೮೯
ಮೇಲೇಲಾಗುತ್ತದೆ, ಇತ್ಯಾದಿ. ಇದು ದೇಹದಲ್ಲಾಗುವ ಕಾರ್ಯಕ್ರಮ. ಕೆಲವೊಂದು ವೇಳೆ, ಹಲವರಲ್ಲಿ, ಆತಂಕವು ತೀವ್ರವಾದಾಗ, ತಲಾಮಸ್ಸಿಗೆ ಹರಡಿದಾಗ, ಉಷ್ಣ ಸಮತೋಲನ ಕೇಂದ್ರಗಳಿಗೂ ಪಸರಿಸುತ್ತದೆ. ಕೆರಳಿದ ಆ ಕೇಂದ್ರಗಳು ಉಷ್ಣವನ್ನು ಉತ್ಪಾದಿಸುತ್ತವೆ, ಜ್ವರವು ಕಾಣಿಸಿಕೊಳ್ಳುತ್ತದೆ.
ಲಕ್ಷ ಜನ ಜ್ವರ ಬಂದವರಲ್ಲಿ, ಆತಂಕದಿಂದಾಗಿ ಜ್ವರ ಬರುವುದು ಒಬ್ಬಿಬ್ಬರಲ್ಲಿ ಮಾತ್ರ ಅತಿ ವಿರಳವಾಗಿ ಹೀಗಾಗುವುದಾದರೂ, ಹೀಗಾಗಬಹುದು ಎಂಬುದನ್ನು ಮರೆಯಬಾರದು.
ಸ್ಪರ್ಧೆಯ ದಿಗ್ಭ್ರಮೆ:
ಐ.ಎ.ಎಸ್. ಪರೀಕ್ಷೆಗೆ ಕೂತಿದ್ದ ನಮ್ಮ ಭೈರಪ್ಪ. ಜೂಆಲಜಿ ಆನರ್ಸ್‌ನಲ್ಲಿ ಬ್ಯಾಂಕ್ ಪಡೆದಿದ್ದವ, ಇಂಗ್ಲೀಷಿನಲ್ಲಿ ಅಸಾಧಾರಣ ಪಾಂಡಿತ್ಯವಿತ್ತು. ಅಂತ ವಿಶ್ವವಿದ್ಯಾಲಯಗಳ ಟೆನ್ನಿಸ್ ಚಾಂಪಿಯನ್ ಆಗಿದ್ದ ವಾಗ್ಮಿ, ಇಷ್ಟರ ಜತೆಗೆ ಅವರ ತಂದೆ ದೊಡ್ಡ ಶ್ರೀಮಂತ, ಅಂತಹವರ ಮಕ್ಕಳಿಗೆ ತಾನೇ ದೇವರು, ಸ್ಪರ್ಧಾ ಪರೀಕ್ಷೆಗಳಲ್ಲಿ ಬ್ಯಾಂಕ್ ಕೊಡಿಸುವುದು !
ಪರೀಕ್ಷೆಗೆ ಇನ್ನು ಹದಿನೈದು ದಿನಗಳಿವೆ ಎನ್ನುವಾಗ ಭೈರಪ್ಪನಿಗೆ, ಎಲ್ಲ ಸ್ಪರ್ಧಿಗಳಿಗೂ ಇರುವಂತೆ ಆತಂಕವು ಇತ್ತು, ಅಷ್ಟು ಇರಬೇಕಾದದ್ದೇ. ದಿಳ್ಳಿಯಲ್ಲಿ ಓದುತ್ತಿದ್ದ, ಪರೀಕ್ಷೆಯನ್ನು ಅಲ್ಲೇ ಏರ್ಪಡಿಸಿಕೊಂಡಿದ್ದ. ಹಳೆಯ ಸ್ನೇಹಿತ ರಾಜಾರಾಂ ಅವನ ರೂಂಮೇಟ್ ಆಗಿದ್ದ.
ಭೈರಪ್ಪನ ತಂದೆಗೆ ರಾಜಾರಾಂ ಒಂದು ತುರ್ತು ತಂತಿ ಕಳಿಸಿದ. 'ಈಗೊಂದೆರಡು ದಿನಗಳಿಂದ ಭೈರಪ್ಪ ಒಂದು ತುತ್ತು ಉಂಡಿಲ್ಲ. ಒಂದು ಕ್ಷಣ ಮಲಗಿ ನಿದ್ರೆ ಮಾಡುವುದಿಲ್ಲ. ಸುಮ್ಮನೆ ಥರಪರಗುಟ್ಟುತ್ತಾನೆ. ತತ್‌ಕ್ಷಣ ಬನ್ನಿ' ಅಂತ. ಸರ್ವಸಾಹಸ ಮಾಡಿ ಅವತ್ತೇ ದಿಳ್ಳಿಗೆ ವಿಮಾನದಲ್ಲಿ ಸೀಟು ಗಿಟ್ಟಿಸಿ ಹೊರಟರು.
ಮಾರನೆಯ ದಿನ ಭೈರಪ್ಪನನ್ನು ಕರೆದುಕೊಂಡು ದೊಡ್ಡಾಸ್ಪತ್ರೆಗೆ ಹೋದರು. ಅಲ್ಲಿ ಮೈಸೂರಿನ ಡಾಕ್ಟರು ಇರುವುದರಿಂದ ಏನೋ ನಿಧಿ ಸಿಕ್ಕಿದಂತಾಗಿತ್ತು, ಭೈರಪ್ಪನ ತಂದೆಗೆ. ಭೈರಪ್ಪನಿಗೆ ತೀವ್ರ ತಳಮಳವಾಗಿದೆ ಎನ್ನುವುದು ಡಾಕ್ಟರಿಗೆ ಸ್ಪಷ್ಟವಾಯಿತು. "ಯಾಕೆ ಹೀಗಾಗಿದೆ, ಹಠಾತ್ತಾನೆ ಹೀಗಾಯಿತೇ ? ಏನಾದರೂ ಔಷಧಿ ಗಿವಧಿ ಸೇವಿಸುತ್ತಿದ್ದೆಯಾ ?' ಎಂದು ಅತ್ಯಾದರದಿಂದ, ಸಹಾನುಭೂತಿಯಿಂದ ಡಾಕ್ಟರು ಕೇಳಿದರು. ಇಂತಹ ಪರಿಸ್ಥಿತಿಗಳಲ್ಲಿ ಕೇಳಿದ ಮಾತುಗಳಿಗಿಂತ ಆಡುವ