ಮನಮಂಥನ
ಮೂಲೆ ಹಿಡಿಯುವುದು. ಅಮ್ಮನು ಗದರಿಸಿದರೆ ಅಳುವುದು ; ಹೀಗಾಗುತ್ತಿತ್ತು. ಕಡೆಗೆ ಹಿಸ್ಟಿರಿಯಾದ ನಿರ್ಧನಿ ಪ್ರದರ್ಶನವೂ ಕಾಣಬಂದಿತ್ತು.
ಇದೆಲ್ಲವೂ ಆಕೆಯ ತಂದೆಯು ಒಪ್ಪಿಸಿದ ವರದಿ ; ಅವರನ್ನು ವಿವರವಾಗಿ ಪ್ರಶ್ನಿಸಿದಾಗ,
ವಯಸ್ಸು ಪಂಚಾಂಗ ಮತ್ತು ಜಾತಕದ ಪ್ರಕಾರ ೨೩ ಆಗಿದ್ದರೂ, ಗುಂಡಮ್ಮನ ಮನಸ್ಸು ೧೦-೧೨ ವರ್ಷದ ಹುಡುಗಿಯ ಮನಸ್ಸಿನಂತೆಯೇ ಇತ್ತು. ಬಾಲ್ಯದ ಮುಗ್ಧತೆಯಿಲ್ಲ ; ಬೆಳೆದವರ ದೃಢತೆಯೂ ಇಲ್ಲ. ಮನಸ್ಸು ಬೆಳೆಯುವುದು ; ಪರಿಸರದಿಂದ ಕಲಿತು ಪ್ರವೃದ್ಧವಾಗುವುದು ; ಒಂದು ರೀತಿಯಲ್ಲಿ ನಿಂತುಹೋಗಿತ್ತು. Immature Personality-Inadequate Personality ಎಂದು ಕರೆಯುತ್ತಾರೆ, ಇಂತಹವರನ್ನು ಇಂತಹವರಲ್ಲಿ ಮಾನಸಿಕ ಪಲ್ಲಟಗಳು ಆಗುವುದು ಹೆಚ್ಚು.
ಗುಂಡಮ್ಮನಿಗೆ ಇಂತಹ ಅಪೂರ್ಣ, ಅಪ್ರಬುದ್ಧ ವ್ಯಕ್ತಿತ್ವವಿತ್ತು. ಮದುವೆಯಾಗಿ ಗಂಡನ ಮನೆಗೆ ಹೋಗಬೇಕು ಎನ್ನುವ ಆಸೆಯೂ ಇತ್ತು. ಪ್ರಕೃತಿ ಸಹಜವಾದ, ದೇಹದ ಅಗತ್ಯಗಳ ಪೂರೈಕೆಗಾಗಿ, ಅವಳ ID, ಪುರಾತನ ಮನಸ್ಸು ಹಾತೊರೆಯುತ್ತಿತ್ತು. ಆದರೆ ವಿಚಾರಮಾಡುವ ಮನಸ್ಸು, ವಯಸ್ಸಿಗೆ ತಕ್ಕಂತೆ ಬೆಳೆಯದೆ ಇರುವ ಕಾರಣದಿಂದ ಅಮ್ಮನ ಸೆರಗನ್ನು ಹಿಡಿದುಕೊಂಡೇ ಇರುವುದು ಚೆನ್ನು ಎನ್ನುತ್ತಿತ್ತು. ದ್ವಂದ್ವ ಕಾದಾಟದಲ್ಲಿ, ಮನಸ್ಸು ಹಿಸ್ಟಿರಿಯಾ ಪ್ರದರ್ಶನವನ್ನು ಆರಂಭಿಸಿತು. ಗದರಿಸುತ್ತಿದ್ದ ಅಪ್ಪನ ಆದರವನ್ನು ಈ ಪ್ರದರ್ಶನವು ಸಾಧಿಸುತ್ತದೆ ಎಂದು ಗುಂಡಮ್ಮನ ಹುಡುಗು ಮನಸ್ಸು ಹೇಳುತ್ತಿತ್ತು. ಇದು ನಗೆಪಾಟಲಾಗಬಹುದು ಎನ್ನುವ ಯೋಚನೆಯು ಹುಡುಗು ಮನಸ್ಸಿಗೆ ಬರುವುದೇ ಇಲ್ಲ.
ಗುಂಡಮ್ಮನಿಗೆ ಮದುವೆಯೂ ಆಯಿತು. ಮೂರು ಮಕ್ಕಳೂ ಆಗಿವೆ. ಮದುವೆಯಾದ ಗಂಡನು ಹೊಟ್ಟೆಗೆ ಬಟ್ಟೆಗೆ ಸಾಕಾದಷ್ಟು ಸಂಪಾದಿಸುತ್ತಾನೆ. ಅವನಿಗೂ ಅಪ್ರಬುದ್ಧ ವ್ಯಕ್ತಿತ್ವ. ಹಾಗಾಗಿ ಗಂಡಹೆಂಡಿರಿಬ್ಬರೂ ಸಾಕಷ್ಟು ಜಗಳವಾಡುತ್ತಾರೆ. ದಾಂಧಲೆ ಎಬ್ಬಿಸುತ್ತಾರೆ, ರಂಪ ಮಾಡುತ್ತಾರೆ. ಉಂಡು ಮಲಗುವತನಕ.
ಹಿಸ್ಟಿರಿಯಾ ಪ್ರದರ್ಶವು ತುಸು ಹೆಚ್ಚು ತುಸು ಕಡಿಮೆ ಪ್ರಮಾಣದಲ್ಲಿ, ಗುಂಡಮ್ಮನಲ್ಲಿ ಆಗುತ್ತಲೇ ಇವೆ. ಆದರೆ ಸಂಸಾರವನ್ನು ನಡೆಸಿಕೊಂಡು ಹೋಗುವುದಕ್ಕೆ ಅಡಚಣೆಯಾಗುವಂತಹ ಉಲ್ಬಣಸ್ಥಿತಿಗೆ ಹತ್ತಿಲ್ಲ. ಸಮಾಜದ