೧೧೧
ಕೆಲವು ತಿಂಗಳುಗಳಾಗಿರಬೇಕು. ಒಂದು ಬೆಳಗ್ಗೆ ಪರಿಚಿತನಾದ ಪೋಲೀಸಿನವನೊಬ್ಬ ನನ್ನ ಬಳಿಗೆ ಬಂದ. ಬ್ರಹ್ಮಯ್ಯನ ಪರಿಚಯವಿದೆಯೇ ?' ಎಂದು ಕೇಳಿದ. 'ಪರಿಚಯವೇನೋ ಇದೆ. ಆದರೆ ಅಂತಹ ಹೇಳಿಕೊಳ್ಳುವಂತಹ ಸ್ನೇಹವಲ್ಲ. ಇಷ್ಟು ಮಾತ್ರ ಚೆನ್ನಾಗಿ ಇತ್ತು. ಅವರು ಉದ್ದಾಮ ಪಂಡಿತರು,' ಎಂದೆ. 'ನಿಕಟ ಪರಿಚಯವಿಲ್ಲವೇ, ಹಾಗಾದರೆ ?' ಎಂದು ಕೇಳಿದ, ಅವ. 'ಇಲ್ಲವಪ್ಪಾ ! ಆದರೆ ಹಾಗೆ ಯಾಕೆ ಕೇಳಿ ?' ಎಂದೆ.
'ವೈಸ್‌ರಾಯರಿಗೆ, ಬ್ರಿಟಿಷ್ ರೆಸಿಡೆಂಟರಿಗೆ, ಮತ್ತು ಬ್ರಿಟಿಷ್ ಚಕ್ರವರ್ತಿಗೆ ಕೂಡ, ಬ್ರಹ್ಮಯ್ಯನವರು ಮೇಲಿಂದ ಮೇಲೆ ಅಹವಾಲು ಕಾಗದಗಳನ್ನು ಬರೆಯುತ್ತಿದ್ದಾರೆ. ಸ್ಥಳೀಯ ಪೋಲೀಸಿನವರು ಕಿರುಕುಳ ಕೊಡುತ್ತಿದ್ದಾರೆಂದೂ, ಪ್ರಾಣ ತೆಗೆಯಬಹುದೆಂದೂ, ಕಾರಣ ರಕ್ಷಣೆಯು ಬೇಕೆಂದೂ ಮೂರು ನಾಲ್ಕು ಸಾವಿರ ಅರ್ಜಿಗಳನ್ನು ಬರೆದು ಹಾಕಿದ್ದಾರೆ, ಅಲ್ಲಿಂದ ಅವು ತನಿಖೆಗೆಂದು ನಮ್ಮ ಬಳಿಗೆ ಬಂದಿವೆ. ತನಿಖೆ ಮಾಡಿ ಉತ್ತರವನ್ನು ದಿಳ್ಳಿಗೆ ಕಳಿಸಬೇಕು. ನನಗೆ ತಿಳಿದ ಹಾಗೆ ಬ್ರಹ್ಮಯ್ಯನ ಬಳಿಗೆ ಯಾವ ಪೋಲೀಸಿನವನೂ ಸುಳಿದಿಲ್ಲ. ಅಂತಹವನೊಬ್ಬ ಈ ಊರಿನಲ್ಲಿ ಇದ್ದಾನೆ ಎನ್ನುವುದೂ ತಿಳಿಯದು. ವಿಳಾಸವನ್ನು ಪತ್ತೆಹಚ್ಚಿ ಅವರನ್ನು ಭೇಟಿಯಾಗುವುದೇ ಮಹಾ ಪ್ರಯಾಸವಾಯಿತು. ಪೋಲೀಸಿನ ಸಮವಸ್ತ್ರ ಧರಿಸದೆ, ಸಾಮಾನ್ಯ ಪಂಚೆ ಷರಟಿನಲ್ಲಿ ಅವರನ್ನು ಕಾಣಲು ಹೋದೆ. ಬಾಗಿಲನ್ನು ಅವ ಬಡಪೆಟ್ಟಿಗೆ ತೆರೆಯಲಿಲ್ಲ. ಕಡೆಗೊಮ್ಮೆ ಬಾಗಿಲನ್ನು ತೆರೆದರು. 'ಬ್ರಹ್ಮಯ್ಯನವರು ನೀವೇನಾ' ಎಂದು ಕೇಳಿದೆ. 'ಅಲ್ಲ, ಈಗ ಅವರು ಬರಬಹುದು, ಇಲ್ಲೇ ಇರಿ' ಎಂದು ಹೇಳಿ ಬಾಗಿಲನ್ನು ಹಾಕಿಕೊಂಡು ಹೊರಟು ಹೋದರು. ಸ್ವಲ್ಪ ಹೊತ್ತಿನ ಮೇಲೆ ಎದುರು ಮನೆಗೆ ಹೋಗಿ ವಿಚಾರಿಸಿದೆ. ನನ್ನೊಡನೆ ಮಾತನಾಡಿ ಹೊರಟು ಹೋದವರೇ ಬ್ರಹ್ಮಯ್ಯನವರೆಂದು, ಅದನ್ನು ಕಂಡುದಾಗಿ, ಎದುರು ಮನೆಯವರು ಹೇಳಿದರು. 'ಅಳಧಿಕಾರಿಗಳಿಗೆ ಹೀಗೆ ಅರ್ಜಿ ಬರೆಯುವ ಗೀಳು ಕೆಲವು ವರ್ಷಗಳಿಂದಲೂ ಬ್ರಹ್ಮಯ್ಯನವರಿಗಿರುವುದು ಕೇರಿಯಲ್ಲಿರುವವರಿಗೆಲ್ಲಾ ತಿಳಿದ ವಿಷಯ' ಎಂದು ಹೇಳಿದರು. 'ಕೇವಲ ಹುಚ್ಚನಿವ ಎಂದು ವರದಿ ಕಳುಹಿಸುವ ಮೊದಲು, ಪರಿಚಯಸ್ಥರನ್ನು ವಿಚಾರಿಸಿ ಬರೀ ಹುಟ್ಟೋ ? ಅಥವಾ ಇನ್ನೇನಾದರೂ ಮಸಲತ್ತು ಇರಬಹುದೋ ಎಂಬುದನ್ನು ಪರಿಶೀಲಿಸಲು ಬಂದೆ. ರಾಜಕೀಯದಲ್ಲಿ ಇವರಿಗೆ ಆಸಕ್ತಿಯೂ ಇರಲಿಲ್ಲವೇ ? ಅದಾದರೂ ನಿಮಗೆ ತಿಳಿದಿದೆಯೇ ? ಎಂದು ಕೇಳಿದ. 'ನನಗೆ ತಿಳಿದ ಮಟ್ಟಿಗೆ ಅವರು ರಾಜಕೀಯದಿಂದ ಬಲು ದೂರವಪ್ಪಾ, ಯಾವ ಮಸಲತ್ತನ್ನೂ ಅಂತಹ