೧೦೭
ಸ್ಪಷ್ಟವಾಗಿ, ನಿಸ್ಸಂಶಯವಾಗಿ ಕೇಳಿಸುತ್ತಿರುತ್ತಲ್ಲ ! ವೈದ್ಯರು 'ಅದು ಭ್ರಮೆ ಕಣಯ್ಯಾ' ಎಂದು ಎಷ್ಟು ಒತ್ತಿ ಹೇಳಿದರೂ ಕಲ್ಲಪ್ಪನ ಕೊರಗು ಕಡಿಮೆಯಾಗುವುದಿಲ್ಲವಲ್ಲ!
ಎಷ್ಟೋ ಮಂದಿಗೆ ಸದಾಕಾಲವೂ ಕಾಡುವ ಉಬ್ಬಸದ ಕಾಟವಿರುತ್ತದೆ. ಆದರೂ ಅವರೆಲ್ಲಾ ಬಾಳಿ ಬದುಕಿಲ್ಲವೇ? ನಮ್ಮ ನಾಡಿನಲ್ಲಿ ನಾಲ್ಕು ನೂರು ಪಗಾರ ಪಡೆಯುವವರನ್ನು ಬಡವರು ಎನ್ನಲಾದೀತೇ! ಆದರೆ ಕಲ್ಲಪ್ಪನಿಗೆ ಮಾತ್ರ ಹೀಗೇಕಾಯಿತು?
ಬಹಳ ವರ್ಷಗಳಿಂದ ಅವನ ತಮ್ಮ ತೀವ್ರತರದ ಬುದ್ಧಿ ವಿಕಲ್ಪದಿಂದ ನರಳುತ್ತಿದ್ದ. ಯಾವುದೊಂದು ಪ್ರಯೋಜನಕ್ಕೆ ಬರದಿದ್ದರೂ ಸಂಪಾದಿಸುವ ಅಣ್ಣನ ಕೊರಳಿಗೆ ಉರುಳಾಗಿದ್ದ. ತಮ್ಮನ ಮನಸ್ಸು ವಿಕಲ್ಪವಾಗಬೇಕಾದರೆ, ಹಾಗಾಗುವ ಆನುವಂಶಿಕ ಪ್ರವೃತ್ತಿಯನ್ನು ಅವ ಪಡೆದಿರಬೇಕು. ಅಂತಹ ಆಜನ್ಮ ಪ್ರವೃತ್ತಿಯು ಕಲ್ಲಪ್ಪನಿಗೂ ಇದ್ದಿರಬೇಕು. ಆದರೆ ಮನೆಯ ಪರಿಸರದ ಪ್ರಭಾವದಿಂದ ಕಲ್ಲಪ್ಪ ಸ್ವಲ್ಪಮಟ್ಟಿಗಾದರೂ ಓದಿದ. ಆದರೆ ತಮ್ಮನ ಕಾಲಕ್ಕೆ ಪರಿಸ್ಥಿತಿಯು ಬಿಗಡಾಯಿಸಿಕೊಂಡಿತ್ತು. ಸೂಕ್ತ ಚಿಕಿತ್ಸೆಯು ಸಕಾಲದಲ್ಲಿ ದೊರೆಯದೆ ಇದ್ದುದರಿಂದ ತಮ್ಮನ ಬುದ್ಧಿವಿಕಲ್ಪವು ಬೇರೂರಿ ಬಲವಾಗಿ ದೃಢವಾಯಿತು. ಸರಿಪಡಿಸಲಾಗದಂತಹ ಸ್ಥಿತಿಯನ್ನು ಮುಟ್ಟಿತು. ಮನಸ್ಸಿನ ಹತೋಟಿಯನ್ನು ಕಳೆದುಕೊಂಡ ದೇಹವು ತಾನೇತಾನಾಗಿ ಸ್ವಚ್ಛಂದವಾಗಿ ಹದ್ದು ಮೀರಿ ಬೆಳೆಯಲಾರಂಭಿಸಿತು.
ಇಂತಹ ಮನೆಯ ವಾತಾವರಣದಲ್ಲಿ ಕಲ್ಲಪ್ಪ ಯಾವ ಸುಖವನ್ನು ಪಟ್ಟಾನು? ಯಾವ ಆಸೆಯನ್ನು ಇಟ್ಟುಕೊಂಡಾನು? ಆದಷ್ಟುಕಾಲ ಒದ್ದಾಡಿದ. ಕಡೆಗೆ ಮನಸ್ಸಿನ ಒಂದು ಭಾಗವು ಮೊಂಡು ಹಿಡಿದುಕೊಂಡು ಪಿಶಾಚಿಯಾಯಿತು. ಕಣ್ಣಿಗೆ ಕಾಣಿಸದೆ ಇದ್ದರೂ, ಕಿವಿಯಲ್ಲಿ ಬೊಬ್ಬೆ ಹೊಡೆಯಲು ಪ್ರಾರಂಭಿಸಿತು.
ಇಂತಹ ಕರ್ಣಪಿಶಾಚಿಗಳನ್ನು ಪ್ಯಾರನಾಯ್ಡ್ ಅವಸ್ಥೆ ಅಥವಾ ಪ್ಯಾರನಾಯ್ಡ್ ಪ್ರತಿಕ್ರಿಯೆ ಎಂದು ಕರೆಯುತ್ತಾರೆ.
ಸಾಮಾನ್ಯವಾಗಿ ಪ್ಯಾರನಾಯ್ಡ್ ಅವಸ್ಥೆಯು ಪ್ರತ್ಯೇಕವಾಗಿ ಒಂದೇ ಇರುವುದಿಲ್ಲ. ಇತರ ಮಾನಸಿಕ ಬೇನೆಗಳೊಂದಿಗೆ ಇದೂ ಮಿಳಿತವಾಗಿರುತ್ತದೆ. ಹಾಗೂ ಸ್ಕಿಜೋನಿಯ ಎಂಬ ಕಾಯಿಲೆಯಲ್ಲಿ ಕರ್ಣಪಿಶಾಚಿಗಳ ಹಾವಳಿಯು ಇದ್ದರೂ, Persecution ತಪ್ಪಿರುವುದಿಲ್ಲ. ಈ ಕಾರಣದಿಂದ ಕಲ್ಲಪ್ಪನನ್ನು ಮಾನಸಿಕ ತಜ್ಞರ ಬಳಿಗೆ ಪೂರ್ಣ ಪರೀಕ್ಷೆಗೆಂದು ಕಳುಹಿಸಲಾಯಿತು. ಅವನ ತಮ್ಮನ ಮಾನಸಿಕ ಬೇನೆಯನ್ನು ಕಂಡನಂತರ ಸ್ಕಿಜೋಫ್ರೀನಿಯಾದ ಅನುಮಾನವು