ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೧೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೮೮

ಮನಮಂಥನ

ಸಮಾಧಾನ ಹೇಳಿಕೊಳ್ಳುತ್ತಾರೆ. ಡೋಲಾಯಮಾನದ ಮನಸ್ಸಿನ ಈ ಸ್ಥಿತಿಯೇ ಆತಂಕಕ್ಕೆ ಕಾರಣ. ಬ್ಯಾಂಕ್ ಗಿಟ್ಟಿಸಿದರೆ ಅಮ್ಮ ಮೆಚ್ಚುತ್ತಾಳೆ, ಹಿಗ್ಗುತ್ತಾಳೆ. ಏನೆಲ್ಲಾ ಕಷ್ಟಪಡುತ್ತಿದ್ದಾಳೆ, ನನ್ನಸಲುವಾಗಿ, ಅವಳಿಗೆ ಸಂತೋಷವನ್ನುಂಟುಮಾಡಬೇಕು ಎನ್ನುವ ತೀವ್ರ ಆಸೆಯು, ಇದ್ದ ಆತಂಕವನ್ನು ಕೆರಳಿಸುತ್ತದೆ.

ವಿದ್ಯಾರ್ಥಿಯ ಪೌಗಂಡ ವಯಸ್ಸಿನಲ್ಲಿ, ವ್ಯಕ್ತಿತ್ವವು (Personality) ಪರಿಪೂರ್ಣವಾಗಿರುವುದಿಲ್ಲ (Maturity) ಜೀವನದ ವಾಸ್ತವಿಕ ಅನುಭವಗಳಿಂದ ಹದಗೊಂಡಿರುವುದಿಲ್ಲ. ಇತರರಿಗಿಂತ ಎತ್ತರದಲ್ಲಿರಬೇಕು ಎನ್ನುವ ಧೈಯವೊಂದು ಬಲವಾಗಿರುತ್ತದೆ. ಹಾಗಾಗಿ ವಾಸ್ತವಿಕ ಪ್ರಪಂಚದ ಆಗುಹೋಗುಗಳು ಸ್ಪಷ್ಟವಾಗಿ ಕಾಣಿಸುವುದಿಲ್ಲ. ಪರೀಕ್ಷೆಗಳಲ್ಲಿ ಜಾಣ ಹುಡುಗರು ಮುಗ್ಗರಿಸುವುದೂ, ಮಂಕು ಬಡ್ಡಿಗಳು ಫಸ್ಟ್ಕ್ಲಾಸ್ ಪಡೆಯುವುದೂ, ಅವರ ಗಮನಕ್ಕೆ ಬರುತ್ತದೆ. ಪ್ರೈವೇಟ್ ಟ್ಯೂಷನ್, ಜಾತಿ, ಕುಲ, ಲಂಚ ರುಷುವತ್ತು ; ಇತ್ಯಾದಿ ಸಬೂಬುಗಳನ್ನು ಪರೀಕ್ಷೆಯ ಫಲಿತಾಂಶಗಳಿಗೆ ಲಗತ್ತಿಸಿರುತ್ತಾರೆ. ಆಗ ಅವರ ಮನಸ್ಸಿಗೆ ಸ್ವಲ್ಪ ಸಮಾಧಾನವು ದೊರಕುತ್ತದೆ. ಈ ವಿಚಾರಸರಣಿಯು, ಸ್ವಂತ ಪ್ರಯತ್ನದಿಂದ ಯಾವ ಮೆಹನತ್ತೂ ದೊರಕಲಾರದು ಎಂಬ ಜುಗುಪ್ಪೆಯನ್ನು ಉಂಟುಮಾಡುತ್ತದೆ. ಇತ್ತ ಜುಗುಪ್ಪೆ ; ಅತ್ತ ಆಸೆ. ಇವೆರಡರ ಜಗ್ಗಾಟದಲ್ಲಿ ಆತಂಕ ಕಾಣಿಸಿಕೊಳ್ಳುತ್ತದೆ. ಆತಂಕದಿಂದಲೂ ಪ್ರಯೋಜನವು ಉಂಟು, ಹೇಗೆ ಅನ್ನಿ.

ಆತಂಕದ ಫಲವಾಗಿ ದೇಹದಲ್ಲಿ ಬೇನೆಯು ಕಾಣಿಸಿಕೊಳ್ಳುತ್ತದೆ. ಬೇನೆಯ ನೆಪದಿಂದ, ಪರೀಕ್ಷೆಯಲ್ಲಿ ಯಶಸ್ವಿಯಾಗುವ ಹೊಣೆಯು ಕಡಿಮೆಯಾಗುತ್ತದೆ. ಮನೆಯ ಹಿರಿಯರ ಮನ್ನಣೆಯನ್ನು ಕಳೆದುಕೊಳ್ಳಬೇಕಾಗಿಲ್ಲ. ಹೀಗಾಗಿ ಮನಸ್ಸಿನಲ್ಲಿ ಸಮಾಧಾನವೂ ಮೂಡುತ್ತದೆ.

ಮನಸ್ಸಿನಲ್ಲಿ ಆತಂಕವು ಮೂಡಿದರೆ, ದೇಹದಲ್ಲಿ ಜ್ವರ ಏಕೆ ಕಾಣಿಸಿಕೊಳ್ಳಬೇಕು ? ಎಂದು ಅನುಮಾನ ಬರಬಹುದು. ಸಾಮಾನ್ಯವಾಗಿ ಜ್ವರ ಬರಬೇಕಾದರೆ ಬ್ಯಾಕ್ಟಿರಿಯಾಗಳೋ ಅಥವಾ ವೈರಸ್‌ಗಳೋ ಹಾಗೂ ಇತರ ಪೋಟೋಜೂ ಆಗಳೂ ಸೋಂಕಿರಬೇಕು. ಅವುಗಳ ಸೋಂಕಿರದಿದ್ದರೂ ಜ್ವರ ಬರಬಹುದು. ದೇಹದ ಉಷ್ಣವನ್ನು ಒಂದು ಹಂತದಲ್ಲಿ ಸರಿಯಾಗಿರಿಸಲು, ಕೆಲವು ನರಕೇಂದ್ರಗಳು ಹೊಣೆ ಹೊತ್ತಿರುತ್ತವೆ. ಈ ಕೇಂದ್ರಗಳು ಮೆದುಳಿನ ಬುಡದಲ್ಲಿವೆ. (Thermotaxic centres), ಆತಂಕವು ತೀವ್ರವಾದಾಗ ಮೆದುಳಿನ ತಲಾಮಸ್ ಮತ್ತು ಸ್ವಯಂಚಾಲಿತ ನರಗಳ ಮೂಲಕ (Autonomic nerves) ಅದು ದೇಹಕ್ಕೆ ವಕ್ತಿಸುತ್ತದೆ. ಆಗ ಎದೆಯು ಡಬಡಬ ಮಾಡುತ್ತದೆ. ಉಸಿರಾಡುವುದು