ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮುನ್ನುಡಿ 'ಮನಮಂಥನ' ಮಾನಸಿಕ ಬೇನೆಗಳ ಪರಿಚಯ, ಮತ್ತು ಮನಸ್ಸಿನ ಸ್ಕೂಲ ಪರಿಚಯ ಮಾಡಿಕೊಡುವ ಒಂದು ಉಪಯುಕ್ತ ಮತ್ತು ಮೌಲಿಕ ಪುಸ್ತಕ. 'ಮನಸ್ಸು ಗಟ್ಟಿ ಮಾಡಬೇಕು' ಎನ್ನುವ ಮಾತನ್ನು ಕೇಳುತ್ತೇವೆ. ಈ ಚಂಚಲ ಸ್ವಭಾವದ ಮೃದು ಮತ್ತು ಮೆದುವಾದ ಮನಸ್ಸಿನ ರಕ್ಷಣೆ ಹೇಗೆ ಮಾಡಬೇಕೆಂಬುದೇ ಒಂದು ಶಾಸ್ತ್ರ, ಒಂದು ಅಭ್ಯಾಸ. ನಮ್ಮ ಋಷಿಗಳು, ಧರ್ಮಶಾಸ್ತ್ರಕಾರರು ಈ ದಿಸೆಯಲ್ಲಿ ಕೆಲಸ ಮಾಡಿದ್ದಾರೆ. ತಾವು ಕಂಡ ದರ್ಶನವನ್ನು ನಮಗೆ ನೀಡಿದ್ದಾರೆ. ಅದರ ವಿವರಗಳನ್ನು ಇಂದು ನಾವು ನಾಗರಿಕ ಗಾಜಿನ ಕಣ್ಣಿನಿಂದ ನೋಡುತ್ತೇವೆ. ಅದರಿಂದ ಕಣ್ಣಿಗೆ ದೃಷ್ಟಿಗೆ ಸ್ವಚ್ಛತೆ ಬರದೆ 'ಪರೆ' ಎಳೆದಂತಾಗಿದೆ. ಆದರೆ ವೈಜ್ಞಾನಿಕ ದೃಷ್ಟಿಯಿಂದ ಮಾನಸಿಕ ಚರ್ಯೆಯನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಹಿಂದಿನ ಸಂಪ್ರದಾಯಕ್ಕೆ ಹೋಲಿಸಿ ವಿವೇಚಿಸಿದರೆ ಅದರ ಸತ್ಯತೆ ಕಂಡುಬರುತ್ತದೆ; ಸತ್ಯ ಒಂದೇ ಆದರೆ ಹೇಳುವ ರೀತಿ ಮತ್ತು ಕ್ರಮ ಬೇರೆ ಎಂಬುದು ಹುಚ್ಚು ಬೆಪ್ಪು, ಶಿವಲೀಲೆಗಳಾಗಲಿ, ಭೂತ, ಪಿಶಾಚಿ, ಭಯ ಮುಂತಾದ ಆಗೋಚರ ಪರ ಪೀಡನೆಗಳಾಗಲಿ ನಮ್ಮ ಮಾನಸಿಕ ರೋಗಗಳಲ್ಲದೆ ಬೇರೆಯಲ್ಲ ಎಂಬುದು ವೇದ್ಯವಾಗದೆ ಇರಲಾರದು. ಆದರೆ ಇವುಗಳಿಗೆ ನಮ್ಮ ಸಮಾಜದ ಪದ್ಧತಿಗಳು, ಆರ್ಷೇಯ ನಂಬಿಕೆಗಳು, ಬೆಳೆದ ವಾತಾವರಣ, ಪರಂಪರಾಗತವಾದ ರೋಗಾಂಶಗಳು, ಕಂಡ ದೃಶ್ಯ, ಕೇಳಿದ ಕಥೆ, ಕಲ್ಪಿಸಿದ ಭಯ, ಊಹಿಸಿಕೊಂಡ ರೋಗಗಳೇ ಮೂಲ ಹೇತುಗಳಾಗುವುದರಲ್ಲಿ ಸಂದೇಹವಿಲ್ಲ. ಭೂತೋಚ್ಚಾಟನೆ, ಮಂತ್ರ ಪರಿಹಾರ, ಸೇವಾ ಮನಸ್ಸು ಮುಂತಾದ ಚಿಕಿತ್ಸೆಯ ಅಂಧ ಕ್ರಮ, ರೂಢಮೂಲವಾದ ನಂಬಿಕೆಯ ಪದ್ಧತಿಗಳು ಇಂದು ನಮಗೆ ಮೂಢನಂಬಿಕೆಗಳಾಗಿ ಕಾಣಿಸಬಹುದು. ಆದರೂ ಒಂದು ಕಾಲಕ್ಕೆ ಅವು ರೋಗಚಿಕಿತ್ಸಾ ಕ್ರಮಗಳೇ. ವಿಜ್ಞಾನದೃಷ್ಟಿ ಬೆಳೆದಂತೆ ಇವುಗಳ ಮೌಲ್ಯವೂ ಕಡಮೆಯಾಗಿ, ಅವುಗಳಲ್ಲಿ ನಂಬಿಕೆಯೂ ಹೋಗಿ ಅವು ಹುಚ್ಚು ಕಲ್ಪನೆಗಳಂತಾಗಿವೆ. ಬೆಳೆಯುವ ಸಮಾಜದಲ್ಲಿ ಅವು ಹಾಗಾಗುವುದು ಸಹಜ, ಸಮಕಲ ಕಾಸು ಚಲಾವಣೆಗೆ ಹೇಗೆ ಬರುವುದಿಲ್ಲವೋ ಹಾಗೆ, ಅಂದರೆ ಅವುಗಳನ್ನು ಈಗ ಆಚರಣೆಗೆ ತರಬೇಕೆಂಬುದಲ್ಲ. ಅವುಗಳ