ಪುಟ:ಮಡಿ-ಮೈಲಿಗೆಯ ಗುಟ್ಟು.djvu/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವ..: Fಯ ಗುಟ್ಟು, * ಸುಧಾರಕ (ನಡವೇ ಬ: 12:17 at} -ರಾಯರೇ, ಇಲ್ಲಿ ಇನ್ನೊಂದು ಸಂಗತಿಯನ್ನು ಕೇಳರ್ಬೇಕು*ನಂದರೆ-ಮಡಿ-ಮೈಲಿಗೆಯ ನಿರ್ಬಂಧದ ಕೆನಿಯ ಸಿವು - ಸ.. : .೯ತೆಯನ್ನು ಹೊಂದುವದಷ್ಟೇ? ಆದರೆ ..... *'ಇ' . ಇಲ್ಲಿನ ಮಸ್ಸನ್ನು ನಿರ್ಮಲಮಾಡಿಕೊಂಡ ಬಳಿಕ ಪುನಃ ಆ ನಿಯಮಗಳನ್ನು ಪಾಲಿಸುವ ಕಾರಣವೇನು? ಕಾಮರಾಯ-ಮನಸ್ಸು ಒಮ್ಮೆ ಶುದ್ಧವಾದರೂ ಪುನಃ ಅದಕ್ಕೆ ವಿಷಯ ಸಂಸರ್ಗದಿಂದ ಮಾಲಿನ್ಯವುಂಟಾಗದಂತೆ ಅಂದರೆ ಅದು ಪುನಃ ದುರಾಚಾರಪ್ರವರ್ತ ಕವಾಗದಂತೆ ಅದನ್ನು ಪರಿಶುದ್ಧ ಸ್ಥಿತಿಯಿಂದ ಇಡುವದಕ್ಕೆ ಈ ನಿಯಮಗಳನ್ನು ಅವಶ್ಯವಾಗಿ ಪಾಲಿಸಬೇಕು. ಇನ್ನು ಅತ್ಯುಚ್ಚ ಕೋಟೆಯಲ್ಲಿ ಗಣಿಸಲ್ಪಟ್ಟ ಸತ್ಪುರು ಷರು-ಬ್ರಹ್ಮಾನುಭವವನ್ನು ಹೊಂದಿದವರು ಪುನಃ ಮನೋವಿಕಾರಕ್ಕೆ ಒಳಗಾಗದೆ ರಿಂದ ಒಂದು ವೇಳೆ ಅವರು ಈ ನಿಯಮವನ್ನುಲ್ಲಂಘಿಸಿ ನಡೆದರೂ ನಡೆಯಬಹುದು. ಆದರೆ 'ಯದ್ಯದಾಚರತಿ ಶ್ರೇಷ್ಠ ಎಂಬ ಗೀತೆಯ ಶ್ಲೋಕದಲ್ಲಿ ಭಗವಂತನು ದೊಡ್ಡವರು ಹ್ಯಾಗೆ ವರ್ತಿಸುವರೋ ಹಾಗೆ ಸಾಮಾನ್ಯರೂ ವರ್ತಿಸುವರೆಂದು ಲೋಕನಡವಳಿಕೆಯನ್ನು ಹೇಳಿರುವದರಿಂದ ಸಜ್ಜನರೂ ಹಾಗೆ ಸ್ಟೇಚ್ಛೆಯಾಗಿ ನಡೆ ಯುವ ಹಾಗಿಲ್ಲ, ಲೋಕಸಂಗ್ರಹಾರ್ಥವಾಗಿ ಅವರೂ ಈ ಮಡಿ-ಮೈಲಿಗೆಯ ನಿರ್ಬಂಧವನ್ನು ಪಾಲಿಸಲೇ ಬೇಕಾಗುತ್ತದೆ. ಒಟ್ಟಿಗೆ ಆರ್ಯಸಂಸ್ಕೃತಿಯನ್ನು ಕಾಯಬೇಕೆಂಬ ಅಭಿಮಾನವುಳ್ಳ ಪ್ರತಿಯೊಬ್ಬನು ಈ ನಿಯಮವನ್ನು ಪಾಲಿಸಲೇ ಬೇಕು. ಅಂದರೇ ಅವನಲ್ಲಿ ಧಾರ್ಮಿಕ ನಿಯಮವುಳಿದು, ಅವನ ಕಲ್ಯಾಣವಾಗು ವದು, ಹಾಗು ಅವನು ಹುಟ್ಟಿದ ದೇಶವು ಸುಖಸಮಾಧಾನಗಳಿಂದ ಸಮ್ಮ ದ್ಧವಾಗುವದು,

  • ಸುಧಾರಕರಾಯರೇ, ಇಷ್ಟು ದಿವಸ ನಿಮ್ಮ ಸಮೀಚೀನವಾದ ಪ್ರವಚನ ವನ್ನು ಕೇಳಿ ಬಹು ಸಮಾಧಾನವಾಯಿತು. ನನ್ನ ಆಕ್ಷೇಪಣೆಗಳಿಗೆಲ್ಲ ತೃಪ್ತಿಕರ ವಾದ ಉತ್ತರವು ದೊರೆತಹಾಗಾಯಿತು. ಇನ್ನು ಮುಂದೆ ನಾನು ಆರ್ಯಸಂಸ್ಕೃತಿಗೆ ತಕ್ಕಂತೆ ಮಡಿ-ಮೈಲಿಗೆಯ ಸಂಪೂರ್ಣ ನಿಯಮಗಳನ್ನು ಪಾಲಿಸುತ್ತೇನೆ.

ಸಂಪೂಣ೯. ywwwvvvvvvvvvvvvvvvvvvvvvvvvvvvvvvvvvvvvvvvvvvvwwwwwww ಆನಂದವನ.ಅಗರಿಯ ಶ್ರೀ ಶೇಷಾಚಲ ಪ್ರಿಂಟಿಂಗ್ ಪ್ರೆಸ್ಸಿನಲ್ಲಿ ಭ, ಪ, ಕಾಳಿ ಇವರಿಂದ ಮುದ್ರಿಸಲ್ಪಟ್ಟಿತು.