ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೧೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಹಿಸ್ಟಿರಿಯಾ ಪ್ರದರ್ಶನಗಳು

೧೪೩

ಆಘಾತಗಳು, ಮನಸ್ಸಿಗಾಗಲೀ, ಮೈಯ್ಯಗಾಗಲೀ ಸಂಭವಿಸಿದರೆ, ಆಗ ಹಿಸ್ಟಿರಿಯಾದ ವಿವಿಧ ರೂಪಾಂತರ ಪ್ರದರ್ಶನಗಳಲ್ಲಿ ಪರ್ಯವಸಾನವಾಗಬಹುದು. ಅಥವಾ ಇತರ ಮಾನಸಿಕ ಬೇನೆಗಳೂ ಕಾಣಬರಬಹುದು . ಮುದ್ದು ಕೃಷ್ಣನ ರಚ್ಚೆಯು, ಮೆದುಳು ಸಂಪೂರ್ಣ ಅಭಿವೃದ್ಧಿಯಾಗದೆ ಇರುವ ಆ ವಯಸ್ಸಿನಲ್ಲಿ ಸಹಜವಾದುದು. ಪ್ರೌಢರಾದಮೇಲೂ ಇದೇ ನಡವಳಿಕೆಯು ಮತ್ತೂ ಉಗ್ರವಾಗಿ ಕಾಣಿಸಿಕೊಂಡರೆ, ಹಿಸ್ಟಿರಿಯಾ ಪ್ರದರ್ಶನದಲ್ಲಿ ಅಂತ್ಯವಾಗಬಹುದು. ವ್ಯಾವಹಾರಿಕವಾದ ಪಂಚಾಂಗದ ವಯಸ್ಸಿನಂತೆಯೇ ಮೆದುಳೂ ಅಭಿವೃದ್ಧಿಯಾಗುತ್ತದೆ ಎಂದೇನೂ ಇಲ್ಲ. ಇದನ್ನು ಆಗಲೇ ತಿಳಿದಿದ್ದೇವೆ. ಹಿಸ್ಟಿರಿಯಾ ಬಡಿದವರ ಮನಸ್ಸು immature ಆಗಿರುತ್ತದೆ.

ಈ ತೆರನ ಜನರು ರಾಗಭಾವಗಳನ್ನು ಅತಿಯಾಗಿ ಪ್ರದರ್ಶಿಸುತ್ತಾರೆ. ಕೆಲವು ದಿನಗಳಿಂದ ಕಾಣದೆ ಇದ್ದ ಸ್ನೇಹಿತನನ್ನು ನೋಡಿದರೆ, ಬಾಚಿ ಬಿಗಿಯಾಗಿ ತಬ್ಬಿಕೊಂಡು ತಮ್ಮ ವಿಶ್ವಾಸದ ಪ್ರದರ್ಶನವನ್ನು ಸಂಕೋಚವಿಲ್ಲದೆ ಮಾಡುತ್ತಾರೆ. ಆದರೆ ರಾಗಭಾವಗಳು ಗಾಢವಾಗಿರುವುದಿಲ್ಲ. 'ಏನಮ್ಮಾ ಲೋ' ಎಂದು ಎಲ್ಲರೆದುರಿಗೂ ಬಾಚಿ ತಬ್ಬಿಕೊಂಡು ಆನಂದಭಾಷ್ಪಗಳನ್ನು ತೊಟ್ಟಿಕ್ಕಿಸಿದವರು ; ಅದೇ ಸ್ನೇಹಿತನ ಕಾಲು ಮುರಿದಿದೆ, ಆಸ್ಪತ್ರೆಯಲ್ಲಿದ್ದಾನೆ ಎಂದು ಕೆಲವು ಕಾಲಾನಂತರ ಹೇಳಿದರೆ 'ಹಾಗಾ' ಎಂದಂದು ತಮ್ಮ ಪಾಡಿಗೆ ತಾವಿರುತ್ತಾರೆ.

ಇತರ ಮಾನಸಿಕ ಉಪದ್ರವಗಳಲ್ಲಿರುವಂತೆ ಹಿಸ್ಟಿರಿಯಾ ಬೇನೆಯಲ್ಲಿಯೂ, ರೋಗಿಯು ಮಾನಸಿಕವಾಗಿ 'ತಾನು' 'ತನ್ನದು' ಎಂಬ ಸ್ವಾರ್ಥ ಭಾವನೆಯನ್ನು ಉಗ್ರವಾಗಿ ಹೊಂದಿರುತ್ತಾನೆ. ಸ್ವಾರ್ಥಿ ಪ್ರವೃತ್ತಿಯು ವಿಚಿತ್ರ ರೂಪುಗಳನ್ನು ಧರಿಸುತ್ತದೆ. ತನ್ನ ಕುರ್ಚಿಯಲ್ಲಿ ಇತರರು ಯಾರೂ ಕೂರಬಾರದು ; ತನ್ನ ಗೆಳತಿಯನ್ನು ಇತರ ಹೆಣ್ಣುಗಳು ಕೂಡ ಮಾತನಾಡಿಸಬಾರದು ; ತನಗೆ ಬಿದ್ದ ಪೆಟ್ಟಿ ಅತಿ ಭಯಂಕರವಾದುದು ; ತನ್ನನ್ನು ಕುಟುಕಿದ ಚೇಳಿಗೆ ಎರಡಂಗುಲದ ಕೊಂಡಿಯಿತ್ತು ; ಇತ್ಯಾದಿ ಇತ್ಯಾದಿ 'ತನ್ನ' ತನವನ್ನೇ ಮುಂದು ಮಾಡುತ್ತಾನೆ.

ಕನಕವಲ್ಲಿಯ ಉಕ್ಕೂ ಕ್ರೂ ಕ್ರೋ'ದಲ್ಲಿಂಯೂ, ಗುಂಡಮ್ಮನ ನಿರ್ಧ್ವನಿಯಲ್ಲಿಯೂ, ಇರುದಯ ಮೇರಿಯು ಜ್ಞಾನ ತಪ್ಪಿದುದರಲ್ಲಿಯೂ ; ಈ ಎಲ್ಲಾ ಹಿಸ್ಟಿರಿಯಾ ಪ್ರದರ್ಶನಗಳಲ್ಲಿ ಮುದ್ದುಕೃಷ್ಣನ ರಚ್ಚೆಯ ಕುರುಹನ್ನು ಕಾಣಬಹುದು. ಕಾಲಕ್ಕೆ ಅನುಗುಣವಾಗಿ, ಮೆದುಳು ಮತ್ತು ಮನಸ್ಸು ಅಭಿವೃದ್ಧಿಯಾಗದೆ ಇರುವುದು ; 'ತನ್ನ ತನವನ್ನೇ ವಿಪರೀತವಾಗಿ ಬೆಳೆಸಿಕೊಂಡು, 'ತನ್ನತನದ' ಕೊಟೆಯನ್ನು ತನ್ನ ಸುತ್ತಲೂ ನಿರ್ಭೇದ್ಯವಾಗಿ ಕಟ್ಟಿಕೊಳ್ಳುವುದು ;