xiii ಸರಳವಾದ ಬರವಣಿಗೆ, ಕಥೆ ಹೇಳುವ ಜಾಣತನ, ಕಹಿ ಔಷಧಕ್ಕೆ ಲೇಪಿಸುವ ಮಧುವಿನಂತೆ ಸತ್ಯನಿರೂಪಣೆಯಲ್ಲಿ ಹಾಸ್ಯದ ಚಟಾಕಿ, ಗಂಭೀರ ವಿಷಯವನ್ನು ಮನಮೆಚ್ಚುವಂತೆ ಬಿಡಿಸಿ ಹೇಳುವ ಚಾಕಚಕ್ಯತೆ ಡಾ. ಎಂ. ಶಿವರಾಂ ಅವರಲ್ಲಿ ಮನೆಮಾಡಿಕೊಂಡಿವೆ. ಅವು ಈ ಗ್ರಂಥದಲ್ಲಿ ರೂಪತಾಳಿವೆ. ಪರಿಷತ್ತಿನ ಮೇಲಿನ ಅಭಿಮಾನದಿಂದ ಅವರು ಈ ಪುಸ್ತಕವನ್ನು ಬರದು ಪರಿಷತ್ತು ಪ್ರಕಟಿಸಲು ಒಪ್ಪಿ ಉಪಕರಿಸಿದ್ದಾರೆ. ಮನಮಂಥನದ ಮೊದಲ ಮುದ್ರಣ ಪ್ರತಿಗಳು ಮುಗಿದು ಹೋಗಿ ಈಗಾಗಲೆ ವರ್ಷದ ಮೇಲೆ ಆಯಿತು. ಈಗ ಎರಡನೆಯ ಮುದ್ರಣವಾಗಿದೆ. ಕನ್ನಡದಲ್ಲಿ ಒಂದು ಶಾಸ್ತ್ರೀಯ ಗ್ರಂಥ ಇಷ್ಟು ಬೇಗನೆ ದ್ವಿತೀಯ ಮುದ್ರಣ ಕಾಣುವುದು ಸ್ವಲ್ಪ ಆಶ್ಚರ್ಯವೂ ಹೌದು, ಅಪೂರ್ವವೂ ಹೌದು. ಪುಸ್ತಕದ ಬಗ್ಗೆ ಹಿಂದಿನ ಮುದ್ರಣದ ಮುನ್ನುಡಿಯಲ್ಲಿ ಡಾ. ರಂ. ಶ್ರೀ ಮುಗಳಿಯವರು ಹೇಳಿದ ಮಾತುಗಳು ಯಥಾರ್ಥವಾಗಿವೆ. ಆದ್ದರಿಂದ ಆ ಮಾತುಗಳನ್ನು ಪ್ರಾರಂಭದಲ್ಲಿ ಕೊಟ್ಟಿದೆ. 'ಮನಮಂಥನ'ಕ್ಕೆ ರಾಜ್ಯ ಸಾಹಿತ್ಯ ಅಕಾಡೆಮಿ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿಗಳು ಪ್ರಶಸ್ತಿ ನೀಡಿವೆ. ಹೆಚ್ಚಾಗಿ ಕನ್ನಡದ ಜನ ಪುಸ್ತಕವನ್ನು ಕೊಂಡು ಓದಿ ಪ್ರಶಸ್ತಿ ನೀಡಿದೆ. ಈ ಕಾರಣ ಪುಸ್ತಕದ ಜನಪ್ರಿಯತೆಯನ್ನೂ ಮೌಲ್ಯವನ್ನೂ ನಾವು ಕಾಣಬಹುದು. ಡಾ. ಶಿವರಾಂ ಅವರಿಗೆ, ಈ ಪುಸ್ತಕವನ್ನು ಪರಿಷತ್ತಿನಿಂದ ಪ್ರಕಟಿಸಲು ಎರಡನೆಯ ಸಲವೂ ನೆರವಾದದ್ದರಿಂದ ನನ್ನ ಹಾರ್ದಿಕ ವಂದನೆಗಳನ್ನು ಈ ಮೂಲಕ ಸಲ್ಲಿಸುತ್ತೇನೆ. ಬೆಂಗಳೂರು 90-02-0525 ಹಂಪ ನಾಗರಾಜಯ್ಯ ಅಧ್ಯಕ್ಷ
ಪುಟ:ಮನಮಂಥನ.pdf/೧೩
ಗೋಚರ