ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೧೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೮೬
ಮನಮಂಥನ

ಪಿ.ಯು.ಸಿ. ಪರೀಕ್ಷೆಗೆ ಕಟ್ಟಿದ್ದಾನೆ. ಚೂಟಿಯಾಗಿ ಓದುತ್ತಲೂ ಇದ್ದಾನೆ. ಪರೀಕ್ಷೆಯು ಹತ್ತಿರ ಹತ್ತಿರಕ್ಕೆ ಬಂತು. 'ಜಾಣ ನೀನು, ರಾಂಕ್ ಬರದೇ ಇದ್ದರೂ ಫಸ್ಟ್ ಕ್ಲಾಸ್ ಸಿಗಿದು ಹಾಕುತ್ತೀ' ಎಂದು ತಾಯಿಯೂ ದಿನಕ್ಕೆ ಹತ್ತು ಸರ್ತಿ ಯಾದರೂ ಹೇಳುತ್ತಿದ್ದಾಳೆ. ನೆಂಟರಿಷ್ಟರೂ ಹುಡುಗನ ಜಾಣತನವನ್ನು ಹೊಗಳಿದ್ದೂ ಹೊಗಳಿದ್ದೇ. ಮನೆಗೆ ಬಂದ ನೆರೆಹೊರೆಯವರು ಹುಡುಗನನ್ನು ತಾಯಿಯೆದುರಿಗೆ ಅಟ್ಟಕ್ಕೇರಿಸುತ್ತಿದ್ದರು. ತಿಂಗಳಿಗೆ ಒಂದೆರಡು ಬಾರಿಯಾದರೂ ತಾಯಿಯು, ಮಗನಿಗೆ ಬಡಿದಿರಬಹುದಾದ ದೃಷ್ಟಿಯನ್ನು ತೆಗೆಯಲೋಸುಗ, ಮುಖಕ್ಕೆ ಕಸಪರಿಕೆ ನೀವಳಿಸಿ, ಮೂಲೆಯಲ್ಲಿಟ್ಟು ಚಟಪಟ ಸುಡುತ್ತಿದ್ದಳು.

ಪರೀಕ್ಷೆಗೆ ಇನ್ನು ಮೂರು ದಿನಗಳಿವೆ. ಪುಸ್ತಕಗಳನ್ನು ಎದುರಿಗಿಟ್ಟುಕೊಂಡು ಓದುತ್ತಿದ್ದ ಹುಡುಗ ತಟ್ಟನೆ ಪುಸ್ತಕಗಳನ್ನು ದೂಡಿ, ಎರಡೂ ಕೈಗಳಲ್ಲಿ ತಲೆಯನ್ನು ಭದ್ರವಾಗಿ ಹಿಡಿದುಕೊಂಡು, 'ಅಮ್ಮಾ ಅಮ್ಮಾ ತಲೆ ತುಂಬಾ ಸಿಡೀತಾ ಇದೇಮ್ಮಾ; ಕಣ್ಣು ಮಂಜಾಗುತ್ತಾ ಇದೆ' ಎಂದು ಕೆಟ್ಟದಾಗಿ ಕಿರುಚಿಕೊಂಡ. ಅಮ್ಮ ಗಾಬರಿಯಾದಳು. ಓಡಿಹೋಗಿ ಆಟೋರಿಕ್ಷಾ ತಂದಳು. ಡಾಕ್ಟರ ದವಾಖಾನೆಗೆ ಕೆಟ್ಟೆನೋ ಬೆಂದೆನೋ ಅಂತ ಹೋದಳು. ಹುಡುಗನನ್ನು ಡಾಕ್ಟರು ಪರೀಕ್ಷೆ ಮಾಡಿದರು. 'ಏನೂ ಆಗಿಲ್ಲವಮ್ಮಾ ರಾತ್ರಿಯೆಲ್ಲಾ ನಿದ್ರೆಗೆಟ್ಟು ಓದುತ್ತಾನೆ ಅಂತ ಕಾಣುತ್ತೆ. strain ಆದ ಹಾಗಿದೆ ಈ ಇನ್ಸಕ್ಷನ್ ಕೊಡ್ತೀನಿ : ಈ ಮಾತ್ರೆಗಳನ್ನು ತರಿಸಿಕೊಡಿ. ಇವತ್ತು ಹೆಚ್ಚು ಹೊತ್ತು ಓದುವುದು ಬೇಡ' ಎಂದು ಹೇಳಿ ಚಿಕಿತ್ಸೆಯನ್ನು ನಡೆಸಿದರು. ಡಾಕ್ಟರನ್ನು ಕಂಡಾಗಲೇ ಹುಡುಗನಿಗೆ ಸ್ವಲ್ಪ ಧೈರ್ಯ ಮೂಡಿತ್ತು. ಶೈಶವದಿಂದಲೂ ಕಂಡಿದ್ದ ಡಾಕ್ಟರು, ತುಂಬು ನಂಬಿಕೆಯೂ ಇತ್ತು. ಕಾರಣ, ತಲೆ ಸಿಡಿತವು ದವಾಖಾನೆಗೆ ಹೋದ ಕೂಡಲೆ ಇಳಿಯತೊಡಗಿತ್ತು. ಡಾಕ್ಟರು ಇದ್ದಕ್ಷನ್ನನ್ನು ಕೊಟ್ಟಾಗ ಆ ನೋವಿನಲ್ಲಿ ತಲೆ ಸಿಡಿತವು ಮಾಯವಾಗಿತ್ತು. ಅದಕ್ಕಿಂತಲೂ ಮುಖ್ಯ ಎಂದರೆ, ಪಟ್ಟಾಗಿ ಕೂತು ಓದುವ ಹೊಣೆಯು ಸಡಿಲಗೊಂಡಿತ್ತು. ಮನೆಗೆ ಹಿಂತಿರುಗಿದ. ಮಲಗಿ ನಿದ್ರೆ ಮಾಡಿದ, ಬೆಳಿಗ್ಗೆ ಎದ್ದಾಗ ಬಲು ಲವಲವಿಕೆಯಾಗಿದ್ದ. ಅಚ್ಚುಕಟ್ಟಾಗಿ ಅಮ್ಮ ಕೊಟ್ಟ ಕಾಳುಪ್ಪಿಟ್ಟನ್ನು ತಿಂದ, ನಂತರ ಪುಸ್ತಕಗಳನ್ನು ಎದುರಿಗಿಟ್ಟುಕೊಂಡು ಕುಳಿತ. ಪರೀಕ್ಷೆ-ಫಸ್ಟ್ ಕ್ಲಾಸ್-ಬ್ಯಾಂಕ್-ಅವರಿವರ ಹೊಗಳಿಕೆ-ಅಮ್ಮನ ಆಸೆ ಎಲ್ಲವೂ ಅರೆಕ್ಷಣ ಸ್ಮರಣೆಗೆ ಬಂತು. ಹತ್ತು ಹದಿನೈದು ನಿಮಿಷ ಹಟ ಹಿಡಿದು ಕೂತುಕೊಂಡು ಓದಿದ. ತಿರುಗಿ ತಲೆ ಸಿಡಿಯುಕ್ಕೆ ಆರಂಭವಾಯಿತು. 'ಅಮ್ಮಾ ಅಮ್ಮಾ' ಎಂದು ಕಿರುಚಿದ. ಅಮ್ಮ ಬಂದಳು, ಮಗನ ಮುಖ ನೋಡಿದಳು. ಓಡಿಹೋಗಿ ಡಾಕ್ಟರನ್ನ