ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೧೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಹಿಸ್ಟಿರಿಯಾ ಪ್ರದರ್ಶನಗಳು

೧೨೫

ಕೈಗೊಂಡು ಹೊಸಬನೊಂದಿಗೆ ಹೊಸ ಬಾಳನ್ನು ಪ್ರಾರಂಭಿಸುವ ಎಂದರೆ ಸೊಂಟಕ್ಕೆ ಕಟ್ಟುಬಿದ್ದ ಮೂರು ಮಕ್ಕಳು ! ಮನಸ್ಸಿನಲ್ಲಿ ಆಸೆಯು ಹೆಡೆಯಾಡಿಸಿದರೆ, ಮಕ್ಕಳು ಹೆಡೆಯನ್ನು ಮರ್ದಿಸುತ್ತಿದ್ದುವು. ಹೀಗಾಗಿ ಮನಸ್ಸಿನಲ್ಲಿಯಾದರೂ ಉಹಾ ಜೀವನವನ್ನು ಮಾಡಲಾರದೆ, ಆಕೆಯು ಯಾಂತ್ರಿಕವಾಗಿ ಸಂಸಾರವನ್ನು ನಿರ್ವಹಿಸುತ್ತಿದ್ದಳು.

ಆಸೆ ನಿರಾಸೆಗಳನ್ನು ತೋರ ಮನಸ್ಸಿನಿಂದ ದೂಡದೆ ಇದ್ದರೆ ದಿನದಿನದ ಕೆಲಸವನ್ನು ಆದಷ್ಟು ಅಣಿಯಾಗಿ ಮಾಡಲಾಗುವುದಿಲ್ಲ. ಆದಕಾರಣ ಪ್ರಕೃತಿಯು ಮನಸ್ಸಿಗೆ ಒಂದು ಉಪಾಯವನ್ನು ಕಲಿಸಿದೆ ; ಆಸೆ ನಿರಾಸೆ ಇತ್ಯಾದಿಗಳನ್ನು ತೋರಮನಸ್ಸಿನಿಂದ ಆಳ ಮನಸ್ಸಿಗೆ ದೂಡಿಬಿಡುವುದೇ, ಈ ಉಪಾಯ. ಕಸವನ್ನೆಲ್ಲಾ ಕಾಣುವ ಸ್ಥಳಗಳಿಂದ ಗುಡಿಸಿ, ನಂತರ ಕಾಣಿಸದೆ ಇರುವಂತಹ, ಜಮಖಾನದ ಕೆಳಕ್ಕೆ ದೂಡಿಬಿಡುವುದಿಲ್ಲವೇ, ಹಾಗೆಯೇ. ಅಪ್ರಿಯವಾದುದನ್ನೂ ಸಾಧಿಸಲಾಗದ ಆಸೆ ಆಕಾಂಕ್ಷೆಗಳನ್ನೂ ತೋರ ಮನಸ್ಸಿನಿಂದ, ಆಳ ಮನಸ್ಸಿನ ಹಗೇವುಗಳಿಗೆ ಸಾಗಿಸಿ ಬಿಡುವುದು, ಮನಸ್ಸಿನ ಅಗತ್ಯವಾದ ಒಂದು ಕೆಲಸ.

ಆಳಮನಸ್ಸಿಗೆ ದೂಡಲ್ಪಟ್ಟ ಆಸೆ ಅಪ್ರಿಯಗಳು, ಹಗೇವುಗಳಲ್ಲಿ ಸ್ತಬ್ಧವಾಗಿದ್ದರೆ ಬಲು ಚೆನ್ನು, ಬಹಳ ಪಾಲು ಹಾಗೆಯೇ ಇರುತ್ತವೆ. ಆದರೆ ಕೆಲವು ವೇಳೆ ಅವುಗಳು ಪ್ರಬಲವಾಗಿದ್ದುದಾದರೆ, ತೋರಮನಸ್ಸಿಗೆ ಬರಲು ಆಗದೆ ಇರುವುದರಿಂದ ಇಚ್ಛಾಚಾಲಿತ ನರಗಳ ಮೂಲಕ ದೇಹದ ಯಾವುದಾದರೂ ಒಂದು ಅಂಗಕ್ಕೆ ವಕ್ಷಿಸುತ್ತದೆ, ಶನಿಯಂತೆ. ಕನಕವಲ್ಲಿಯಲ್ಲಿ ಗಂಟಲಿಗೆ ಹೀಗೆ ಆಳ ಮನಸ್ಸಿನ ಶನಿಗಳು ವಕ್ರಿಸಿದುವು. 'ಉಕೂ, ಕೂ, ಕೋ' ಮಾಡಲಾರಂಭಿಸಿದಳು ಕನಕವಲ್ಲಿ. ಆಳ ಮನಸ್ಸಿನ ಆಟಾಟೋಪವೇ ಇವುಗಳೆಲ್ಲಾ, ತೋರಮನಸ್ಸು ಈ ವ್ಯವಹಾರದಲ್ಲಿ ಯಾವ ಪಾತ್ರವನ್ನೂ ವಹಿಸುವುದಿಲ್ಲ. ಅಂದರೆ ಹೀಗೇಕೆ ಆಗುತ್ತಿದೆ ಎನ್ನುವುದು ಕನಕವಲ್ಲಿಗೆ ತಿಳಿಯುವುದೇ ಇಲ್ಲ. ವಕ್ರವಕ್ರವಾಗಿ ಹೀಗೆ ಆಡಿದರೆ, ಕಂಡ ಜನ ನಗುತ್ತಾರೆ ಎನ್ನುವ ಶಂಕೆಯೂ ಇರುವುದಿಲ್ಲ. ನಾಚಿಕೆಯೂ ಇರುವುದಿಲ್ಲ. ಇಂತಹ ನಡವಳಿಕೆಯು ಅವಳಿಗೆ ಅನಿವಾರ್ಯವಾಗಿರುತ್ತದೆ. ಹೀಗಾಡುವುದರಿಂದ ಆಳ ಮನಸ್ಸಿನಲ್ಲಿ ತುಸು ನೆಮ್ಮದಿಯೂ ಆಗುತ್ತದೆ.

ಹೀಗಾಡುವುದರಿಂದ, ಇವಳಿಗೆ ಯಾವುದೇ ಆಪತ್ತು ಬರಬಹುದು, ಎಂದು ಸುತ್ತಲೂ ಇರುವ ನೆಂಟರು, ಇಷ್ಟರು, ಸ್ನೇಹಿತರು, ಕಾತರಗೊಳ್ಳುತ್ತಾರೆ. ಕನಕವಲ್ಲಿಗೆ ಸಹಾನುಭೂತಿಯನ್ನು ತೋರುತ್ತಾರೆ. ಎಲ್ಲರ ಗಮನವೂ ನರಳುತ್ತಿರುವ ಕನಕವಲ್ಲಿಯುತ್ತ ಹರಿಯುತ್ತದೆ. ಹೀಗಾದಾಗ ಕನಕವಲ್ಲಿಯ ಆಳ ಮನಸ್ಸಿನಲ್ಲಿ