ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೧೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೮೪
ಮನಮಂಥನ

ಮನಸ್ಸಿನ ದೃಢತೆಯಿಂದ ಅದನ್ನು ಹತೋಟಿಯಲ್ಲಿಡಲಾಗದಿದ್ದರೆ, ಔಷಧಿಗಳೂ ಸಹ ಬಳಸಲ್ಪಡುತ್ತವೆ. ಆಗ, ಒಂದು ಮಿತಿಯನ್ನು ಮೀರಿದಾಗ, ಆತಂಕದ ಚಿಹ್ನೆಗಳು ಕಾಣಬರುತ್ತದೆ. ಅಂತಹ ಸ್ಥಿತಿಯಲ್ಲಿ ಕಣ್ಣಿಟ್ಟುಕೊಂಡು ಓದುವುದೂ ಕಷ್ಟ ಓದಿದರೂ ತಲೆಗೆ ಹತ್ತುವುದೇ ಇಲ್ಲ. ಓದು ಹಾಳಾಗಿ ಹೋಗಲಿ, ತಿಳಿದಿದ್ದು ಬರೆದರಾಯಿತು ಎಂದು ಮಲಗಿದರೆ, ನಿದ್ರೆಯೂ ಬರುವುದಿಲ್ಲ. ಕಣ್ಣು ರೆಪ್ಪೆಗಳನ್ನು ಮುಚ್ಚಲೂ ಆಗುವುದಿಲ್ಲ.

ಬಲವಂತಕ್ಕೆ ಬಸಿರಾದವರು, ಮಗುವನ್ನು ಹೆರಲು ಇಷ್ಟಪಡದೆ, ಬಯಕೆಯು ಮೂಡಿದ ಎರಡೋ ಮೂರನೆಯದೋ ತಿಂಗಳಿನಲ್ಲಿ ಮೈ ಇಳಿಸಿಕೊಳ್ಳಲು, ಕೇರಿಯ ಬೂಬಿಯರು, ಅಜ್ಜಿಯರು ಹೇಳಿದುದನ್ನೆಲ್ಲಾ ಮಾಡುತ್ತಾರೆ. ದೋರೆ ಪರಂಗಿಕಾಯಿಗಳು, ಎಂತೆಂತದೋ ಕಂಡೂ ಕೇಳದ ಗಿಡಮೂಲಿಕೆಗಳು, ಅವರಿವರು ಗುಟ್ಟಾಗಿ ಕೊಟ್ಟ ರಸಮಿಶ್ರ ಮಾತ್ರೆಗಳು ; ಯಾವುದು ಸಿಕ್ಕಿದರೆ ಅದನ್ನು ಮುಕ್ಕಿ ಬಿಡುತ್ತಾರೆ.

ಅನಪೇಕ್ಷಿತವಾಗಿ ಬಸಿರಾದೆವಲ್ಲಾ ಎಂಬುದೇ ಒಂದು ಕೊರಗು. ಇದನ್ನು ಹೇಗಾದರೂ ಮಾಡಿ ದೊಡ್ಡವರಿಗೆ ತಿಳಿಯದಂತೆ ನಿವಾರಿಸಿಕೊಳ್ಳಬೇಕು ಎನ್ನುವ ಆತಂಕ. ಇಂತಹ ಸಮಯದಲ್ಲಿ ಯಾವ ಮುದುಕಿ ಏನು ಹೇಳಿದರೂ ಕೇಳುವಂತೆ ಮನಸ್ಸು ಅಸ್ಥಿರವಾಗಿರುತ್ತೆ. ಆಗ ವಿಷಮೂಲಿಕೆಗಳು, ರಸಮಾತ್ರೆಗಳು ಬಯಸಿದ ಫಲವನ್ನು ನೀಡದೆ, ದೇಹದ ಸ್ವಾಸ್ಥ್ಯವನ್ನು ಕೆಡಿಸುತ್ತವೆ. ಆದರೊಂದಿಗೆ ಮನಸ್ಸಿನ ಆತಂಕವೂ ಹೆಚ್ಚಿ ಭಯವೂ ಮೂಡುತ್ತದೆ. ಮೈ ಇಳಿಯುವುದು ಹಾಗಿರಲಿ, ಮೈಯ್ಯೇ ಅಳಿದು ಹೋಗುವುದೂ ಉಂಟು. ಉಳಿದುಕೊಂಡವರ ಮನಸ್ಸು ಆತಂಕಗ್ರಸ್ತವಾಗಿ ಮನೆಯಲ್ಲಿನ ನಡವಳಿಕೆಯು ವಿಚಿತ್ರವಾಗುವುದೂ ಉಂಟು.

ಚಟಗಳು

ಶ್ರೀಮಂತರು ಸಿಗರೇಟ್ ಸೇದುತ್ತಾರೆ, ಅದು ಶ್ರೀಮಂತಿಕೆಯ ಒಂದು ಲಕ್ಷಣ; ಹೀಗಂದುಕೊಂಡು ತಾತ್ಕಾಲಿಕ ಶ್ರೀಮಂತಿಕೆಯನ್ನು ಅನುಭವಿಸಲು ಬಡವನೂ ಮೊದಲಬಾರಿಗೆ ಸಿಗರೇಟ್ ಹಿಡಿಯುತ್ತಾನೆ. ಆಗ ಅವನಿಗೆ ಸುಖ ತಟ್ಟುತ್ತದೆ ಎಂದು ಹೇಳಬರುವುದಿಲ್ಲ. ಕೆಟ್ಟಕೆಟ್ಟದಾಗಿ ಕೆಮ್ಮುವಂತಾದರೂ, ಮನಸ್ಸಿನಲ್ಲಿ ಅವನಿಗೆ ಏನನ್ನೋ ಸಾಧಿಸಿದ ಹಿಗ್ಗು ಇರುತ್ತದೆ. ಸ್ವಲ್ಪ ಅಭ್ಯಾಸವಾದ ಮೇಲೆ ತುಸು ಸುಖವನ್ನು ನೀಡುತ್ತದೆ. ಆ ಹೊತ್ತಿಗೆ ಅಭ್ಯಾಸವು ಒಂದು ಚಟವಾಗಿಬಿಡುತ್ತದೆ. ಬೇಸರ ಮೂಡಿದಾಗ ಸಿಗರೇಟ್ ಹಚ್ಚಿದರೆ ಬೇಸರವೂ ಹೊಗೆಯಾಗಿ