ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೧೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಪ್ಯಾರನಾಯ್ಡ್ ಅವಸ್ಥೆಗಳು

೧೧೫

ಉಂಟೇ?

ಇದು ಹರಿಶ್ಚಂದ್ರನ ಕತೆ.

ವಿಶ್ವಾಮಿತನು, ಹರಿಶ್ಚಂದ್ರನ ಅಹಂ-ಕಾರವನ್ನು ಹರಿದು ಉದ್ಧರಿಸಲೋಸುಗ, ನಕ್ಷತ್ರಿಕನನ್ನು ಅಂಟಿಸಿದ. ಅಂದರೆ ತಾನಾಡಿದುದನ್ನು ಮರೆತರೆ, ಅವ ನೆನಪುಕೊಡಲು ಎಂದು.

'ನಕ್ಷತ್ರಿಕ'ನು ಹರಿಶ್ಚಂದ್ರನ ಮನಸ್ಸಿನಲ್ಲಿ ಮೂಡಿಬಂದ ದೃಢವಾದ ಪ್ಯಾರನಾಯ್ಡ್ ಭ್ರಮೆ. ಆ ಭ್ರಮೆಯಿಂದಲೇ, ಅದು ನಿತ್ಯ ಮತ್ತು ಸತ್ಯ ಎಂದು ಹರಿಶ್ಚಂದ್ರನಿಗೆ ಅನಿಸಿದುದರಿಂದಲೇ, ಅವ ತನ್ನ ಹಟವನ್ನು ಕಡೆಯತನಕ ಸಾಧಿಸಿದ. ತನ್ನ ಅಹಂ-ಕಾರವನ್ನು ಕಳೆದುಕೊಂಡ.

ಈ ದೃಷ್ಟಿಯಿಂದ ನೋಡಿದರೆ ಪ್ಯಾರನಾಯ್ಡ್ ಪರಿಸ್ಥಿತಿಯು ಅಹಂ ಕಾರದ ನಿರ್ಮೂಲನೆಗೆಂದು ಮನಸ್ಸು ಹೂಡಿದ ಪ್ರತಿಕ್ರಿಯೆ ಎಂದನ್ನುವುದು ತಪ್ಪಲ್ಲ.

ಮನಃಶಾಸ್ತ್ರದಲ್ಲಿ ಪ್ಯಾರನಾಯ್ಡ್ ಸ್ಥಿತಿಯನ್ನು ನಿರ್ಮೂಲ ಮಾಡುವುದು ಅಸಾಧ್ಯ ಎನ್ನುತ್ತಾರೆ. ಅನುಭವದಿಂದ ನುಡಿದ ಸತ್ಯದ ಮಾತು, ಇದು. ಹೀಗೇಕೆ? ಪ್ಯಾರನಾಯ್ಡ್, ಸ್ಥಿತಿಯು, ಮನಸ್ಸಿನಲ್ಲಿ ಉಲ್ಬಣಗೊಂಡಿರುವ ಅಹಂ, ನಾನು ಎಂದೆನ್ನುವ ಭ್ರಮೆಯ ಒಂದು ರೂಪ. ಅದಕ್ಕೆ ಚಿಕಿತ್ಸೆಯು ಅಹಂ ಎಂದೆನಿಸಿಕೊಂಡುದುದನ್ನು ವಿಶ್ಲೇಷಿಸಿ ಅರಿತು, ಅದೂ ಒಂದು ಭ್ರಮೆ ಎಂದು ಅರಿಯುವುದರಿಂದ. ಇಂತಹ ಚಿಕಿತ್ಸೆಯನ್ನು ಆಧ್ಯಾತ್ಮಿಕ ಚಿಕಿತ್ಸೆ ಎನ್ನಬಹುದು. ಪ್ಯಾರನಾಯ್ಡನ ಮೂಲ ಕಾರಣವನ್ನು ಈ ರೀತಿಯಲ್ಲಿ ಮಾತ್ರ ನಿರ್ಮೂಲಗೊಳಿಸಲು ಸಾಧ್ಯ.

ಆದರೆ ತಾತ್ಕಾಲಿಕ ದಮನಗಳೂ ಸಾಧ್ಯವಿರಬಹುದಲ್ಲ. ಅವುಗಳನ್ನು ನಡಸಿದ ಮೇಲೆ, ಅಂತಹ ರೋಗಿಯು ಆಧ್ಯಾತ್ಮಿಕ ಚಿಕಿತ್ಸೆಗೆ ಅನುವಾಗುತ್ತಾನೆ. ಆದುದರಿಂದ ಉಪಶಮನಕ್ಕೆರಿದು, ಪೂರ್ಣ ಆಧ್ಯಾತ್ಮಿಕ ಚಿಕಿತ್ಸೆಗೆ ಅಣಿಮಾಡಿಕೊಡಲೆಂದು, ಇತರ ವೈಜ್ಞಾನಿಕ ಚಿಕಿತ್ಸೆಗಳನ್ನು ಅತ್ಯಗತ್ಯವಾಗಿ ಮಾಡಲೇಬೇಕು.

ಸಂಶಯ ಪಿಶಾಚಿ

ಭರ್ಜರಿ ಆಳು, ಪಾಟೀಲ್ ಪುಟ್ಟಣ್ಣ ಪ್ರಾಯದಲ್ಲಿ ಅವನ ಜಬರ್ದಸ್ತಿಯು ಸುತ್ತಮುತ್ತಲಿನ ಗ್ರಾಮಗಳಲ್ಲಿ ಪ್ರಸಿದ್ಧವಾಗಿತ್ತು. ಎಪ್ಪತ್ತರ ಮುಪ್ಪಡರಿದಾಗ,