ಮನಮಂಥನ
ರೀತಿಯು ಅತ್ಯಂತ ಫಲದಾಯಕ. ಭೈರಪ್ಪ ಹೇಳಿದ- 'ಈಗ ಎರಡು ಮೂರು ದಿನಗಳಿಂದ ಎಲ್ಲವೂ ಮರೆತುಹೋಗುತ್ತಾ ಇದೆ. ಹತ್ತು ಸರ್ತಿ ಓದಿರ್ತಿನಿ, ಬೆಳಿಗ್ಗೆ ತಿರುಗಿ ಆ ಪುಸ್ತಕವನ್ನು ತಿರುಗಿ ಹಾಕಿರ್ತಿನಿ. ಅರ್ಧ ಗಂಟೆಯ ಮೇಲೆ ಜ್ಞಾಪಿಸಿಕೊಳ್ಳಲು ಹೋದರೆ, ಒಂದು ವಿಷಯವೂ ನೆನಪಿಗೆ ಬರುಲ್ಲ. ಇನ್ನು ಪರೀಕ್ಷೆಗೆ ಕೂತೇನು ಪ್ರಯೋಜನ ? ಪುಸ್ತಕಗಳನ್ನು ನೋಡಿದರೆ ಹೇಗೆ ಹೇಗೋ ಆಗುತ್ತೆ, ಮೈಯಲ್ಲೆಲ್ಲಾ ನಡುಕ ಹುಟ್ಟುತ್ತೆ ಹಾಳಾಗಿ ಹೋಗಲಿ, ಪರೀಕ್ಷೆ ಅಂತ ಮಲಗಿದರೆ, ನಿದ್ರೇನೇ ಬರುಲ್ಲ. ಏನೋ ಆಗಿಹೋಗಿದೆ ಡಾಕ್ಟರೇ ! ಹುಚ್ಚು ಹಿಡಿದಿದೆಯೇನೋ ಎಂದು ಗಾಬರಿಯಾಗ್ತಾ ಇದೆ' ಎಂದು ಹೇಳಿದ. ವಾರಣವಾಗಿ ಆಗುತ್ತಿದ್ದುದನ್ನು ಲಕ್ಷಣವಾಗಿ ವಿವರಿಸಿದ.
ಮಗನ ಕಾತರದ ಮುಖವನ್ನು, ಎರಡು ದಿನದ ಗಡ್ಡ ಬೆಳೆದಿರುವುದನ್ನೂ ಕಂಡು ಕಂಗಾಲಾಗಿದ್ದ ತಂದೆ. “ಐ.ಎ.ಎಸ್. ಪ್ಯಾಸಾಗಿ ನಿಂಗೇನಾಗಬೇಕು. ನಾಲ್ಕು ಜನ ಐ.ಎ.ಎಸ್. ಗಳನ್ನ ನಮ್ಮ ದುಖಾನ್‌ನಲ್ಲಿ ನೌಕರಿಗೆ ಇಟ್ಟುಕೋಬಹುದು. ಇದಕ್ಯಾಕೆ ನೀ ಒದ್ದಾಡ್ತೀ ! ತೆಗೀತು, ಬಿಡು, ಪರೀಕ್ಷೇನೂ ಬೇಡ, ಡಾಕ್ಟರ ಹತ್ತಿರ ಔಷಧಿ ತಕ್ಕೊಂಡು, ಗುಣ ಆಗ್ತಿದ್ದಾಗೇ ಊರಿಗೆ ಹೋಗೋಣ' ಎಂದರು.
'ಯಾವ ಪರೀಕ್ಷೇಲೂ ಎಂದೂ ಜಾರಿಲ್ಲ. ಈಗ ಹೆದರಿಕೊಂಡು ಹೋಗು ಅಂತ ಯಾಕಂತೀ, ಅಪ್ಪಾ ! ನಂಗೆ ಅವಮಾನ ಆಗುಲ್ವ! ಕೆಂಚಪ್ಪ ನಮ್ಮನ್ನೊಡಿ ನಗುಲ್ವಾ' ಎಂದು ಅಳುದನಿಯಲ್ಲಿ ಭೈರಪ್ಪ ಅಂದ.
'ಕೆಂಚಪ್ಪ ಯಾರು ?' ಎಂದು ಡಾಕ್ಟರು ಕೇಳಿದರು.
'ಕೆಂಚಪ್ಪ ನಮ್ಮ ದಾಯಾದಿ, ಅವನ ಮಗ ಹೋದ ವರ್ಷ ಐ.ಎ.ಎಸ್. ಪ್ಯಾಸ್ ಮಾಡಿದ. ಬಲು ಬಡಾಯಿ ಮಾತಾಡ್ತಾನೆ ಕೆಂಚಪ್ಪ. ಗಟ್ಟಿಕುಳ ಏನಲ್ಲ. ಇವತ್ತಿಗಿದ್ದರೆ ನಾಳೆಗಿಲ್ಲ. ಆದರೆ ಅದೇನು ಬಡಾಯಿ ಅಂತ ; ನನ್ನ ಮಗ ಹಾಗೆ ಹೀಗೆ ಅಂತ ಕೊಚ್ಚಿಕೋತಾನೆ. ಅವನ ಮಾತನ್ನ ಭೈರಪ್ಪ ಯಾಕೆ ಎತ್ತಿದನೋ ನಾಕಾಣೆ' ಎಂದರು ತಂದೆ.
'ನೋಡು ಮಗಾ, ಐ.ಎ.ಎಸ್. ಆಗಲೇಬೇಕು ಅಂತ ನಿನ್ನ ಹಟ ಇದ್ದರೆ, ಅದೂ ಆಗಲಿ. ಆದರೆ ಈಗ ಸ್ವಸ್ಥವಾಗಿಲ್ಲ ನೀನು ! ಮುಂದಿನ ವರ್ಷ ಪರೀಕ್ಷೆಗೆ ಕೂತರಾಯಿತು. ಇನ್ನೂ ಎರಡು ಸಲ ಕೂರಬಹುದಲ್ಲ ನೀನು. ಈ ವರ್ಷಾನೇ ಆಗಬೇಕು ಅಂತ ಏನು ಶಾಸ್ತ್ರ !' ಎಂದರು ತಂದೆ.
ಆಗ ಡಾಕ್ಟರು ಅಂದರು, ಭೈರಪ್ಪ, ನೀ ಓದಿದೋನು. ಸ್ಪರ್ಧಾಪರೀಕ್ಷೆಯ ಆತಂಕವು ಅತಿಯಾಗಿದೆ, ದಿಗ್ಭ್ರಮೆ ಹಿಡಿಸಿದೆ. ಕೆಂಚಪ್ಪನ ಮಗ ನಿನ್ನ ಆತಂಕಕ್ಕೆ