ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೧೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೧೪೮

ಮನಮಂಥನ

ಆಗಿತ್ತು. ಆದಕಾರಣ ಶಸ್ತ್ರಚಿಕಿತ್ಸೆಯು ಸಂಪೂರ್ಣ ಯಶಸ್ವಿಯಾಯಿತು. ಅದಾದಮೇಲೆ 'ತಲೆನೋವು' ಅಂತ ಅವ ನರಳಲೇ ಇಲ್ಲ.

ಗಡ್ಡೆಯು ಬೆಳೆಯತೊಡಗಿದ್ದಾಗ, ಅತಿ ಪುಟ್ಟದಾಗಿದ್ದುದರಿಂದ, ಸುತ್ತಲೂ ಆರೋಗ್ಯದಿಂದಿದ್ದ ಮೆದುಳಿನ ಭಾಗವು ಮುಚ್ಚಿಕೊಂಡಿದ್ದುದರಿಂದ ತಜ್ಞರ ಪರೀಕ್ಷೆಯಲ್ಲೂ ಪತ್ತೆಯಾಗಲಿಲ್ಲ. ಆ ಕಾಲದಲ್ಲಿ ಅನುಭವಿಸುತ್ತಿದ್ದ ರೋಗಿಯು ಹಿಸ್ಟಿರಿಯಾ ಪ್ರದರ್ಶನವನ್ನು ಮಾಡುತ್ತಿದ್ದ. ಗಡ್ಡೆಯು ಮೆದುಳನ್ನು ತುಸು ಒತ್ತುತ್ತಲೇ ಇದ್ದಿರಬೇಕು.

ಒಂದು ಪ್ರಮಾಣಕ್ಕೆ ಗಡ್ಡೆಯು ಬೆಳೆದಾಗ ಪತ್ತೆಯಾಯಿತು. ಅದನ್ನು ತೆಗೆದುಹಾಕಿದ ಮೇಲೆ, ತಲೆನೋವು ತಿರುಗಿ ಬರದೇ ಇದ್ದುದರಿಂದ, ಆ ಗಡ್ಡೆಯೇ ತಲೆನೋವಿಗೂ, ಹಿಸ್ಟಿರಿಯಾದಂತಹ ಪ್ರದರ್ಶನಕ್ಕೂ ಕಾರಣ ಎಂದು ಖಂಡಿತವಾಯಿತು.

ಹಿಸ್ಟಿರಿಯಾ ಪ್ರದರ್ಶನವನ್ನು ಎಳೆಯರಲ್ಲಿಯೂ ಕಾಣಬಹುದು : ಪೌಗಂಡ ವಯಸ್ಸಿನ ಯುವಕ-ಯುವತಿಯರಲ್ಲೂ ಕಾಣಬಹುದು. ಮದುಕರಲ್ಲಿಯೂ ನೋಡಬಹುದು. ಹೆಂಗಸರಲ್ಲಿ ಈ ಪ್ರದರ್ಶನವು ಸ್ವಲ್ಪಮಟ್ಟಿಗೆ ಅಧಿಕವಾಗಿರುತ್ತದೆ. ಆದರೆ ಗಂಡಸರಲ್ಲಿಯೂ ಕಂಡುಬರುತ್ತದೆ.

ಬಡವರು ಬಲ್ಲಿದರು ಎನ್ನುವ ವ್ಯತ್ಯಾಸವನ್ನು ಹಿಸ್ಟಿರಿಯಾವು ಗಮನಿಸುವುದಿಲ್ಲ. ಮಂಕರು, ಹಿಂದುಳಿದವರು, ಗುಡ್ಡಗಾಡಿನವರು, ಜಾಣರು, ಮುಂದುವರಿದವರು, ನಾಗರಿಕರು, ಇವರೆಲ್ಲರಲ್ಲಿಯೂ ಹಿಸ್ಟಿರಿಯಾ ಪ್ರದರ್ಶನವನ್ನು ಕಾಣಬಹುದು. ಆದರೆ ಚುರುಕು ಬುದ್ಧಿಯವರಲ್ಲಿ, ಸುಸಂಸ್ಕೃತರಲ್ಲಿ, ಈ ಬೇನೆಯು ತುಂಬಾ ಕಡಿಮೆಯಾಗಿರುತ್ತದೆ.

ಇತರ ಮಾನಸಿಕ ಅವ್ಯವಸ್ಥೆಗಳೊಂದಿಗೂ, ಹಿಸ್ಟಿರಿಯಾವು ಜತೆಯಾಗಬಹುದು. ಅದರಲ್ಲೂ ಆತಂಕದಿಂದ 'Anxiety Syndrome' ನರಳುವವರಿಗೆ ಹಿಸ್ಟಿರಿಯಾವೂ ಮೇಲು ಹೊದಿಕೆಯಾಗಬಹುದು. ಸಾಮಾನ್ಯವಾಗಿ ಆಗಿಯೂ ಆಗುತ್ತದೆ. ಒಂದೇ ರೋಗಿಯಲ್ಲಿ, ಆತಂಕ ಮತ್ತು ಹಿಸ್ಟಿರಿಯಾಗಳು ಈಗ ಇದು, ಆಗ ಇನ್ನೊಂದು, ಹೀಗೆ ಕಣ್ಣುಮುಚ್ಚಾಲೆಯಾಡುತ್ತ ಕಾಡುವುದು ಸಾಮಾನ್ಯ.

ಹಿಸ್ಟಿರಿಯಾದ ಚಿಕಿತ್ಸೆ

'ಉಕ್ಯೂ ಕ್ಯೂ ಕ್ಯೂ' ಎಂದು ಅವಲಕ್ಷಣವಾಗಿ ಕರ್ಕಶಿಸುತ್ತಿದ್ದ ಕನಕವಲ್ಲಿಯು