೮೧
ಐವತ್ತಕ್ಕಿಂತಲೂ ಹೆಚ್ಚು ! ಅಪರಾಧ ಮನೋಭಾವದಿಂದ ಆತಂಕವಾಗುತ್ತದೆ. ಆಗ ಜಾಹೀರಾತುಗಳನ್ನು ಓದುತ್ತಾರೆ, ಗುಟ್ಟಾಗಿ. ಆತಂಕವು ಅತ್ಯುಲ್ಬಣವಾಗುತ್ತದೆ. ತಾತ್ಕಾಲಿಕ ಉದ್ರೇಕಗೊಳಿಸುವ ಆ ಔಷಧಿಗಳು ಸ್ವಲ್ಪ ದಿನ ಧೈರ್ಯ ತುಂಬುತ್ತವೆ. ಅನಂತರ ಬಲುಬೇಗ ದುಷ್ಪರಿಣಾಮಗಳನ್ನು ಮೂಡಿಸುತ್ತವೆ. ವಿಷಚಕ್ರವು ಈ ರೀತಿ ಸುತ್ತಹತ್ತುತ್ತದೆ.
ವೈದ್ಯಜನಿತ ಆತಂಕವೆಂದೆನ್ನುವುದಕ್ಕಿಂತ ಜಾಹೀರಾತುಜನಿತ ಆತಂಕ ಎನ್ನಬಹುದು. ಈ ಗುಂಪಿನಲ್ಲಿ ಹೆಚ್ಚು ಮಾರಾಟವಾಗುವ, ಯುವಕರಿಗೆ ಮೆಚ್ಚಾಗುವ, ಹಲವಾರು ಕಾದಂಬರಿ, ಕತೆಗಳನ್ನೂ ಗಮನಿಸಬಹುದು. ಜಾಹೀರಾತಿನಲ್ಲಿ ಸಾಹಿತ್ಯದ ಸೋಂಕು ಇರುವಂತೆ, ಸಾಹಿತ್ಯದ ಕೆಲವು ಪ್ರಕಾರಗಳಲ್ಲಿ ಜಾಹೀರಾತಿನ ಕೊಳೆಯನ್ನೂ ಕಾಣಬಹುದು. ಆತಂಕದ ಉಲ್ಬಣಕ್ಕೆ ಇವೂ ಬೆಂಬಲ ನೀಡುತ್ತವೆ.
ಆತಂಕ ಮತ್ತು ಚಟ
'ಹೇಗೆ ಹೇಗೋ ಆಡ್ತಾ ಇದಾನೆ, ನಮ್ಮ ಮಗು, ತಕ್ಷಣ ಬನ್ನಿ' ಎಂದು ಸಾಹುಕಾರರ ಹೆಂಡತಿ ರಾತ್ರಿಯ ಹನ್ನೆರಡರ ವೇಳೆಗೆ ಫೋನ್ ಮಾಡಿದರು. ಹೋಗಿ ನೋಡಿದರೆ 'ಮಗು'ವಿಗೆ ಮೂವತ್ತರ ಪ್ರಾಯ, ಧಾಂಡಿಗ, ಮಂಚದ ಮೇಲೆ ಬಿರಟೆ ಹೊಡೆದಂತೆ ಸೆಟೆದು ಕೂತಿದ್ದಾನೆ. ಗಾಬರಿ ತುಂಬಿದ ವಿಹ್ವಲ ಮುಖ, ನಾಡಿ ಹಿಡಿದುನೋಡಿದರೆ, ಜೂಜಿನ ಕುದುರೆಯ ತರಹ ಓಡುತ್ತಿದೆ. ಬೇಗ ಬೇಗ ಮೇಲುಸಿರು ಬಿಡುತ್ತಿದ್ದಾನೆ. ಸುತ್ತಲೂ ಮನೆಯವರೆಲ್ಲ ಗಿರ್ಕಾಯಿಸಿಕೊಂಡಿದ್ದಾರೆ. ಈಗ ಹೇಗಿದೀಪ್ಪಾ ಎಂದು ಕ್ಷಣಕ್ಷಣಕ್ಕೂ ಕಾತರದಿಂದ ವಿಚಾರಿಸುತ್ತಾ ಇದ್ದಾರೆ.
ಕೇಳಿದ ಯಾವ ಪ್ರಶ್ನೆಗೂ ಅವ ಹ್ಯಾ ಹೂ, ಬಿಟ್ಟು ಸರಿಯಾದ ಯಾವ ಉತ್ತರವನ್ನೂ ಕೊಡುತ್ತಿಲ್ಲ. ಕೊಡುವ ಸ್ಥಿತಿಯಲ್ಲೂ ಅವ ಇದ್ದಂತೆ ಕಾಣಿಸಲಿಲ್ಲ. ಭೀಕರ ದೆವ್ವವನ್ನು ಕಣ್ಣಾರೆ ಕಂಡವನಂತೆ ಬೆದರಿ ಕೂತಿದ್ದ. 'ಉಗ್ರ ಆತಂಕದ ಸ್ಥಿತಿಯಲ್ಲಿದ್ದಾನೆ. ಅದು ಬಿಟ್ಟರೆ ಇನ್ನು ಯಾವ ಕೆಟ್ಟ ಸೂಚನೆಗಳೂ ಇಲ್ಲ.' ಎಂಬುದು ಸ್ಪಷ್ಟವಾಗಿತ್ತು. ಆದುದರಿಂದ ಮಲಗಿ ಚೆನ್ನಾಗಿ ನಿದ್ರೆ ಬರುವಂತೆ ಮಾಡುವ ಶಾಂತಿಕಾರಕ ಔಷಧಿಗಳನ್ನು ಚುಚ್ಚಲಾಯಿತು. ಅವನು ಮಲಗಿ ನಿದ್ರಿಸಿದರೆ ವೈದ್ಯನೂ ಮನೆಗೆ ಹೋಗಿ ನಿದ್ರಿಸಬಹುದಲ್ಲ.
ಬೆಳಿಗ್ಗೆ ರೋಗಿಯ ಮನೆಯಿಂದ ಕರೆಯೇನೂ ಬರಲಿಲ್ಲ. ಆದರೆ ವೈದ್ಯನಿಗೆ