ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೧೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೧೦೪

ಮನಮಂಥನ

೨. ಪ್ಯಾರನಾಯ್ಡ್ ಅವಸ್ಥೆಗಳು

Paranoid Syndromes

ಕರ್ಣಪಿಶಾಚಿ

'ಪಿಶಾಚಿಗಳು ಇವೆ. ಇದ್ದು ಕೆಲವರನ್ನು ಹಿಡಿದು ಕಾಡುತ್ತವೆ ಎಂಬುದನ್ನು ನೀವು ನಂಬುತ್ತೀರಾ, ಸಾರ್' ಎಂದು ಕಲ್ಲಪ್ಪ ಕೇಳಿದ

'ಹೂ ಕಣಪ್ಪ, ನಂಬುತ್ತೀನಿ. ಪಿಶಾಚಿಗಳು ಇರದೇ ಹೋಗಿದ್ದಿದ್ದರೆ, ನಮ್ಮ ದೇಶ ಹೀಗೆ ದುಃಸ್ಥಿತಿಗೆ ಇಳಯುತ್ತಿತ್ತೇ?' ಎಂದೆ. ಯಥಾಪ್ರಕಾರದ ಕುಹಕದ ಧ್ವನಿಯಲ್ಲಿ.

'ಈ ಉತ್ತರವನ್ನು ಕೇಳಿ ಕಲ್ಲಪ್ಪ ನಗಲಿಲ್ಲ. ಅಂದರೆ ನಾನಾಡಿದ ಮಾತು ಗುರಿ ತಪ್ಪಿತ್ತು, ಕುಹಕವನ್ನಾಡಹೋದ ನನ್ನ ಮಾತನ್ನು ಅವ ಸತ್ಯ ಎಂದು ನಂಬಿದನೋ ಎಂಬ ಅನುಮಾನವು ಉಂಟಾಯಿತು. ಆದಕಾರಣ ನಾನೂ 'ಗಂಭೀರ' ವಾದೆ.

'ಈ ಪ್ರಶ್ನೆಯನ್ನು ಯಾಕೆ ಕೇಳಿದೆ? ಕಲ್ಲಪ್ಪ ಮನೆಗೆ ಬಂದ ಅಜ್ಜಿ ಯಾವುದಾದರೂ ಪಿಶಾಚಿಯ ಕತೆ ಹೇಳಿತೇ ? ಅಥವಾ ದೆವ್ವದ ಕತೆಗಳನ್ನು ಪತ್ರಿಕೆಯಲ್ಲಿ ಓದಿದೆಯಾ?' ಎಂದೆ.

'ಪಿಶಾಚಿಗಳು ಇವೆ ಎಂದು ನೀವೂ ನಂಬುವುದಾದರೆ, ಅವು ಇರಲೇ ಬೇಕು. ಅವೇನಾದರೂ ಕಿವಿಗಳಲ್ಲಿ ಸೇರಿಕೊಂಡು ಕಾಡುತ್ತವೆಯೇ ಸಾರ್!' ಎಂದ;ಗಂಭೀರ ಧ್ವನಿಯಲ್ಲಿ ಕೇಳಿದನೇ ಹೊರತು ಪರಿಹಾಸ್ಯದ ಸೋಂಕೂ ಇರಲಿಲ್ಲ. ನಾನೂ ಗಂಭೀರವಾಗಿಯೇ

'ಇರಬಹುದು, ಕಲ್ಲಪ್ಪ ; ಆದರೆ ಇದೇ ಬಾರಿ, ಅವುಗಳ ವಿಷಯವನ್ನು ಮೊದಲು ಕೇಳುತ್ತಿರುವುದು, ನಾನು, ಅವುಗಳ ವಿಷಯ ನಿನಗೇನು ಗೊತ್ತು? ಹೇಳು; ಎಂದೆ.

'ನಾನು ಹೇಳುವುದನ್ನು ನೀವು ನಂಬುತ್ತೀರೋ ಇಲ್ಲವೋ? ಒಂದೊಂದು ಸರ್ತಿ ನಂಬುವುದಕ್ಕೆ ನನಗೇ ಕಷ್ಟವಾಗುತ್ತೆ. ಅವರಿವರು ಹೇಳಿದ ಮಾತಲ್ಲ ಸಾರ್ ಇದು, ನನ್ನ ಸ್ವಂತ ಅನುಭವಕ್ಕೆ ಬಂದಿದ್ದು, ಕೆಲವು ತಿಂಗಳುಗಳಿಂದ ನನ್ನ