ಬಿನ್ನಹ ರೋಗಗಳ ವಿಚಾರ ಮಾಡಿ ಶ್ರೀ ಸಾಮಾನ್ಯರಿಗೆ ತಿಳಿಯುವಂತೆ ಯಾವ ಲೇಖನವನ್ನು ಎಷ್ಟೇ ವಿರಳವಾಗಿ ಹಾಗೂ ಸರಳವಾಗಿ ಬರೆದರೂ ; ಓದುಗನ ಮನಸ್ಸಿನಲ್ಲಿ 'ನನಗೂ ಈ ರೋಗ ಬಂದಿರುವ ಸೂಚನೆಗಳಿವೆಯೋ?” ಎನ್ನುವ ಅನುಮಾನವು ಸಾಮಾನ್ಯವಾಗಿ ಉಂಟಾಗುತ್ತದೆ. ಆದುದರಿಂದಲೇ ವೈದ್ಯರುಗಳು ರೋಗಿಗಳೊಂದಿಗೆ ಸ್ವಲ್ಪ ಮುಗುಮ್ಮಾಗಿರುವುದು. ಏನನ್ನಾದರೂ ವಿವರಿಸ ಹೋದರೆ ಅಪಾರ್ಥವನ್ನು ಮಾಡಿಕೊಂಡು ಇನ್ನೂ ಹೆಚ್ಚು ನರಳುತ್ತಾರೆಯೋ ಎಂಬ ಸಂಶಯವು ಕಾಡುತ್ತದೆ. ಆದರೂ ಮಾನಸಿಕ ಬೇನೆಗಳ ಮೊದಮೊದಲ ಹಂತದ ಸ್ಕೂಲ ಪರಿಚಯವನ್ನು ಇಲ್ಲಿ ಮಾಡಲೆತ್ನಿಸಿದೆ. ಕಾರಣ ಇಷ್ಟೇ ! ಕ್ಯಾನ್ಸರ್, ಕ್ಷಯ, ಪ್ಲೇಗು, ಕಾಲರಾ, ದೊಡ್ಡ ಸಿಡುಬು, ಇವೆಲ್ಲಾ ಘೋರ ಕಾಯಿಲೆಗಳು. ಇವೆಲ್ಲವೂ ಉಗ್ರವಾದಾಗ ಪ್ರಾಣಕ್ಕೆ ಸಂಚು ತರಬಹುದು. ಆದರೆ ಇವೆಲ್ಲಾ ಒಂದು ವ್ಯಕ್ತಿಯನ್ನು ನರಳಿಸುತ್ತವೆ. ನಮ್ಮ ಇಷ್ಟನಿಗೆ, ನೆಂಟನಿಗೆ ಹೀಗಾಯಿತಲ್ಲ ಎಂದು ಮನೆಯವರು ಕೊರಗುತ್ತಾರೆ, ದಿಟ. ಆದರೆ ಅವರುಗಳ ನಿತ್ಯ ಜೀವನಕ್ಕೆ ನೆಂಟನ ಕಾಯಿಲೆಯು ಕಂಟಕ ಪ್ರಾಯವಾಗುವುದಿಲ್ಲ. ಸಾಮಾನ್ಯವಾಗಿ, ಆದರೆ ಮನೆಯಲ್ಲಿ ಒಬ್ಬನಿಗೆ ಅಥವಾ ಒಬ್ಬಳಿಗೆ ಹುಚ್ಚ ಬೆಪ್ಪೋ ಶಿವ ಲೀಲೆಯೋ ಬಡಿದರೆ, ಮನೆಯವರೆಲ್ಲರೂ ಮುಳ್ಳಿನ ಮೇಲೆ ಇದ್ದಂತಾಗುತ್ತದೆ. ಎಲ್ಲರ ನೆಮ್ಮದಿಯೂ ಕೆಡುತ್ತದೆ. ಎಲ್ಲರಿಗೂ ಒಂದಲ್ಲ ಒಂದು ಹಂತದಲ್ಲಿ ಆತಂಕವಿರುತ್ತದೆ. ಸಂಸಾರದ ಎಲ್ಲರ ಕಾರ್ಯನಿರ್ವಹಣಾ ಚಾಕಚಕ್ಯತೆಯು ಮೊಂಡಾಗುತ್ತದೆ. ಅಂದರೆ ಸಂಸಾರಕ್ಕೆ ಸಂಸಾರವೇ ಕುಂಟುವಂತಾಗುತ್ತದೆ. ಮಾನಸಿಕ ಬೇನೆಗಳು ಬರುವುದಕ್ಕಿಂತ, ಕಂಡು ತಿಳಿದ ದೈಹಿಕ ಬೇನೆಗಳು ಬಂದರೆ ಪರವಾಗಿಲ್ಲ ; ಹೇಗೋ ಸುಧಾರಿಸಿಕೊಳ್ಳಬಹುದು, ಎನ್ನುವಂತಾಗುತ್ತದೆ. ಮಾನಸಿಕ ಬೇನೆಗಳು ಬೇರೂರಿದ ಮೇಲೆ ಅವುಗಳ ಚಿಕಿತ್ಸೆಯು ಪೂರ್ತಿ ಯಶಸ್ವಿಯಾಗುವುದು ದುಸ್ಸಾಧ್ಯ. ಅಲ್ಪಸ್ವಲ್ಪ ಆದರೂ ಗಮನಿಸುವಂತಹ ರೋಗದ ಅವಶೇಷಗಳು ಉಳಿದಿರುತ್ತವೆ. ಹಾಗೂ ಬೇರೂರಿದ ಮಾನಸಿಕ ಬೇನೆಗಳು ಗುಣ
ಪುಟ:ಮನಮಂಥನ.pdf/೧೪
ಗೋಚರ