ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೧೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಹಿಸ್ಟಿರಿಯಾ ಪ್ರದರ್ಶನಗಳು

೧೪೯

ಸೂಕ್ತ ಚಿಕಿತ್ಸೆಯಾದ ನಂತರ, ಉಕ್ಕೂ, 'ವನ್ನು ನಿಲ್ಲಿಸಿದಳು. ಆದರೆ, ಕತ್ತಿನಲ್ಲಿ ಈ ನರವು ಮಿಡಿಯುತ್ತದೆ, ಹಸ್ತದ ಮಣಿಕಟ್ಟಿನ ನರವು ಬಡಿಯುತ್ತದೆ, ಎಂದು ಒದ್ದಾಡುತ್ತಲೇ ಇದ್ದಳು. 'ಉಕ್ಕೂ ' ಸ್ಥಿತಿಯಲ್ಲಿ ಮನೆಗೆಲಸ ಯಾವುದನ್ನೂ ಮಾಡಲಾಗದೆ ಬಿದ್ದಲ್ಲೇ ಒದ್ದಾಡುತ್ತ ಮನೆಯವರನ್ನೆಲ್ಲಾ ಗೋಳುಹುಯ್ದುಕೊಳ್ಳುತ್ತಿದ್ದಳು. ಆದರೆ ಈಗ 'ಇಲ್ಲಿ ಮಿಡಿತ, ಅಲ್ಲಿ ಸೆರೆತ' ಅಂತ ಗೊಣಗುತ್ತಿದ್ದರೂ, ಎಂತದೋ ಮುಜುಗರವಾಗುತ್ತಿದೆ ಎಂದು ಹೇಳುತ್ತಿದ್ದರೂ, ರೋಗಶೇಷಗಳು ಸ್ವಲ್ಪ ಉಳಿದಿದ್ದರೂ, ಮನೆಗೆಲಸವನ್ನು ಮಾಡುತ್ತಿದ್ದಾಳೆ. ಕಚೇರಿಯ ಕೆಲಸವನ್ನೂ ನಿಭಾಯಿಸುತ್ತಿದ್ದಾಳೆ. ಮಕ್ಕಳನ್ನೂ ಸರಿಯಾಗಿ ನೋಡಿಕೊಂಡು, ಒಳ್ಳೆಯ ತಾಯಿಯಾಗಿದ್ದಾಳೆ. ರೋಗಶೇಷವು ಉಳಿದಿದ್ದರೂ, ಸಾಮಾನ್ಯ ಜೀವನವು ಅಡಚಣೆಯಿಲ್ಲದೆ ಸಾಗುತ್ತಿದೆ.

ಗುಂಡಮ್ಮನ ನಿರ್ಧ್ವನಿಯು ಚಿಕಿತ್ಸೆಯಿಂದ ನಿವಾರಿಸಲ್ಪಟ್ಟಿತು. ಆಕೆಯು ಸರಾಗವಾಗಿ ಮಾತನಾಡುತ್ತಾಳೆ. ಧ್ವನಿಯೇನೋ ಸ್ವಲ್ಪ ಬದಲಾಯಿಸಿದೆ ; ತುಸು ಕರ್ಕಶವಾಗಿದೆ. ಮಾತನಾಡುವಾಗ ಈಗಲೂ ಒಮ್ಮೊಮ್ಮೆ ನರಸಿಂಹ ದೇವರ ಬಾಯಿನ ತರಹ, ತನ್ನ ಬಾಯನ್ನು ಕಷ್ಟಪಟ್ಟು ಹಿಗ್ಗಿಸುತ್ತಾಳೆ. ಆದರೆ ಧ್ವನಿಯು ಸುಲಭವಾಗಿ ಹೊರಡುತ್ತದೆ. ಹೆಣ್ಣನ್ನು ನೋಡಲು ಬಂದಿದ್ದವ, ಹೆಣ್ಣಿನ ಮನೆಯ ಅಚ್ಚುಕಟ್ಟು ಮತ್ತು ಅಂತಸ್ತನ್ನೂ ನೋಡಿ, ಮದುವೆಗೆ ಒಪ್ಪಿದ. ಈಗ ವಾರಣವಾಗಿ ಸಂಸಾರವನ್ನು ಮಾಡಿಕೊಂಡು, ಗುಂಡಮ್ಮ ಗಂಡನೊಂದಿಗೆ ತಂದೆಯ ಮನೆಯಲ್ಲಿಯೇ ಇದ್ದಾಳೆ ; ಸುಖವಾಗಿ

ಇರುದಯ ಮೇರಿಗೆ ಈಗ ಭವಳಿ ಬಂದು ಜ್ಞಾನ ತಪ್ಪುವುದಿಲ್ಲ. ಮೆಚ್ಚಿದ ತರುಣಿಯನ್ನು ತಮ್ಮನು ಮದುವೆಯಾಗಲು, ನಿರ್ವಾಹವಿಲ್ಲದೆ, ವಾಸ್ತವಿಕ ಸ್ಥಿತಿಯನ್ನು ಮನಗಂಡು, ಒಪ್ಪಿದಳು. 'ನಾಲೈದು ಬಾರಿ ಆ ಹುಡುಗಿಯೊಂದಿಗೆ ಮಾತನಾಡಿದೆ. ಕ್ರಿಶ್ಚಿಯನ್ನೋ, ಹಿಂದುವೋ, ತುರುಕರ ಹುಡುಗಿಯೋ, ಯಾರಾದರೇನು ? ತುಂಬಾ ಜಾಣೆ, ಶೀಲವಂತೆ, ಗುಣಸಂಪನ್ನೆ ; ದೊಡ್ಡವರು, ಹಿರಿಯರು, ಎಂದರೆ ಎಷ್ಟು ಮರ್ಯಾದೆಯಿಂದ ನಡೆದುಕೊಳ್ಳುತ್ತಾಳೆ. ಅಂತ' ಎಂದು ಹಲವಾರು ಬಾರಿ ತನ್ನವರೊಂದಿಗೆ ಹೆಮ್ಮೆಯಿಂದ ಹೇಳಲಾರಂಭಿಸಿದ್ದಳು.

'ಕ್ರಿಶ್ಚಿಯನ್ನಾಗಿ ಆ ತರುಣಿಯನ್ನು ಮಾತಾಂತರ ಮಾಡಿಸಿ, ನಂತರ ಮದುವೆ ಮಾಡಿಸಬೇಕು' ಎಂಬ ಆಸೆಯೇನೋ ಇರುದಯ ಮೇರಿಯಲ್ಲಿ ಹೆಡೆಯಾಡಿಸುತ್ತಿತ್ತು. ಆದರೆ ಆ ಹುಡುಗಿಯು ಈ ಆಸೆಗೆ ತುಂಡುಹಾಕಿತ್ತು. 'ಸಿಎಲ್ ಮ್ಯಾರೇಜ್ ಆಗುವುದಾದರೆ ನಾನು ಒಪ್ಪುತ್ತೇನೆ. ಮತಾಂತರವನ್ನು ನಾ