ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೧೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಆತಂಕ
೮೫

ಹೋಗುತ್ತದೆ. ಆನಂತರ ಚಟವು ದುಶ್ಚಟವಾಗುತ್ತದೆ. ಸೇದುವುದರಿಂದ ಸುಖವಾಗದೆ ಇರಬಹುದು. ಆದರೆ ಸೇದದೇ ಇದ್ದರೆ ತುಂಬಾ ತಳಮಳವಾಗುತ್ತದೆ. ಸಿಗರೇಟನ್ನು ಸಾಲ್‌ಸಾಲಾಗಿ ಸೇದುವವರಿಗೆ ಸುಖವೆಲ್ಲಿಂದ ಬಂತು ! ದುಶ್ಚಟದಿಂದಾಗುವ ತಳಮಳವು ತಪ್ಪಿತು. ದುಶ್ಚಟದ ಈ ಹಂತದಲ್ಲಿ ಮೇಲಿಂದ ಮೇಲೆ ಸಿಗರೇಟ್ ಸೇದುವುದರಿಂದ, ನಿಕೋಟೀನ್ ವಸ್ತುವು ದೇಹಕ್ಕೆ ಹೆಚ್ಚು ಪ್ರಮಾಣದಲ್ಲಿ ಸೇರುವುದರಿಂದ ಎದೆ ಡಬ ಡಬ ಹೊಡೆದುಕೊಳ್ಳುತ್ತದೆ. ತೀವ್ರ ಆತಂಕದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.

ಬೇಸರ, ಕಿರಿಕಿರಿ ಇವೆಲ್ಲವೂ ಆತಂಕಕ್ಕೆ ಸೋಪಾನಗಳಿದ್ದಂತೆ. ಕೆಲವು ಚಟಗಳು ಇವನ್ನು ಕಡಿಮೆ ಮಾಡಬಹುದು. ಆದರೆ ದುಶ್ಚಟಗಳ ಹಂತಕ್ಕೆ ಏರಿದಾಗ, ಆತಂಕವನ್ನೇ ಮೂಡಿಸುತ್ತವೆ.

ಪರೀಕ್ಷೆಯ ಆತಂಕ

ಎಷ್ಟು ಜಾಣ ಹುಡುಗ ಅಂತ, ಎಸ್.ಎಸ್.ಎಲ್.ಸಿ.ಯಲ್ಲಿ ರಾಜ್ಯಕ್ಕೆ ಪ್ರಥಮ ಬ್ಯಾಂಕ್ ಗಳಿಸಿದ್ದ. ತಂದೆಯನ್ನು ಕಳೆದುಕೊಂಡಿದ್ದ ಹುಡುಗ, ತಾಯ ಕಣ್ಮಣಿಯಾಗಿ ಬೆಳೆದು ಓದುತ್ತಿದ್ದ. ಎರಡು ಬಾರಿ ಹುಡುಗನೇನಾದರೂ ಸೀನಿದರೆ, ತತ್‌ಕ್ಷಣ ಅವನನ್ನು ಡಾಕ್ಟರ ಬಳಿಗೆ ತಾಯಿಯು ಕರೆದುಕೊಂಡು ಓಡುತ್ತಿದ್ದಳು. ಜ್ವರವೇನಾದರೂ ಹುಡುಗನಿಗೆ ಬಂದರೆ, ಅವನ ಪಕ್ಕದಲ್ಲಿ ತಾಯಿ ಹಗಲು ರಾತ್ರಿ ಠಿಕಾಣಿ ಹಾಕುತ್ತಿದ್ದಳು. ಡಾಕ್ಟರುಗಳು ಔಷಧಿಗಳು ಟಾನಿಕುಗಳು ಬಾಲ್ಯದಿಂದಲೂ ಅವನಿಗೆ ಮಾಮೂಲು. ಅದು ಕಟ್ಟಳೆಯಂತೆ ದಿನವೂ ನಡೆದ ಮೇಲೆ ಊಟ, ತಿಂಡಿ, ಬಟ್ಟೆ ಬರೆ, ಬಿಸಿಲುಗಾಲದಲ್ಲೂ, ಅವ ಸ್ವೆಟರ್ ಹಾಕಲೇಬೇಕು. ಛಳಿಗಾಲದಲ್ಲನಕ, ಅಂಗಿ ಮೇಲೆ ಅಂಗಿ, ಶಾನುಭೋಗನ ತಂಗಿಯೂ ಇವನನ್ನು ನೋಡಿ ನಗುವಂತಿತ್ತು. ಇದೆಲ್ಲವೂ ಆದ ಮೇಲೆ ಪುಸ್ತಕ ಓದು ; ಸ್ಕೂಲು, ಮನೆ ಪಾಠ ; ಇವುಗಳತ್ತ ಗಮನ, ತಾಯ ಮಡಿಲಿನಲ್ಲಿ ಹೀಗೆ ಬೆಳೆದುಬಂದ ನಮ್ಮ ಹುಡುಗ, ಹದಿನೈದು ಚೈತ್ರಗಳು ಸಂದಿದ್ದರೂ, ಬಚ್ಚಲಮನೆಗೆ ರಾತ್ರಿಯಲ್ಲಿ ಹೋಗಬೇಕಾದರೆ, ಬಾಗಿಲ ತನಕ ತಾಯಿಯು ಬಂದಿರಬೇಕು. ಅಲ್ಲೇ ನಿಂತೂ ಇರಬೇಕು. 'ಇಲ್ಲದೆ ಇದ್ದರೆ ಗೊಗ್ಗಯ್ಯ ಬಂದು ಕತ್ತಲಲ್ಲಿ ಹಿಡಿದುಕೊಂಡು ಬಿಟ್ಟರೆ ?' ಹೀಗಂತ ಹುಡುಗ ಬಾಯಿ ಬಿಟ್ಟು ಹೇಳದೇ ಇದ್ದರೂ ಆಳ ಮನಸ್ಸಿನಲ್ಲಿದ್ದ ಅಧೈರ್ಯವನ್ನು ನಡವಳಿಕೆಯಲ್ಲಿ ತೋರಿಸಿಕೊಳ್ಳುತ್ತಿದ್ದ.