ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೧೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೧೨೬

ಮನಮಂಥನ

'ನನ್ನನ್ನು ಕಂಡರೆ ಇವರಿಗೆಲ್ಲಾ ಮಮತೆ. ನನಗಾಗಿ ಇವರೆಲ್ಲರೂ ಆತಂಕ ಪಡುತ್ತಾರೆ, ಎಲ್ಲರಿಗೂ ಬೇಕಾದವಳು ನಾನು' ಎನ್ನುವ ಅಹಂಕಾರವನ್ನು ಸಂತೋಷ ಪಡಿಸುವ ಭಾವನೆಯು ಆಕೆಯಲ್ಲಿ ಉಂಟಾಗುತ್ತದೆ. ಅದರಿಂದ ಸಮಾಧಾನವೂ ಆಗುತ್ತದೆ.

ಈ ಕಾರಣದಿಂದಾಗಿ ಈ ಬೇನೆಯ ಪ್ರದರ್ಶನವು ಅತಿ ಘೋರವಾಗಿ ಕಂಡರೂ ಅತಿ ಕ್ರೂರವಾಗಿ ಇತರರಿಗೆ ಕಾಣಿಸಿದರೂ, ರೋಗಿಗೆ ಉಪಾಯಕಾರಿಯಾಗುವುದಿಲ್ಲ. ಹಾಗೂ ಅತ್ಯಗತ್ಯವೂ ಆಗಿರುತ್ತದೆ. ಆದುದರಿಂದಲೇ ಇಂತಹ ಬೇನೆಯು ಬಡ ಪೆಟ್ಟಿಗೆ ವಾಸಿಯಾಗುವುದಿಲ್ಲ. ಬೇನೆಯ ಕಾಟವು ಹೆಚ್ಚು ಕಡಿಮೆಯಾದರೂ, ರೋಗಶೇಷವು ಬಲು ಕಾಲ ಉಳಿದಿರುತ್ತದೆ. ಆದರೆ ಬಾಳು ನಡೆಸುವುದಕ್ಕೆ ಕಂಟಕವಾಗುವುದಿಲ್ಲ.

ಗಂಟಲ ಡಾಕ್ಟರ ಬಳಿಗೆ ಕನಕವಲ್ಲಿಯು ಹೋದಳು. ಹಿಸ್ಟಿರಿಯಾ ಪ್ರದರ್ಶನವಿದು ಎಂದು ತಿಳಿದಾಯಿತು. ಆದರೆ ಅಹೋ ರಾತ್ರಿ 'ಉಕ್ಕೂ, ಕ್ರೂ ಕೋ,' ಮಾಡುತ್ತ ಇದ್ದರೆ ; ಸುಸ್ತಾಗುವುದಿಲ್ಲವೇ? ಇದನ್ನು ಮನೆಯವರಾದರೂ ತಡೆದುಕೊಳ್ಳುವುದು ಹೇಗೆ? ಉಪಶಮನವನ್ನಾದರೂ ಮಾಡಬೇಕು ; ಡಾಕ್ಟರು, ರೋಗ ನಿರ್ಮೂಲನವನ್ನು ಸಾಧಿಸಲಾಗದಿದ್ದರೂನೂ.

ಆದಕಾರಣ ಡಾಕ್ಟರು ಅಂದರು :- 'ಗಂಟಲಿನ ಒಂದು ನರ ಕೆರಳಿದೆ. ಅದರಿಂದ ಹೀಗೆ ಆಗುತ್ತದೆ. ಆ ನರವನ್ನು ಸುಡುತ್ತೇನೆ. ತತ್‌ಕ್ಷಣ, 'ಉಕ್ಕೂ ನಿಲ್ಲುತ್ತದೆ. ನಿನ್ನ ಬೇನೆಯು ಜಟ್ಟಂತ ವಾಸಿಯಾಗುತ್ತದೆ' ಎಂದು ಒತ್ತಿ ಒತ್ತಿ ಹೇಳಿದರು. ಕನಕವಲ್ಲಿಯ ಮನಸ್ಸಿನಲ್ಲಿ ವಾಸಿಯಾಗುತ್ತೆ : ತತ್‌ಕ್ಷಣ ವಾಸಿಯಾಗುತ್ತೆ, ಎನ್ನುವ ನಂಬಿಕೆಯು ನಾಟಲಿ, ಎಂದು.

ಆನಂತರ ಕೆಂಪಗೆ ಭಯಂಕರವಾಗಿ ಕಾಣುತ್ತಿದ್ದ ಇಲೆಕ್ಟಿಕ್ ಗುಳವನ್ನು, ಚೆನ್ನಾಗಿ ಕನಕವಲ್ಲಿಗೆ ಕಾಣಿಸುವಂತೆ, ಅಣಿ ಮಾಡಿಕೊಂಡು, ಗಂಟಲ ಒಳಭಾಗವೊಂದಕ್ಕೆ ತಾಕಿಸಿದರು, ಡಾಕ್ಟರು.

ಸಾಮಾನ್ಯವಾಗಿ ಗಂಟಲು ಬಲು ಸೂಕ್ಷ್ಮ ಬೆರಳೂ ಮುಟ್ಟಿದರೂ ವಾಂತಿಯಾಗುವ ಹಾಗಾಗುತ್ತದೆ. ವಾಕರಿಕೆಯು ಬರುತ್ತದೆ. ಆದರೆ ಕನಕವಲ್ಲಿಯು ಕಿಮಕ್ ಕಮಕ್ ಅನ್ನಲಿಲ್ಲ, ಸಾಕಷ್ಟು ಸುಟ್ಟು ಬರೆ ಹಾಕಿದಂತಾದರೂ, ತೆಪ್ಪಗೇ ಇದ್ದಳು.

ಹಿಸ್ಟಿರಿಯಾ ಪ್ರದರ್ಶನದಲ್ಲಿ ಅನಿಸ್ತಿಟಿಕ್ ಆಗುವುದು ಒಂದು ಸಾಮಾನ್ಯವಾದ