೧೩೯
ಆಗುತ್ತೆ ಎನ್ನುವ ಸಂಶಯವು ಮೂಡಿತ್ತು. ಅದು ದೃಢವಾಗುತ್ತಲೂ ಇತ್ತು. ಪರಿಹಾರ ಧನವು ದೊರಕುತ್ತದೆ. ಅಪಘಾತದ ನೆಪದಿಂದಾಗಿ ಲಾಭವನ್ನು ಪಡೆಯಬಹುದು, ಎಂಬುದು ತಿಳಿಯಿತು. ವಿಚಾರ ಮಾಡುವ ಯೋಗ್ಯತೆಯು ಇರಲಿಲ್ಲ. ತೋಳು ಸರಿಹೋಗಿ ಕೆಲಸಕ್ಕೆ ಹಿಂತಿರುಗಿದರೆ ಇನ್ನೂ ಹೆಚ್ಚು ಸಂಪಾದಿಸಬಹುದು ಎನ್ನುವ ವಿವೇಚನೆಯು ಬರಲಿಲ್ಲ. ಆಗ ಹಿಸ್ಟಿರಿಯಾ ತೆರನ ಪ್ರದರ್ಶನವು ಭದ್ರವಾಯಿತು. ಬಲವಾಗಿ ಬೇರೂರಿದ ಈ ಪ್ರವೃತ್ತಿಯು ಸ್ಥಿತವಾಯಿತು. ಪರಿಹಾರ ಧನವು ದೊರೆತರೂ, ಸ್ಥಿರವಾಗಿದ್ದುದರಿಂದ ಹಿಸ್ಟಿರಿಯಾ ಪ್ರದರ್ಶನವು ಮುಂದುವರೆಯಿತು.
ಇದೇ ರೀತಿಯಲ್ಲಿ ಅಪಘಾತಗಳಾದಾಗ, ತಲೆಗೆ ಅಲ್ಪ ಸ್ವಲ್ಪ ಪೆಟ್ಟು ಬಿದ್ದರೂ, ಅದೇ ಕಾರಣದಿಂದಾಗಿ ಸದಾಕಾಲ ಕಾಡುವ ತೀವ್ರವಾದ ತಲೆ ಶೂಲೆಯು ಉಂಟಾಗಬಹುದು. ಅದರಂತೆಯೇ ದೃಷ್ಟಿ ದೋಷವೂ ಪ್ರಾರಂಭವಾಗಬಹುದು. ಕಿವುಡೂ ಕಾಣಿಸಿಕೊಳ್ಳಬಹುದು. ಇತರರ ಕಣ್ಣಿಗೆ ಬಡಿಯುವಂತೆ ಕಾಣಿಸುವ ನ್ಯೂನತೆಗಳನ್ನೇ ಹಿಸ್ಟಿರಿಯಾ ಪ್ರದರ್ಶನದಲ್ಲಿ ಕಾಣುತ್ತೇವೆ.
ಅಪಘಾತದ ಹಿಸ್ಟಿರಿಯಾ ಪ್ರದರ್ಶನಕ್ಕೆ ಇತಿಮಿತಿಯೇ ಇಲ್ಲ. ಇವುಗಳಲ್ಲಿ ಮುಖ್ಯವಾದ ಅಂಶಗಳೆಂದರೆ ೧. ಹಿಸ್ಟಿರಿಯಾ ಪ್ರವೃತ್ತಿಯು ಹುಟ್ಟು ಜಾಯಮಾನ ವಾಗಿರುವುದು. ೨. ಅದಕ್ಕಿಂತಲೂ ಪರಿಣಾಮಕಾರಿಯಾದ ಅಂಶವೆಂದರೆ ಪರಿಸರದ ಪ್ರಭಾವ-Envirormental Factors. ೩. ಯಾವುದಾದರೂ ಒಂದು ರೀತಿಯ ಪ್ರಯೋಜನವನ್ನಾಗಲೀ ಲಾಭವನ್ನಾಗಲೀ ಪಡೆಯುವುದು. ಮೂಲವಾದ ಈ ಮೂರೂ ಕಾರಣಗಳಿಂದ Traumatic Hysteria, ಅಪಘಾತದ ಹಿಸ್ಟಿರಿಯಾ ಉಂಟಾಗುತ್ತದೆ.
ಆದರೆ ಇನ್ನು ಕೆಲವರಲ್ಲಿ ದೊರಕಬಹುದಾದ ಲಾಭದ ಅರಿವು ತೋರಮನಸ್ಸಿನಲ್ಲಿ ಸ್ಪಷ್ಟವಾಗಿರುತ್ತದೆ. ಅವರುಗಳೂ ನ್ಯೂನತೆಯ ಪ್ರದರ್ಶನವನ್ನು ಮಾಡುತ್ತಾರೆ. ಆದರೆ ಸ್ವಂತ ಇಚ್ಛೆಯಿಂದ, ಯೋಚನೆ ಮಾಡಿ, ಯೋಜನೆಯನ್ನು ಹೂಡುತ್ತಾರೆ. Malingerers, ನಟಿಸುವವರು, ಎಂಬ ಗುಂಪು ಇವರದು. ಸೈನ್ಯದ ಹಾಜರಾತಿಯಿಂದ ತಪ್ಪಿಸಿಕೊಳ್ಳುವವರಲ್ಲಿ ಇಂತಹವರು ಬಹುಸಂಖ್ಯೆಯಲ್ಲಿರುತ್ತಾರೆ.
ಮಗುವಿಗೆ ಹುಟ್ಟಿದ ಹಬ್ಬವನ್ನು ಮಾಡಬೇಕು, ಎಂದು ಆಫೀಸಿನಲ್ಲಿ ರಜವನ್ನು ಕೇಳಿದರೆ, ಕೊಡುತ್ತಾರೆಯೇ? ಅದರ ಬದಲು ತಲೆನೋವು, ಹೊಟ್ಟೆ ಮುರಿತ ಎಂದು ರಜೆ ಬೇಡಿದರೆ ಸುಲಭವಾಗಿ ದೊರೆಯುತ್ತದೆ. ಲಘುವಾದ