ಮನಮಂಥನ
ಬಲವಾಯಿತು.
ಮಾನಸಿಕ ರೋಗಗಳ ಪ್ರವೀಣರು ಕಲ್ಲಪ್ಪನನ್ನು ಪರೀಕ್ಷಿಸಿ, ಸ್ಕಿಜೋಫ್ರಿನಿಯಾದ ಮೊದಲ ಹಂತವಿದು ಎಂದು ತೀರ್ಮಾನಿಸಿದರು. ಶ್ರದ್ಧೆಯಿಂದ ಚಿಕಿತ್ಸೆಯನ್ನು ನಡೆಸಿದರು. ಬಹಳಷ್ಟು ಮಟ್ಟಿಗೆ ಕಲ್ಲಪ್ಪನ ಗುಣಮುಖನಾಗಿದ್ದಾನೆ. ನಾವಿನ್ನೂ ಇದ್ದೀವಿ ಎಂದು ಕರ್ಣಪಿಶಾಚಿಗಳು ಕೆಲವೊಮ್ಮೆ ನೆನಪು ಕೊಡುತ್ತವೆ. ಆದರೆ ಬಾಳು ಬೇಸರವಾಗುವಂತೆ ಕಾಡುವುದಿಲ್ಲ.
ಆಸ್ತಮಾದಿಂದ ಈಗಲೂ ನರಳುತ್ತಾನೆ ; ಆದರೆ ಔಷಧಿಗಳಿಂದ ಬೇಗ ಗುಣವನ್ನೂ ಪಡೆಯುತ್ತಾನೆ. ಅಂದರೆ ಆಸ್ತಮಾದ ಹಾವಳಿಯು, ಕರ್ಣಪಿಶಾಚಿಗಳಿದ್ದ ಕಾಲದಲ್ಲಿ ಔಷಧಿಗಳಿಗೆ ಬೇಗ ಬಗ್ಗುತ್ತಿರಲಿಲ್ಲ. ಕರ್ಣಪಿಶಾಚಿಗಳು ಕರಗಿದಾಗ ಅದೇ ಔಷಧಿಗಳು ಅಸ್ತಮಾವನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡಿದುವು ಅನ್ನಬಹುದು.
ಆಸ್ತಮಾದಂತೆಯೇ ಇತರ ಹಲವಾರು ದೈಹಿಕ ಬೇನೆಗಳೂ ಇತರ ಮಾನಸಿಕ ಬೇನೆಗಳೂ ಇದ್ದಾಗ, ಸೂಕ್ತ ಚಿಕಿತ್ಸೆಗೆ ಎಣಿಸಿದ ಫಲಿತಾಂಶವನ್ನು ಕೊಡುವುದಿಲ್ಲ. ಮಾನಸಿಕ ಬೇನೆಗಳಿಗೂ ತಕ್ಕ ಚಿಕಿತ್ಸೆಯು ದೊರೆತರೆ ಆಗ ದೈಹಿಕ ಬೇನೆಗಳೂ ಇನ್ನಷ್ಟು ಸುಲಭವಾಗಿ ಗುಣವಾಗುತ್ತವೆ, ಅದೇ ಚಿಕಿತ್ಸೆಯನ್ನೇ ಹೂಡಿದರೂ ಕೂಡ.
ಅಂದರೆ ಯಾವ ಬೇನೆಯು ಬಡಿದರೂ, ದೈಹಿಕಾಂಶವು ಎಷ್ಟು? ಮಾನಸಿಕ ಅಂಶವು ಎಷ್ಟು? ಎಂದು ವೈದ್ಯರು ಕಣ್ಣಲ್ಲಿ ಕಣ್ಣಿಟ್ಟು ಪರೀಕ್ಷಿಸುತ್ತಾರೆ. ಕಾರಣಗಳೆರಡಕ್ಕೂ, ಚಿಕಿತ್ಸೆಯನ್ನು ಮಾಡಲೆತ್ನಿಸುತ್ತಾರೆ. ಹೊಟ್ಟೆಯ ನೋವು ಅಂತ ಡಾಕ್ಟರ ಬಳಿಗೆ ಹೋದರೆ, ತಲೆ ತಂಪಾಗಲಿ ಅಂತ ಟ್ರಾಂಕ್ವಿಲೈಸರ್‌ಗಳನ್ನು ಕೊಡುತ್ತಾರೆ ಎಂದು ಜನರು ಕುಹಕವಾಡುವುದು ಕೇವಲ ಅಜ್ಞಾನದಿಂದ ಮಾತ್ರ ಸಮಾಜದಲ್ಲಿ ಇಂತಹ ಅಜ್ಞಾನವನ್ನು ತೊಡೆದುಹಾಕಲು ಇಂತಹ ಹೊತ್ತಗೆಗಳು ಅಗತ್ಯ. ಈ ತೆರನ ಪ್ರಚಾರವೂ ಅತ್ಯಗತ್ಯ.
ಬ್ರಹ್ಮಯ್ಯನ ನಕ್ಷತ್ರಿಕ
'ಮೈಸೂರು ಅರಸರ ಚರಿತ್ರೆಯನ್ನು ಎಷ್ಟು ಆಳವಾಗಿ ಅಭ್ಯಾಸ ಮಾಡಿದ್ದಾನೆ. ಅಂತಲೇ ಅವನ ಹತ್ತಿರ ಹೋಗಿ ಮಾತನಾಡಿದರೆ, ಅದೇ ಒಂದು ಸಫಲ ವಿದ್ಯಾಭ್ಯಾಸವಾಗುತ್ತೆ' ಎಂದು ಗೆಳೆಯನೊಬ್ಬ ಹೇಳಿದ. ನನ್ನ ಕುತೂಹಲವೂ ಕೆರಳಿತು. ಆದುದರಿಂದ ಹೋಗೋಣ ಈಗಲೇ ಎಂದೆ. ಆಗ ಸಂಜೆ ಐದರ