ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೧೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಹಿಸ್ಟಿರಿಯಾ ಪ್ರದರ್ಶನಗಳು

೧೩೩

ದೃಷ್ಟಿಯಲ್ಲಿ ಗುಂಡಮ್ಮನದು ವೈನವಾದ ಸಂಸಾರವೇ. ಅಷ್ಟಾದರೆ ಸಾಲದೆ ?

ಜ್ಞಾನ ತಪ್ಪಿದ ಇರುದಯ ಮೇರಿ

'ತತ್‌ಕ್ಷಣ ಬರಬೇಕು, ಡಾಕ್ಟರೇ !” ಎಂದು ಏದುಬ್ಬಸಪಡುತ್ತ ಬಂದಿದ್ದವ ಅವಸರ ಪಡಿಸಿದ.

“ಏನಾಗಿದೆ ? ಯಾರಿಗೆ ? ವಿವರಗಳನ್ನು ಸ್ವಲ್ಪ ತಿಳಿಸಿದರೆ, ಸೂಕ್ತವಾದ ಔಷಧಿಗಳನ್ನೂ ಇತರ ಸಲಕರಣೆಗಳನ್ನೂ ಸಿದ್ಧಪಡಿಸಿಕೊಂಡು ಬರಬಹುದು. ಬರೀ ಸ್ಟೆತಾಸ್ಕೋಪು ಹಿಡಿದುಕೊಂಡು ಬಂದರೆ, ಏನು ಪ್ರಯೋಜನ ? ಗಾಬರಿಯಾಗಬೇಡ ; ಸ್ವಲ್ಪ ಸುಧಾರಿಸಿಕೋ, ಏನಾಯ್ತು ಹೇಳು, ಖಂಡಿತ ಬತ್ತೀನಿ' ಎಂದು ಹೇಳಿದೆ. ಅವನೇನೂ ಕುಳಿತು ಸುಧಾರಿಸಿಕೊಳ್ಳಲಿಲ್ಲ. ನಿಂತಲ್ಲೇ ಮೇಲುಸಿರು ಎಳೆಯುತ್ತಲೇ 'ಮಾತಾಡ್ತಾ ಕೂತಿದ್ದೀವಿ, ಇದ್ದಕ್ಕಿದ್ದ ಹಾಗೆಯೇ, ಜ್ಞಾನತಪ್ಪಿ ಬಿದ್ದು ಬಿಟ್ಟಳು, ನಮ್ಮ ಅಕ್ಕ ; ಬೇಗ ಬನ್ನಿ ಡಾಕ್ಟರೇ ! ಇಷ್ಟು ಹೊತ್ತಿಗೆ ಅವಳ ಪ್ರಾಣವೇ ಹೋಗಿಬಿಟ್ಟಿರುತ್ತೇನೋ ?' ಎಂದ.

'ಎಷ್ಟು ವಯಸ್ಸು ನಿಮ್ಮಕ್ಕಂಗೆ' ಎಂದೆ.

'ನನಗಿಂತ ಐದಾರು ವರ್ಷ ದೊಡ್ಡಳು. ಮೂವತ್ತಾಗಿರಬಹುದು. ನನಗೆ ಅವಳೊಬ್ಬಳೇ ಅಕ್ಕ. ಇನ್ನಾರೂ ನನಗಿಲ್ಲ' ಎಂದು ಹೇಳಿ ಅಳತೊಡಗಿದ.

ಅವನ ಸೈಕಲ್ಲನ್ನು ನಮ್ಮ ಮನೆಯಲ್ಲೇ ಬಿಟ್ಟ. ಕಾರಿನಲ್ಲಿ ನನ್ನ ಜೊತೆ ಕುಳಿತ. ಅವನ ಮನೆಗೆ ಹೋದೆವು.

ಮಂಚದ ಮೇಲೆ ರೋಗಿಯನ್ನು ಮಲಗಿಸಿದ್ದರು. ದೃಢ ಆರೋಗ್ಯದಿಂದಿದ್ದ ಮೂವತ್ತರ ಪ್ರಾಯದಾಕೆ. ಮೂರು ಮಕ್ಕಳೂ ಮಂಚದ ಸುತ್ತಾ ಅಳುಮುಖ ಮಾಡಿಕೊಂಡು ಕುಳಿತಿದ್ದರು. ನನ್ನನ್ನು ಕಂಡಕೂಡಲೆ, ರೋಗಿಯ ಕಾಲುಗಳನ್ನು ತಿಕ್ಕುತ್ತಾ ಮಂಚದ ತುದಿಯಲ್ಲಿ ಕೂತಿದ್ದ ಗಂಡ ಎದ್ದು 'ಅರ್ಧ ಗಂಟೆಯ ಹಿಂದೆ ತಟ್ಟಂತ ಜ್ಞಾನ ತಪ್ಪಿತು, ಡಾಕ್ಟರೇ ! ಚೆನ್ನಾಗಿಯೇ ಮಾತನಾಡುತ್ತಿದ್ದಳು. ಯಾವ ಕಾಯಿಲೆಯೂ ಇರಲಿಲ್ಲ. ಹೀಗೇಕಾಯಿತೋ, ದೇವರಿಗೇ ಗೊತ್ತು. ಸ್ವಲ್ಪ ಕಾಫಿಯನ್ನು ಕುಡಿಸಿದರೆ ಚೇತರಿಸಿಕೊಳ್ಳುತ್ತಾಳೇನೋ ಅಂತ, ಸ್ಟಾಂಗ್‌ಕಾಫಿ ಮಾಡಿ ತಂದೆ. ಗದುಗು ಹಾಕಿಕೊಂಡಿರುವ ಬಾಯಿನಂಚಿನಲ್ಲಿ ಒಂದು ಚಮಚ ಕಾಫಿ ಹಾಕಿದೆ. ಕಟವಾಯಿನಲ್ಲಿ ಅದು ಹೊರಕ್ಕೆ ಬಂತು. ಎಷ್ಟು ಕೂಗಿದರೂ ಮಾತಿಲ್ಲ. ಏನಾದರೂ ಮಾಡಿ ಬದುಕಿಸಿ, ಡಾಕ್ಟರೇ!' ಎಂದು ಕೇಳಿದ.

'ಅಂಗಳದಲ್ಲಿ ಮಾತಾಡುತ್ತಾ ನಾವೆಲ್ಲಾ ಕುಳಿತಿದ್ದೆವು. ಅಲ್ಲೇ ಜ್ಞಾನ ತಪ್ಪಿ