ದಿಗ್ಬ್ರಮೆಯೂ (Panic & Phobia) ಆಗಬಹುದು. ಸೂಕ್ಷ್ಮವಾಗಿ ದೇಹದ ಚಿಹ್ನೆಗಳನ್ನು ಗಮನಿಸಿ, ಅವು ದೇಹದಿಂದ ಉಂಟಾದುವೇ, ಅಥವಾ ಆತಂಕದಿಂದ ಉತ್ಪತ್ತಿಯಾಗಿದೆಯೇ ಎಂಬುದನ್ನು ಕಂಡುಹಿಡಿಯಬೇಕು. ಹಾಗಲ್ಲದೆ ಇದು ಕೇವಲ ದೇಹದ ಬೇನೆ ಎಂದು ಚಿಕಿತ್ಸೆ ಮಾಡಿದರೆ, ಮನಸ್ಸಿನಲ್ಲಿರುವ ಪರೀಕ್ಷಾ ಆತಂಕವು ಬೇರೂರುತ್ತದೆ. ಪರೀಕ್ಷೆಯನ್ನು ಮುಂದೆ ಯಾವಾಗ ಎದುರಿಸಬೇಕಾದರೂ ಬೇರೂರಿದ ಆತಂಕದ ಭೂತವು ತಲೆಯೆತ್ತಿ ಕಾಡುತ್ತದೆ. ದಿಗ್ಭ್ರಮೆಯು ಹಂತಕ್ಕೆ ಏರಿದ ಆತಂಕವಾದರೆ, ಅತ್ಯಗತ್ಯವಾಗಿ ಅದನ್ನು ಆ ಕೂಡಲೇ ನಿವಾರಿಸಬೇಕು- Abreaction ಇಂದ, ಇಲ್ಲದಿದ್ದರೆ, ಅಲೆಯ ಮನೆಯ ದೆವ್ವದಂತೆ, ಆತಂಕದ ಪಿಶಾಚಿಯು, ಪ್ರತಿ ಪರೀಕ್ಷಾ ಸಮಯದಲ್ಲೂ ಇಣಿಕುತ್ತದೆ. ಇಣಿಕಿ ಕಾಡುತ್ತದೆ. ಬಾಳನ್ನು ಕೆಡಿಸುತ್ತದೆ.
ಆತಂಕದ ವಿರಾಡ್ರೂಪಗಳಲ್ಲಿ ಪರೀಕ್ಷೆಯ ರಾಕ್ಷಸ ಮುಖವಾಡವು ಭೀಕರವಾದುದು ದಿಗ್ಭ್ರಮೆಯಾಗುವಂತೆ ಭಯಾನಕವೂ ಆಗಬಹುದು.
ವಿದ್ಯಾರ್ಥಿಯರು, ಅವರ ತಾಯ್ತಂದೆಯರು, ಅಥವಾ ಪಾಲಿಸುವ ರಕ್ಷಕರು; ಇವರೆಲ್ಲರೂ ಈ ವಿಷಯವನ್ನು ತಿಳಿದುಕೊಂಡಿರಬೇಕು.
ನುರಿತ ವೈದ್ಯರನಕ ಇದನ್ನು ದಿನದಿನವೂ ಮನಗಾಣುತ್ತಾರೆ. ತಿಳಿದುಕೊಳ್ಳದೇ ಇರುವುದಕ್ಕಾಗಲೀ, ಒಮ್ಮೆ ತಿಳಿದ ಮೇಲೆ ಮರೆಯುವುದಕ್ಕಾಗಲೀ, ಸಾಧ್ಯವೇ ಇಲ್ಲ.
ಮುಪ್ಪು – ಆತಂಕ
"ಅರವತ್ತಕ್ಕೆ ಅರುಳು ಮರುಳು' ಎಂಬ ಅನುಭಾವೀ ಗಾದೆಯಿದೆ. ಉಷ್ಣವಲಯದ ನಮ್ಮ ದೇಶದಲ್ಲಿ, ಅರವತ್ತರ ಸುಮಾರಿಗೆ ಮೆದುಳಿನ ಚುರುಕು ಸ್ವಲ್ಪ ಮಂದವಾಗುತ್ತದೆ. ಜ್ಞಾಪಕಕ್ಕೆ ಬೇಗ ಬರದೇ ಇರುವುದೂ, ಮಾಡಬೇಕಾದ ಕೆಲಸದಲ್ಲಿ ಉತ್ಸಾಹವು ಕಡಿಮೆಯಾಗುವುದೂ, ಆ ವಯಸ್ಸಿನಲ್ಲಿ ಕಾಣಬರುತ್ತದೆ. ಅಭ್ಯಾಸವಿರುವ ಕೆಲಸವನ್ನು ಮಾಡುವಾಗ ಕೂಡ ಮೊದಲಿದ್ದ ಚೂಟಿಯು ಇರುವುದಿಲ್ಲ. 'ಅಯ್ಯಾ ! ನಿನ್ನ ಕಾಲ ಮುಗಿಯುತ್ತ ಬಂದಿದೆ' ಎಂದು ಪ್ರಕೃತಿಯು ಕೊಡುವ ಎಚ್ಚರಿಕೆಗಳಿವು. ಎಚ್ಚರಿಕೆಯನ್ನು ಗಮನಿಸುವವರು ಮಾತ್ರ ವಿರಳ.
ನ್ಯಾಯಾಧೀಶ ಎ.ಬಿ.ಸಿ. ಭಟ್ಟರು ತುಂಬಾ ಪ್ರಸಿದ್ಧಿಯನ್ನು ಪಡೆದಿದ್ದರು. ವಾದಿಸಲು ತಮ್ಮೆದುರು ಬಂದ ಹೆಸರಾಂತ ಚೂಟಿ ಲಾಯರುಗಳಿಗೆ ಕೂಡ ಉಪಾಯವಾಗಿ ಚಳ್ಳೇ ಹಣ್ಣು ತಿನ್ನಿಸುತ್ತಿದ್ದರು. ಭಟ್ಟರನ್ನು ಕಂಡರೆ ಲಾಯರುಗಳಿಗೆ