ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕೃತಜ್ಞತೆ

ಈ ಲೇಖನಗಳನ್ನು ಬರೆಯಲು ಒತ್ತಾಯಪಡಿಸಿದ, || ವೈಕುಂಠರಾಜುವಿಗೂ ಮತ್ತು ಒಲವಿನಿಂದ ಪೋತ್ಸಾಹಿಸಿದ, ಚಿ|| ಟಿ. ಎಸ್. ರಾಮಚಂದ್ರನಿಗೂ ಮತ್ತು ಅವರುಗಳ ಮುಖವಾಡವಾದ 'ಪ್ರಜಾವಾಣಿ'ಗೂ ಚೊಚ್ಚಲ ಕೃತಜ್ಞತೆ.

ಪುಸ್ತಕ ರೂಪದಲ್ಲಿ ಪ್ರಕಟಿಸಲು, ಉತ್ಸಾಹವನ್ನು ತುಂಬಿದ, ಕನ್ನಡ ಪರಿಷತ್ ಉತ್ಸಾಹೀ ಅಧ್ಯಕ್ಷ ಶ್ರೀ ಜಿ. ನಾರಾಯಣ ; ಮತ್ತು ಅವರ ಬಲ-ತೋಳಾದ ಶ್ರೀ ಆರ್.ಎಸ್. ರಾಮರಾಯರಿಗೂ ಮರುಚಲ ಕೃತಜ್ಞತಾರ್ಪಣೆ.

ಅಚ್ಚುಕಟ್ಟಾಗಿ, ಶ್ರದ್ಧೆ ಮತ್ತು ಆದರದಿಂದ, ಮೊದಲ ಮುದ್ರಣದಂತೆಯೇ ಅಂದವಾಗಿ ಅಚ್ಚುಮಾಡಿದ ಬಿ. ಎಂ. ಶ್ರೀಕಂಠಯ್ಯ ಅಚ್ಚು ಕೂಟ ಅವರಿಗೆ ಕೃತಜ್ಞ ಎಂದರೆ ಅವರಿಗೆ ಬೇಸರವಾಗುತ್ತದೆಯೇನೋ ಎಂಬ ಅನುಮಾನ. ಕಾರಣ ಅವರಿಗೆ ಧನ್ಯವಾದಗಳು.

ಸುಮಾರು ಮೂರು ಕೋಟಿ ಸಂಖ್ಯೆಯ ಕನ್ನಡಿಗರಲ್ಲಿ, ಮೂವರಾದರೂ ಈ ಪುಸ್ತಕವನ್ನು ಓದಬಹುದು. ಬಹಳ ಕಷ್ಟಪಟ್ಟು ಓದಬಹುದು. ಆ ಮೂವರಿಗೂ ಕೃತಜ್ಞ

ಪುಸ್ತಕವನ್ನು ಓದಿ, ಇದೇನು ಈ ಮುದುಕ | ಮಕ್ಕಳ ಹಾಗೆ ಬರೆದಿದ್ದಾನೆ; ಇದಕ್ಕಿಂತ ಅತಿ ಸೊಗಸಾಗಿ, ಸರಳವಾಗಿ, ಮುಂದುವರೆಯುತ್ತಿರುವ ಈ ವೈಜ್ಞಾನಿಕ ಅರಿವನ್ನು ಪ್ರಚಾರ ಮಾಡುತ್ತೇನೆ' ಎಂದು ನನ್ನ ಸಹೋದ್ಯೋಗಿಗಳಲ್ಲಿ ಯಾರಾದರೂ ಈಗಿ ನಕ್ಕು, ಸಮಕಾಲೀನ ಪ್ರಜ್ಞೆಯಿಂದ ಹೊಸ ಪುಸ್ತಕವನ್ನು ಬರೆಯುವಂತಾದರೆ, ಅತ್ಯಂತ ಕೃತಜ್ಞ

ಎಂ. ಶಿವರಾಂ