ಮನಮಂಥನ
ಸಾಧ್ಯವಾಗಬಹುದು. ಇಂದಿನ ವೈಜ್ಞಾನಿಕ ಹಂತದಲ್ಲಿ, ಕಾರಣಗಳು ಸ್ಪಷ್ಟವಾಗಿಲ್ಲವಾದರೂ, ಹೀಗಿರಬಹುದು ಎಂದು ಊಹಿಸಲು ಸಾಕಷ್ಟು ಸಾಕ್ಷ್ಯಗಳಿವೆ.
ಆದಿಮಾನವನು ಯೋಚನೆಯನ್ನು ಮಾಡಲು ಆರಂಭಿಸಿದಾಗ ಊಹಿಸುವುದನ್ನೂ ಪ್ರಾರಂಭಿಸಿದ. ತಾನು ಕಂಡುದೊಂದು ವಿಷಯವನ್ನು ವಿಶ್ಲೇಷಿಸಿ, ಈ ಕಾರಣಗಳಿಂದ ಆಗಿರಬಹುದು ಎಂದು ತೀರ್ಮಾನಿಸುವುದು ಒಂದು ಊಹೆಯೇ ! ಊಹಿಸಿದುದು ಸರಿ ಎನ್ನುವುದನ್ನು ಪ್ರಯೋಗಗಳನ್ನು ನಡೆಸಿ ಖಚಿತಮಾಡಬೇಕು. ಇದೇ ವಿಜ್ಞಾನದ ಸಾಮಾನ್ಯ ಕಾರ್ಯಕ್ರಮ. ಅನಂತರ ಮೊದಲಿನ ಊಹೆಯು ಸಿದ್ಧಾಂತವೆನಿಸಿಕೊಳ್ಳುತ್ತದೆ. ಪ್ರಗತಿಯನ್ನು ಮನಸ್ಸು ಸಾಧಿಸಿದಂತೆಲ್ಲ, ವೈಜ್ಞಾನಿಕ ಪ್ರಯೋಗಗಳು ಸೂಕ್ಷ್ಮವೂ ಮಹತ್ತರವೂ ಆಗುತ್ತವೆ. ಆನಂತರ ಊಹಿಸುವ ಪ್ರವೃತ್ತಿಯೂ ಹರಿತವಾಗುತ್ತದೆ. ಅದಕ್ಕೆ ಅವಕಾಶವೂ ವಿಫುಲವಾಗುತ್ತದೆ. ಈ ಎಲ್ಲ ಹಂತಗಳಲ್ಲಿಯೂ ಏಕಸೂತ್ತವಾಗಿರುವುದು, ಸ್ಫೂರ್ತಿಯ ಊಹೆ, ಅನುಮಾನಿಸುವುದು.
ಇದೇ ಮಾನವ ವರ್ಗದ, ಸಂಘ ಜೀವನದ ನಾಗರಿಕತೆಯನ್ನು, ನಾಂದಿಯನ್ನು, ನಮ್ಮದೇಶದಲ್ಲಿನ ವೇದಗಳ ಕಾಲದ ಋಷಿಗಳು ನುಡಿದರು ಎಂದನ್ನಬಹುದು. ಸಕಾಲದಲ್ಲಿ ಮಳೆಯು ಬಿದ್ದರೆ ಸಾಕಷ್ಟು ಬೆಳೆಯು ಲಭಿಸುವುದು ಎಂಬುದನ್ನು ಪ್ರತ್ಯಕ್ಷವಾಗಿ ಕಂಡರು. ಹೆಪ್ಪುಗೂಡಿದಂತಿದ್ದ ಕಾರ್ಮೋಡಗಳು ನೈರುತ್ಯದಲ್ಲಿ ಕಾಣಿಸಿದರೆ, ಖಂಡಿತವಾಗಿ ಮಳೆ ಬೀಳುತ್ತದೆ ಎಂಬುದನ್ನು ಅನುಭವದಿಂದ ಅರಿತಿದ್ದರು. ಅಂದಿನ ಸನಾತನ ಸಮಾಜದಲ್ಲಿ ಕಂಡ ವಿಷಯವನ್ನು ವಿಚಾರದ ಒರೆಗೆ ಹಚ್ಚುವ ಪ್ರವೃತ್ತಿಯು ಕೆಲವು ಮನನಿಗರಿಗೆ ಮಾತ್ರ ಮೀಸಲಾಗಿತ್ತು. ಅವರೇ ಋಷಿಗಳು. ಇಂದೂ ಹಾಗೆಯೇ ಅನ್ನಿ, ಮನನಿಗ ಅಲ್ಪಸಂಖ್ಯಾತರಿಂದಲೇ ಮಾನವ ಕುಲದ ಪ್ರಗತಿಯ ನಾಂದಿಯು ಹಾಡಲ್ಪಡುವುದು.
ತಾವು ಕಂಡುದನ್ನು ವಿಚಾರಮಾಡಿ, ಹೀಗಾಗಿರಬಹುದು ಎಂದು ಅನುಮಾನಿಸಿದರು. ಸಮಾಜದ ಸಾಮಾನ್ಯರಿಗೆ, ವಿಚಾರಮಾಡುವ ಯೋಗ್ಯತೆ ಇಲ್ಲದವರಿಗೆ, ಈ ವಿಷಯವನ್ನು ತಿಳಿಸುವ ಬಗೆ ಎಂತು? ಕತೆ ಎಂದರೆ ಸಾಮಾನ್ಯರಿಗೆ ಬಲು ಪ್ರಿಯ, ಕತೆಯ ಪ್ರಕಾರವನ್ನು ಋಷಿಗಳು ಬಳಸಿಕೊಂಡರು. ಕತೆ ಹೇಳಿದರು.
ಕತೆಯ ಹರವನ್ನೂ, ಅದರ ಹಿಂದೆ ಅಡಗಿರುವ ಅನುಭವಾಂಶಗಳ ಸತ್ಯತೆಯನ್ನೂ ಇಂದು ಸುಲಭವಾಗಿ ಗುರುತಿಸಬಹುದು. ಆದರೆ ಇಂದು ಕೂಡ ವೈಜ್ಞಾನಿಕರು ನಕ್ಷತ್ರಗಳ ವಿಷಯದಲ್ಲಾಗಲೀ ನಭೋಮಂಡಲದಲ್ಲಿರುವ ಇತರ