೯೧
ಹುಲ್ಲು ಹಾಕ್ತಿದ್ದಾನೆ. ಅದರಿಂದಲೇ Panic ದಿಗ್ಭ್ರಮೆ ಹಿಡಿದಂತಾಗಿದೆ. ಐ.ಎ.ಎಸ್.ಗೆ ಕೂರಲೇಬೇಕು ಅಂತ ನಿನ್ನ ಹಟ ಇದ್ದರೆ, ಈ ಸರ್ತಿನೇ ಕೂರಬೇಕು. ನಾ ಚಿಕಿತ್ಸೆ ಮಾಡಿಸ್ತೀನಿ. ಪರೀಕ್ಷೆಗೆ ಕೂರು. ನಿನ್ನ ಕೈಲಾದ್ದು ಮಾಡು. ಮಸಲಾ ಜಯಬರಲಿಲ್ಲ ಅನ್ನು, ಮುಂದಿನ ಸಲ ಕೂತರಾಯಿತು. ಆದರೆ ಈ ವರ್ಷ ನೀ ಕೂರದಿದ್ದರೆ ಮುಂದಿನ ಸರ್ತಿ ಕೂರಲು ಆಗುವುದೇ ಇಲ್ಲ. ಈ ದಿಗ್ಭ್ರಮೆಯೂ ಹೊರವಾಗಿಬಿಡುತ್ತದೆ. ಭೂತವಾಗಿಬಿಡುತ್ತದೆ. ಈ ಪರೀಕ್ಷೆಯ ಆಸೆಯನ್ನು ಬಿಟ್ಟುಬಿಡುತ್ತೇನೆ ಎಂದರೆ, ಅದೂ ಸಮ. ಚಿಕಿತ್ಸೆ ಹೇಗಾಗಬೇಕು ಎನ್ನುವುದನ್ನು ಬರಸಿಕೊಡುತ್ತೇನೆ. ಊರಿಗೆ ಹೋಗಿ ಔಷಧಿ ತಕ್ಕೋ, ಮುಂದೇನ್ಮಾಡಬೇಕು ಎನ್ನುವುದನ್ನು ಆಮೇಲೆ ಯೋಚಿಸಿದರಾಯಿತು' ಎಂದು ಹೇಳಿದರು
'ಯಾಕೆ ಹಾಗಂತೀರಿ' ಎಂದು ಭೈರಪ್ಪ ಕುತೂಹಲದಿಂದ ಕೇಳಿದ. ಅವನ ಕುತೂಹಲವನ್ನು ಕಂಡು ಡಾಕ್ಟರಿಗೆ ಸಂತೋಷವಾಯಿತು. ದಿಗ್ಭ್ರಮೆಯು ಅತಿಯಾಗಿಲ್ಲ, ಹೇಳಿದ್ದನ್ನು ತಿಳಿದುಕೊಳ್ಳುವ ಸ್ಥಿತಿಯಲ್ಲಿದ್ದಾನೆ ಎಂದು ದೃಢವಾಗಿತ್ತು. ಆದಕಾರಣ ಮನಸ್ಸಿನಲ್ಲಿರುವ ಆತಂಕವು ಸ್ಪರ್ಧಾ ಸನ್ನಿವೇಶಗಳಲ್ಲಿ, ಹೇಗೆ ದಿಗ್ಧಮೆಯಾಗುತ್ತದೆ ? ಆಗ ಹೆದರಿದರೆ, ಹಿಂದೆಗೆದರೆ, ಮುಂದೆಂದೂ ಧೈರ್ಯವು ಹೇಗೆ ಮೂಡುವುದಿಲ್ಲ. ಈಗ ಧೈರ್ಯವಾಗಿ ಎದುರಿಸಿದರೆ, ಆತಂಕದ ದುಷ್ಪರಿಣಾಮವು ಶಾಶ್ವತವಾಗುವುದಿಲ್ಲ. Abreaction ಎಂದಿದನ್ನು ಕರೆಯುತ್ತಾರೆ ಎಂದೆಲ್ಲವನ್ನೂ ವಿವರಿಸಿದರು
ಪ್ರಾಣಿ ಶಾಸ್ತ್ರದ ಪ್ರೌಢ ವಿದ್ಯಾರ್ಥಿ, ಭೈರಪ್ಪ. ಹವ್ಯಾಸಕ್ಕಾಗಿ ಮನಃಶಾಸ್ತ್ರವನ್ನೂ ಅಷ್ಟು ಇಷ್ಟು ಓದಿಕೊಂಡಿದ್ದ. ಡಾಕ್ಟರು ವಿವರಿಸಿದುದನ್ನು ಅರ್ಥ ಮಾಡಿಕೊಂಡ 'ಈ ಸರ್ತಿ ಪರೀಕ್ಷೆಗೆ ಕೂರುತ್ತೇನೆ, ಡಾಕ್ಟರೇ, ಸೊನ್ನೆ ನಂಬರು ಬಂದರೂ ಪರವಾಗಿಲ್ಲ. ಮಾಡಬೇಕದ ಚಿಕಿತ್ಸೆಯನ್ನು ನೀವು ಮಾಡಿ, ಇಷ್ಟರ ಮೇಲೆ ದೇವರಿದ್ದಾನೆ. ಅಪ್ಪನ ಆಶೀರ್ವಾದ ಇದೆ' ಎಂದ ಭೈರಪ್ಪ, ದಿಗ್ಭ್ರಮೆಯು ಬಹಳಷ್ಟು ಕರಗುತ್ತಿದ್ದುದು ಸ್ಪಷ್ಟವಾಗಿತ್ತು
ಭೈರಪ್ಪನಿಗೆ ಐವತ್ತೆರಡನೇ ರ್ಯಾಂಕ್ ಬಂತು. ಆದರೆ ಆ ವರ್ಷ ಎಪ್ಪತ್ತೆಂಟು ಮಂದಿಯನ್ನು ಚಾಕರಿಗೆ ಸೇರಿಸಿಕೊಂಡರು. ಶ್ರೀ ಭೈರಪ್ಪ ಎಂ.ಎಸ್‌ಸಿ., ಐ.ಎ.ಎಸ್. ಎಂದು ಕಾಗದಗಳ ಮೇಲೆ ಅಚ್ಚೊತ್ತಿಸಿಕೊಂಡ.
ಪರೀಕ್ಷೆಗೆ ಕೂರುವ ಜಾಣ ಹುಡುಗರಲ್ಲಿ, ಕೆಲವರು ಆತಂಕದಿಂದಾಗಿ, ದೇಹದ ಕಾಯಿಲೆಗಳಿಂದಲೂ ನರಳಬಹುದು. ಆತಂಕವು ಅತಿಯಾದಾಗ