ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

xii ಹಿಂದಿನ ಸತ್ಯಾಂಶವನ್ನು ಪರೀಕ್ಷಿಸಿದರೆ ಇಂದಿನ ಮಾನಸಿಕ ರೋಗಗಳಿಗೆ ಸಂಬಂಧಿಸಿದಂತೆ ನಡೆದಿರುವ ವೈದ್ಯಕೀಯ ವೈಜ್ಞಾನಿಕ ಸಂಶೋಧನೆಗೆ ಅವು ಎಷ್ಟು ಹತ್ತಿರವಾಗಿವೆ ಎಂದು ತೋರದೆ ಇರದು. ಈ ಒಂದು ವಿಶ್ಲೇಷಣೆಯ ಪ್ರಯತ್ನ ಈ ಪುಸ್ತಕದಲ್ಲಿ ನಡೆದಿದೆ; ಎಂದರೆ ಈ ಪುಸ್ತಕದಲ್ಲಿರುವುದು ಹಳೆಯ ಮತ್ತು ಹೊಸ ವಿಚಾರಗಳ ಪರಿಶೀಲನೆ ಅಷ್ಟ ಎಂದು ಮಾತ್ರ ಊಹಿಸಬಾರದು. “ಮನ ಮಂಥನ' ಒಂದು ಮಾನಸಿಕ ರೋಗಶಾಸ್ತ್ರಗ್ರಂಥವೂ ಹೌದು. ರೋಗಶಾಸ್ತ್ರವನ್ನು ಕಾದಂಬರಿಯಂತೆ ಓದಿ 'ಕಾಂತಾ ಸಮಿತಿ' ಯಂತ ಅರ್ಥಮಾಡಿಕೊಳ್ಳುವ 'ರಸಸಾಹಿತ್ಯ' ಗ್ರಂಥವೂ ಹೌದು, ಗ್ರಂಥದ ಮೊದಲ ಭಾಗ ದೃಷ್ಟಾಂತಗಳ ಸರಪಣಿ. ಒಂದೊಂದು ದೃಷ್ಟಾಂತವೂ ಒಂದೊಂದು ಕೊಂಡಿ. ಕೊಂಡಿ ಸೇರಿದ ಸರಪಣಿ, ಒಂದು ಅಪೂರ್ವವಾದ ಬಲಿಷ್ಠ ಶಾಸ್ತ್ರ ಒಂದೊಂದು ಉದಾಹರಣೆಯೂ ಒಂದೊಂದು ಕಥೆ. ಒಂದೊಂದು ಕಥೆಯೂ ಒಂದೊಂದು ರೋಗದ ಚಿಹ್ನೆ, ಆ ರೋಗ ಅನುಭವಿಸಿದವರು ನಮ್ಮನಮ್ಮವರೆ, ಆಸ್ಪತ್ರೆಯಲ್ಲಿರುವವರಲ್ಲ; ಆಸ್ಪತ್ರೆಗೆ ಹೋಗಬೇಕಾದವರು. ರೋಗನಿವಾರಣೆ ಮಾಡಿಕೊಳ್ಳಬಲ್ಲ ರೋಗಗ್ರಸ್ತರು. ಆ ಕಥೆಗಳನ್ನು ಓದುತ್ತಿದ್ದರೆ ನಾವು ಇಲ್ಲಿರುವ ಯಾವುದಾದರೂ ರೋಗಕ್ಕೆ ತುತ್ತಾಗಿದ್ದೇವೆಯೇ ಎಂಬಂಥ ಭ್ರಾಂತಿ ಹುಟ್ಟಿಸುವಂಥ ರೋಗಗಳ ವಿವರಣೆಯೇ ಅಲ್ಲಿ ಕಥಿತವಾಗಿರುವುದು. ಆದ್ದರಿಂದಲೇ ಗ್ರಂಥಕರ್ತರು “ಬಿನ್ನಹ' ದಲ್ಲಿ “ಓದುಗನ ಮನಸ್ಸಿನಲ್ಲಿ 'ನನಗೂ ಈ ರೋಗ ಬಂದಿರುವ ಸೂಚನೆಗಳಿವೆಯೋ' ಎನ್ನುವ ಅನುಮಾನವು ಸಾಮಾನ್ಯವಾಗಿ ಉಂಟಾಗುತ್ತದೆ” ಎನ್ನುತ್ತಾರೆ. ಇಂಥ ಬರವಣಿಗೆ ಓದುಗನ ಮನಸ್ಸಿಗೆ ನೇರ ಮುಟ್ಟುತ್ತದೆ; ವಿಚಾರ ಅರ್ಥವಾಗುತ್ತದೆ ; ಓದಿದ್ದು ಸಾರ್ಥಕವಾಗುತ್ತದೆ. ಸಾರ್ಥಕವಾದ ಬರವಣಿಗೆಯಿಂದ ಮನಸ್ಸನ್ನು ಡಾ. ಎಂ. ಶಿವರಾಂ ಅವರು 'ಮನಮಂಥನ'ದಲ್ಲಿ ಮಥಿಸಿದ್ದಾರೆ. ಮೊದಲನೆಯ ಭಾಗ ದೃಷ್ಟಾಂತಗಳ ಸರಪಣಿಯಾದರೆ ಅವುಗಳ ಹಿಂದಡಗಿರುವ ಮೂಲಾಂಶದ ವಿವೇಚನ ವಿವರ, ವೈದ್ಯರ ಸಂಶೋಧನೆ, ದಾರ್ಶನಿಕರ ತತ್ತ್ವ ವಿಚಾರ, ದೇಹ ಮನಸ್ಸುಗಳ ಸಂಬಂಧ, ಅಹಂಕಾರದ ಕಲ್ಪನೆ ಮೊದಲಾದ ಅಂಶಗಳು ನಡೆದು 'ಗಟ್ಟಿ ಮನಸ್ಸು' ಯಾವುದು ಎಂಬುದರ 'ಸ್ಫೂಲರೂಪ' ಕಣ್ಣಮುಂದೆ ನಿಲ್ಲುತ್ತದೆ. ಜೊತೆಗೆ ಅಮೃತಮಂಥನದಿಂದ ಜನಿಸಿದ ವಿಷ ಮತ್ತು ಅಮೃತ ಅಲ್ಲದೆ ಅವುಗಳ ಜನನದ ಮಧ್ಯಂತರದಲ್ಲಿ ಹುಟ್ಟಿದ ಇತರ ವಸ್ತುಗಳು 'ಮನಮಂಥನ'ದಲ್ಲೂ ಹೇಗೆ ಅನ್ವಯವಾಗುತ್ತವೆಯೆಂಬುದನ್ನು ಬಹು ಸೂಕ್ಷ್ಮವಾಗಿ ಹೊಂದಿಸಿದ್ದಾರೆ.