೧೨೭
ಚಿಹ್ನೆ. ಆ ಭಾಗದಲ್ಲಿರುವ ನರಗಳು ರೋಂವು ಹಿಡಿದಂತೆಯೋ ಸತ್ತಂತೆಯೇ ಆಗಿರುತ್ತದೆ. ಆದ್ದರಿಂದ ಚಿಟಿಕೆ ಹಾಕಲಿ, ಬರೆ ಹಾಕಲಿ, ಚುಚ್ಚಲಿ, ಕತ್ತರಿಸಲಿ, ರೋಗಿಯು ತೆಪ್ಪಗಿರುತ್ತಾಳೆ. ಒಂದು ಹಂತದ ತನಕ ಹೀಗೆ ಇರುತ್ತದೆ. ನಂತರ ಯಾತನೆಯು ಕಾಣಬರುತ್ತದೆ. ಆಗ ಕನಕವಲ್ಲಿಯು ಉರಿ ಉರಿ ಎಂದಳು. ಚಿಕಿತ್ಸೆಯನ್ನು ನಿಲ್ಲಿಸಲಾಯಿತು. 'ಉಕ್ಕೂ ಕ್ರೂ, ಕ್ರೋ,' ಈ ಗಲಾಟೆಯಲ್ಲಿ ನಿಂತು ಹೋಗಿತ್ತು. 'ಈಗ ಗುಣವಾದ ಹಾಗಿದೆ. ಉಸಿರು ಸರಾಗವಾಗಿ ಆಡುತ್ತಿದೆ. ಆದರೆ ಗಂಟಲಿನಲ್ಲಿ ಸ್ವಲ್ಪ ರಣವಾದಂತಿದೆ' ಎಂದಳು ಕನಕವಲ್ಲಿ.
ತಿರುಗಿ 'ಉಕೂ, ಶೂ, ಕ್ರೋ' ಮರುಕಳಿಸಲಿಲ್ಲ.
ಆದರೆ ಮೂರನೆಯ ದಿನದಿಂದ, ತೋಳಿನ ನರ ಸೆಳೆಯುತ್ತದೆ, ಎತ್ತಎತ್ತಲೋ ಎಳೆಯುತ್ತದೆ ಎಂದು ಕನಕವಲ್ಲಿಯು ನರಳಲಾರಂಭಿಸಿದಳು. ಭುಜವನ್ನು ಕಂಡೂ ಕಾಣದ ಹಾಗೆ ಕುಣಿಸಲು ಆರಂಭಿಸಿದಳು. ಇದೂ ಹಿಸ್ಟಿರಿಯಾದ ಇನ್ನೊಂದು ತರಹ ಪ್ರದರ್ಶನ!
ಆದರೆ ಈ ಪ್ರದರ್ಶನದಿಂದ ರೋಗಿಗೇನೂ ಸುಸ್ತು ಬಡಿಯುವುದಿಲ್ಲ. ಮನೆಯವರಿಗೆ ಕಾಟವನ್ನು ಕೊಡುವುದಿಲ್ಲ. ಹಾಗೂ ದೊಡ್ಡದಾದ ಘೋರವಾದ ಆ ಬೇನೆಯನ್ನು ವಾಸಿಮಾಡಿದ ವೈದ್ಯರು ಈ ಅಲ್ಪ ಬೇನೆಯನ್ನೂ ಸರಿಪಡಿಸುತ್ತಾರೆ ಎನ್ನುವ ನಂಬಿಕೆಯೂ ಕನಕವಲ್ಲಿಯಲ್ಲಿ ಉಂಟಾಗಿತ್ತು. ಇಂತಹ ಬೇನೆಗಳಲ್ಲಿ ವೈದ್ಯರಲ್ಲಿರುವ ಪೂರ್ಣ ನಂಬಿಕೆಯೇ ಗುಣಪಡಿಸುವ ಅಂಶಗಳಲ್ಲಿ ಮುಖ್ಯವಾದುದೊಂದು.
ಹಿಸ್ಟಿರಿಯಾ ಪ್ರದರ್ಶನವು ಉಗ್ರವಾಗಿ ಕಂಡು ಬಂದವರಲ್ಲಿ, ನಿಶ್ಲೇಷವಾಗಿ, ಬೇನೆಯು ನಿವಾರಣೆಯಾಗುತ್ತದೆ ಎಂದು ಹೇಳಬರುವುದಿಲ್ಲ. ಏಕೆಂದರೆ, ಅವರ ಹುಟ್ಟು ಗುಣ; ಬಾಳಿನ ಪ್ರಸಂಗಗಳು; ಸಂಸಾರ ಮತ್ತು ಸಾಮಾಜಿಕ ಪರಿಸರ; ಇವುಗಳನ್ನು ರೋಗಿಗೆ ಅನುಕೂಲವಾಗಿರುವಂತೆ ಮಾಡಲು ಅಸಾಧ್ಯ. ಆದರೆ ಸಾಮಾನ್ಯ ಬಾಳು ನಡೆಸುವುದಕ್ಕೆ ಕಂಟಕವಾಗದಂತೆ ಘೋರ ಪ್ರದರ್ಶನವನ್ನು ಸೌಮ್ಯ ಪ್ರದರ್ಶನವನ್ನಾಗಿ ರೂಪಾಂತರಿಸಬಹುದು. ರೋಗಿಯ ಮತ್ತು ಆಕೆಯ ಮನೆಯವರ ದೃಷ್ಟಿಯಿಂದ, ಈ ಫಲಿತಾಂಶವು ಪರಿಣಾಮಕಾರಿಯಾದುದು.
ಕನಕವಲ್ಲಿಯು ಈಗಲೂ ಅಂದರೆ ಏಳೆಂಟು ವರ್ಷಗಳಾದ ಮೇಲೆ, ಒಮ್ಮೊಮ್ಮೆ ಭುಜವನ್ನು ಕುಣಿಸುತ್ತಾಳೆ. ಒಮ್ಮೊಮ್ಮೆ ಮೊಣಕೈಯನ್ನು ಛಂಗಿಸುತ್ತಾಳೆ. ಆದರೆ ಚಾಕರಿಗೆ ತಪ್ಪದೆ ಹೋಗುತ್ತಿದ್ದಾಳೆ. ಮಕ್ಕಳ ತಾಯಾಗಿ ಸಂಸಾರವನ್ನೂ ಮಾಡಿಕೊಂಡಿದ್ದಾಳೆ. ಸಮಾಜದಲ್ಲೂ ಸರಸವಾಗಿರುತ್ತಾಳೆ. ಹೊರನೋಟಕ್ಕೆ