ಮನಮಂಥನ
ತೆಂಗಿನಮರದಿಂದ ಬಿದ್ದಾಗ, ತಲೆಯ ಚಿಪ್ಪು ಒಡೆದು, ಮೆದುಳಿನ ಮುಂಭಾಗಕ್ಕೆ ಘಾಸಿ ಮಾಡಿತ್ತು. ಅದೊಂದು ಅರೆಕ್ಷಣ. ಅನಂತರ ಚಿಪ್ಪ ಮಿಡಿದೆದ್ದು ಸ್ವಸ್ಥಾನವನ್ನು ಪಡೆದಿತ್ತು. ಆದರೂ ಆ ವೇಳೆಗೆ ಮೆದುಳಿನಲ್ಲಿ ಗಾಯವಾಗಿತ್ತು. ಹಣೆಯ ಮೇಲೆ ಆಗಿದ್ದ ಗಾಯವು ಕೆಲವು ದಿನಗಳಲ್ಲಿ ವಾಸಿಯಾಯಿತು.
ಆದರೆ ಮೆದುಳಿನಲ್ಲಿ ಹರಿದು ಹೋಗಿದ್ದ ಭಾಗವು ವಾಸಿಯಾಗಲು ಸ್ವಲ್ಪ ಹೆಚ್ಚು ಕಾಲವಾಯಿತು. ಹೀಗಾಗುವಾಗ, ಚರ್ಮದಲ್ಲಿ ಆದಂತೆಯೇ ಮೆದುಳಿನಲ್ಲೂ Scar Tissue ಬೆಳೆಯಿತು. Scar ಅಥವಾ ಗಾಯದ ಕಲೆಯು, ಹಣೆಯ ಮೇಲೆ ಮೊದಲಿನಂತಿದ್ದ ಚರ್ಮದಂತಿರುವುದಿಲ್ಲ ; ಮೆದುಳಿನಲ್ಲಿಯೂ ಹಾಗೆಯೇ, ಚರ್ಮದ Scar ಬೆವರುವುದಿಲ್ಲ. ಚರ್ಮದಂತೆ ಅದು ಇಂದ್ರಿಯ ಕೆಲಸಗಳನ್ನು ಮಾಡಲು ಸಾಧ್ಯವಿಲ್ಲ. ಅದೊಂದು ನಿರ್ಜೀವವಾದ ರಕ್ಷಾಕವಚ ಮಾತ್ರ ಮೆದುಳಿನಲ್ಲಿ ಮೂಡಿದ Scar ಕೂಡ, ರಕ್ಷೆಯೇ ಹೊರತು, ಆ ಭಾಗದ ಮೆದುಳೂ ಮೊದಲು ಮಾಡುತ್ತಿದ್ದಂತೆ, ಕಾರ್ಯ ಮಾಡಲಾರದು. ಇಂತಹ ಪರಿಸ್ಥಿತಿಗಳಲ್ಲಿ ಮೆದುಳಿನ ಒಂದು ಭಾಗವು ಬೇನೆಯಾಗಿದೆ ಎಂದು ಹೇಳಲಾಗದು ; ಆದರೆ ಅದು ತನ್ನ ಸಾಮಾನ್ಯ ಕಾರ್ಯಗಳನ್ನು ಮಾಡಲು ಯೋಗ್ಯವಾಗಿರುವುದಿಲ್ಲ.
ಹೀಗಾದವರಲ್ಲಿ ಆನಂತರ ಹಿಸ್ಟಿರಿಕಲ್ ನಡವಳಿಕೆಯನ್ನು ಕಾಣುತ್ತೇವೆ. ಅಂತಹವರು ಹಿಸ್ಟಿರಿಕಲ್ ಪ್ರದರ್ಶನವನ್ನು ಪುಸ್ತಕದಲ್ಲಿ ವಿವರಿಸಿದಂತೆ ನಡೆಸುತ್ತಾರೆ.
ಗಾಯಗಳೊಂದೇ ಅಲ್ಲ ; ಮೆದುಳಿಗೆ ಇತರ ರೋಗಗಳೂ ತಗಲಬಹುದು. ರಕ್ತದ ಒತ್ತಡವು ಅಧಿಕವಾಗಿ (High Blood Pressure) ಮೆದುಳಿನ ರಕ್ತನಾಳಗಳು ಕಠಿಣವಾಗಿ; ಸಾಕಷ್ಟು ಮತ್ತು ಅಗತ್ಯವಾದಷ್ಟು ರಕ್ತವು ಮೆದುಳಿಗೆ ಸರಬರಾಜಾಗುವುದಿಲ್ಲ. ಆಗ ಕೂಡ ಮೆದುಳಿನ ಕಾರ್ಯಕ್ಕೆ ಅಡಚಣೆಯುಂಟಾಗಿ, ವಯಸ್ಕರು ಮಕ್ಕಳಂತಾಗಲು ಸಾಧ್ಯ.
ಇದರಂತೆಯೇ ಮೆದುಳಿನಲ್ಲಿ ಬೆಳೆಯುವ ಕೆಲವು ಗಡ್ಡೆಗಳೂ ಮೆದುಳಿನ ಸಾಮಾನ್ಯ ಕಾರ್ಯಕ್ಕೆ ಅಡಚಣೆಯನ್ನುಂಟುಮಾಡುತ್ತವೆ. ಮೊದಮೊದಲ ಹಂತದಲ್ಲಿ ಹಿಸ್ಟಿರಿಯಾ ಪ್ರದರ್ಶನದಂತೆ ಇರಲು ಸಾಧ್ಯ.
ಅಂದರೆ ಮುದುಕರಲ್ಲಿ ಕೂಡ ಹಿಸ್ಟಿರಿಯಾದ ಪ್ರದರ್ಶನವನ್ನು ಕಾಣಬಹುದು ಎಂದಂತಾಯಿತು. ಮುದುಕರಾಗುವ ವೇಳೆಗೆ, ಮೆದುಳು ಮತ್ತು ಮನಸ್ಸ ಸಂಪೂರ್ಣವಾಗಿ ಅಭಿವೃದ್ಧಿಯಾಗಿರುತ್ತದೆ. ಅಂದಮೇಲೆ ಮಕ್ಕಳಲ್ಲಿ ಕಾಣಬರುವ ಚಿಹ್ನೆಗಳು ಮುದುಕರಲ್ಲಿ ಹೇಗೆ ಸಾಧ್ಯ ಎಂದು ಕೇಳಬಹುದು. ತಲೆಗೆ ತಗುಲಿದ ಆಘಾತದಿಂದ ಮೆದುಳು ಅಸ್ತವ್ಯಸ್ತವಾಗುತ್ತದೆ. ತತ್‌ಕಾರಣ ಮನಸ್ಸ