ಪುಟ:ಮಡಿ-ಮೈಲಿಗೆಯ ಗುಟ್ಟು.djvu/೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಡಿ-ಮೈಲಿಗೆಗಳ ಗುಟ್ಟು, ಬಟ್ಟೆಗಳಿಗಿಂತ, ಸರಿಯನ್ನು ಬಡೆದುಕೊಂಡಿದ್ದ ಹೊಸ ಬಟ್ಟೆಗಳು ನಿಮಗೆ ಶುಚಿಯಾ ಗಿರುವದನ್ನು ನೋಡಿದರೆ ಸಾಧಾರಣ ಹುಚ್ಚನು ಕೂಡಾ ನಿಮ್ಮ ಮೂರ್ಖತನಕ್ಕೆ ನಗದೆ ಇರಲಾರನು. ಪಾಪ! ನಮ್ಮ ದೇಶದ ಜಾಡರು ನೇದ ಕರೇ ಬಟ್ಟೆಗಳನ್ನು (ತೀರೆಗಳನ್ನು ಉಟ್ಟುಕೊಂಡಾಗ ನಿಮ್ಮ ಹೆಂಗಸರು ಶೂದ್ರರನ್ನು ಮುಟ್ಟಬಾರದಂ ತೆ! ಆದರೆ ಪರದೇಶದ ಬಿಳೀ ತೊಗಲಿನವರು ನೇದ ಕರೀ ಬಟ್ಟೆ (ಚೀಟು-ಆಲಮಾನ) ಯನ್ನುಟ್ಟು ಕೊಂಡಿದ್ದರೆ ಅಡ್ಡಿಯಿಲ್ಲವಂತೆ! ಅಹಹ! ಎಷ್ಟು ಬುದ್ಧಿವಂತಿಕೆಯ ಎ ಚಾರವಿದು! ಇಂಥ ಬೆಲೆಯುಳ್ಳ ತತ್ವಗಳು ಅನ್ಯರಿಗೆ ತಿಳಿಯಬಹುದೆ? ಇರಲಿ; ಈ ಮರುಳರ ಮರುಳುತನವನ್ನು ಇನ್ನಿಷ್ಟು ನೋಡೋಣ! - ಜಳಕ ಮಾಡಿ ಒಗೆದ ಬಟ್ಟೆಯನ್ನು ಅಮ್ಮನವರಿಗೆ ಜಳಕ ಮಾಡದೆ ಇದ್ದವರ ಒಲ್ಲಿಯ ಸೆರಗು ತಾಕಿದರೂ ಮೈಲಿಗೆಯಾಗುವದಂತೆ; ಹಿಟ್ಟನ್ನು ಹುರಿದು ಅದರಲ್ಲಿ ನೀರುಹಾಕಿ ರೊಟ್ಟಿಗಳನ್ನು ಮಾಡಿದರೆ ಅದಕ್ಕೆ ದಶಮಿ ಎಂಬ ಸಂ ಜ್ಞೆಯು ಬಂದು, ಅವು ಮಡಿ ಮೈಲಿಗೆಗಳ ಎಳತಕ್ಕೆ ಒಳಗಾಗುವದಿಲ್ಲವಂತೆ; ಆದರೆ ಹಸೀ ಹಿಟ್ಟಿನಲ್ಲಿ ನೀರುಸುರವಿ ಮಾಡಿದ ರೊಟ್ಟಿಗಳು ಮೈಲಿಗೆಯವರಿಂದ ಮುಟ್ಟಲ್ಪಟ್ಟರೆ ಮಡಿಗೆ ಅಯೋಗ್ಯವಾಗುವವಂತೆ! ಏನು ವಿಲಕ್ಷಣ ಮಡಿ-ಮೈಲಿ ಗೆಯ ವಿಚಾರವಿದು? ಬ್ರಾಹ್ಮಣಾ, ಇಂಥ ಉದಾಹರಣೆಗಳು ಸಾವಿರಾರು ಸಿಗದವು. ಯಾಕೆ, ನನ್ನ ಮಾತಿನಲ್ಲಿ ಏನಾದರೂ ಅರ್ಥವಿದೆಯೋ ಇಲ್ಲವೋ ಮಾತಾಡು~ ಮಾತಾಡು. ಆಚಾರ್ಯ-ಏನುಮಾತಾಡಲೆಪ್ಪಾ, ನಿನ್ನಂಥ ಬಾಯ್ಸಡಕನೆದುರಿಗೆ! ನೀನು ಕಡ್ಡಿಯನ್ನೊಯ್ದು ಗುಡ್ಡವನ್ನಾಗಿ ಮಾಡಿತೋರಿಸುತ್ತೀ; ನಮ್ಮ ಪ್ರಾಚೀನರೇನು ದಡ್ಡರೇ? ದೊಡ್ಡ ದೊಡ್ಡ ಶಾಸ್ತ್ರಗಳನ್ನು ರಚಿಸಿದ ಋಷಿಗಳು ಅಜ್ಯರೇ; ಈಗಿನವರಾದ ನೀವು ಮನಬಂದಂತೆ ಮಾತಾಡುತ್ತೀರಿ, ಅದು ಸುಳ್ಳು, ಇದುಸುಳ್ಳು, ಅದರಲ್ಲೇನಿದೆ? ಇದರಲ್ಲೇನಿದೆ? ಮಡಿಯಿಲ್ಲ-ಮೈಲಿಗೆಯಿಲ್ಲ, ದೇವರಿಲ್ಲ-ದಿಂಡರಿಲ್ಲವೆಂದು ಲಂಡತನದಿಂದ ನುಡಿಯುವ ನಿಮಗೆ ಯಾರೂ ಶಿಕ್ಷಿಸು ವವರಿಲ್ಲದಾಗಿದೆ. ಅಂತೇ ನೀವು ಹಿರಿಯರು ಹಾಕಿದ ನಿಯಮಗಳನ್ನು ಮುರಿದು ಸ್ವಚ್ಛಂದವಾಗಿ ಆಚರಿಸಹತ್ತಿದ್ದೀರಿ. ಇಷ್ಟೇ ಅಲ್ಲ; ನಾವೇ ಪಂಡಿತರೆಂದು ಹಿಂದಿ ನವರ ಆಚರಣೆಗಳನ್ನು ಹಳಿಯಹತ್ತಿದ್ದೀರಿ, ಸುಧಾರಕರಾದ ನಿಮ್ಮ ಪಾಂಡಿತ್ಯಕ್ಕೆ ಅರಣ್ಯ ಉಪಸರ್ಗವನ್ನು ಹಚ್ಚುವದು ಯುಕ್ತವಾಗಿದೆ. ಸುಧಾರಕ- (ಸಿಟ್ಟಿನಿಂದ) ಯಾಕೆ ಆಚಾರ್ಯರೇ, ಬರಬರುತ್ತ ನಾಳಿ