಿಗೆಯ ಗುಟ್ಟನ್ನು ತಿಳಿದರೆಂಬಂತೆ ತೋರುತ್ತದೆ. ಈಗ ಅವರ ವೇಷವನ್ನು ನೋಡಿರಿ! ಶುದ್ದ ಹಿಂದುಗಳಂತೆ ಕಾಣುವರು. ಬ್ರಾಹ್ಮಣನ ಬಾಹ್ಯ ಲಕ್ಷಣವು ಒಡೆದುಕಾಣು ವದು. ಶಾಬಾಸ್ ಸುಧಾರಕಮಹಾಶಯ! ಮೊದಲಿನಿಂದ ನೀವು ಹೀಗಿದ್ದರೆ ನಿಮಗೆ ಎಷ್ಟು ಭೂಷಣವೆನಿಸುತ್ತಿತ್ತಲ್ಲ? ಸುಧಾರಕ-ಆಚಾರ್ಯರೇ, ದುವ್ಯಾಳದಲ್ಲಿಯೇ ಅನ್ನದ ಮಹತ್ವವಿದ್ದಂತೆ ಜನರು ಧರ್ಮಶೂನ್ಯರಾದ ಕಾಲದಲ್ಲಿಯೇ ಧರ್ಮಕ್ಕೆ ಮಹತ್ವವು ಬರುವದು. ಸುಧಾರಕರು ಧರ್ಮವನ್ನು ನಿರಾಕರಿಸುವರಷ್ಟೇ; ಧರ್ಮದ ವಿಷಯವಾಗಿರುವ ಅವರ ಈ ಅಜ್ಞಾನವೇ ಒಮ್ಮೆ ಲ್ಲೊಮ್ಮೆ ಪ್ರಸಂಗಬಂದಾಗ ಅವರನ್ನು ಒಳ್ಳೆ ಧರ್ಮಾಭಿ ಮಾನಿಗಳನ್ನಾಗಿಮಾಡುವದು. ಇದಕ್ಕೆ ಈಗ ನನ್ನಲ್ಲುಂಟಾಗಿರುವ ಧರ್ಮಬುದ್ಧಿಯೇ ಸಾಕ್ಷಿಯಾಗಿರುವದು. ಶಾಮರಾಯ-ಆಚಾರ್ಯರೇ, ನಮ್ಮ ಸುಧಾರಕರ ಬುದ್ದಿಯಲ್ಲಿ ಎಷ್ಟು ಅಭ್ಯಂತರವಾಯಿತು ನೋಡಿರಿ! ಸದ್ವಿಚಾರಗಳು ಅವರಲ್ಲಿ ತಮ್ಮಿಂದ ತಾವೇ ಉತ್ಪ ನೃವಾಗಹತ್ತಿವೆ. ಧರ್ಮದ ವಿಷಯವಾಗಿ ಇಷ್ಟು ದಿವಸ ಬೀಳುಬಿದ್ದಿದ್ದ ಅವರ ಮನೋಭೂಮಿಕೆಯಲ್ಲಿ ಇನ್ನು ಮುಂದೆ ಧರ್ಮದಬೆಳೆಯು ಒಳ್ಳೆಭರದಿಂದಬರುವದು. - ಆಚಾರ್ಯ (ನಕ್ಕು)-ರಾಯರೇ, ನಿಮ್ಮ ಮಾತು ನಿಜ, ಶಾಮರಾಯ-ಆಚಾರ್ಯರೇ, ನಾನು ಈ ಮಾತನ್ನು ಯಾಕೆ ಆಡಿದನಂ ಬದರ ರಹಸ್ಯವು ನಿಮಗೆ ತಿಳಿಯಿತೇನು? ಸ್ಪಷ್ಟವಾಗಿಯೇ ಹೇಳುತ್ತೇನೆ ಕೇಳಿರಿ, ನಮ್ಮ ಲ್ಲಿ ಕೆಲವರು ಧಾರ್ಮಿಕರೆನಿಸಿಕೊಳ್ಳುವವರು ಬಹಿರಂಗದಲ್ಲಷ್ಟೇ ಮಡಿಯನ್ನು ಕಾಯ್ದು ಕೊಳ್ಳುತ್ತಾರೆ. ಮನಸ್ಸಿನ ನಿರ್ಮಲತೆಯ ವಿಷಯವಾಗಿ ಎಚ್ಚರಪಡುವ ದಿಲ್ಲ. ಆದ್ದರಿಂದ ಅವರಿಗೆ ಮಡಿಯ ರಹಸ್ಯವೇ ಗೊತ್ತಾಗಿಲ್ಲವೆಂದು ಹೇಳಬೇಕಾ ಗುತ್ತದೆ. ಮುಖ್ಯವಾಗಿ ಮಡಿ-ಮೈಲಿಗೆಯ ನಿಯಮದಿಂದ ಮನಸ್ಸಿನ ಶುದ್ದೀಕರ ಣವನ್ನು ಮಾಡಿಕೊಳ್ಳುವದಿದ್ದು ಅದನ್ನೇ ಸಾಧಿಸಿಕೊಳ್ಳದಿದ್ದರೆ 'ಮಲೇ ಕುಠ7 ರ ಎಂಬಂತಾಗುವದಲ್ಲವೇ? ಆದ್ದರಿಂದ ಧರ್ಮದಲ್ಲಿ ಅಜ್ಞಾನಿಗಳಾದವರಿಗೆ ಒಮ್ಮೆ ಧರ್ಮವು ತಿಳಿಯಿತೆಂದರೆ ಅವರು ಅದರ ಬೆಲೆಯನ್ನರಿತು ಒಳ್ಳೆ ಆತುರದಿಂದ ಅದರ ಉದ್ದೇಶವನ್ನು ಸಾಧಿಸಿಕೊಳ್ಳುವರೆಂದು ಹೇಳಬೇಕಾಯಿತು.