ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೧೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಹಿಸ್ಟಿರಿಯಾ ಪ್ರದರ್ಶನಗಳು

೧೫೧

ಯಾವ ಉತ್ತಮ ಪರಿವರ್ತನೆಯನ್ನೂ ನಿರೀಕ್ಷಿಸಲಾಗದು.

ಹಿಸ್ಟಿರಿಯಾ ಪ್ರದರ್ಶನವು ಬೇನೆಯಾಗಿ ಪರಿಣಮಿಸಿದ ಮೇಲೆ, ಉಪಶಮನವನ್ನು ಮಾಡಬಹುದೇ ಹೊರತು, ಸಂಪೂರ್ಣವಾಗಿ ಗುಣಪಡಿಸಲಾಗುವುದಿಲ್ಲ. 'ಹೀನ ಸುಳಿ ಬೋಳಿಸಿದರೆ ಹೋಗುತ್ತೆ' ಎನ್ನುವ ಗಾದೆಯು ಹಿಸ್ಟಿರಿಕಲ್ ಪ್ರವೃತ್ತಿಗೆ ಮತ್ತು ಪ್ರದರ್ಶನಕ್ಕೆ ಶತಾಂಶ ಅನ್ವಯಿಸುತ್ತದೆ. ಉಪಶಮನವನ್ನು ಮಾಡಿದರೆ ಅದರ ಘೋರ ರೂಪವು ಹೋಗಿ, ಸೌಮ್ಯಸ್ಥಿತಿಗೆ ಇಳಿಯುತ್ತದೆ. ಸೌಮ್ಯ ಸ್ಥಿತಿಯ ಹಿಸ್ಟಿರಿಯಾ ಇದ್ದರೂ ಕೂಡ, ವೈನವಾಗಿ, ಬಾಳನ್ನು ನಡೆಸಬಹುದು. ಮನೆಯವರಿಗೆ ಮತ್ತಿತರರಿಗೆ ಗೋಳಾಗದಂತೆ ಸಂಸಾರವನ್ನು ಮಾಡಬಹುದು.

ಚಿಕಿತ್ಸೆಯ ವಿಧಾನಗಳಲ್ಲಿ 'Suggestion' ಸೂಚನೆಯನ್ನು ಕೊಡುವುದು ಎಂಬುದು ಮುಖ್ಯವಾದ ಮತ್ತು ಮೊದಲನೆಯದಾದುದು. ಎಲ್ಲ ತೆರನ ಮಾನಸಿಕ ಬೇನೆಗಳಿಗೂ ಇದು ಅನ್ವಯಿಸುತ್ತದೆ.

'ಖಂಡಿತವಾಗಿ ನಿನ್ನ ಬೇನೆಯು ವಾಸಿಯಾಗುತ್ತದೆ. ನಿನ್ನನ್ನು ಕಾಡುತ್ತಿರುವ ರೋಗದ ಗೋಳುಗಳು ಸ್ವಲ್ಪ ಕಾಲದಲ್ಲೇ ನಿವಾರಣೆಯಾಗುತ್ತವೆ.'

ಎಂದು ವೈದ್ಯನು ನಿರ್ಧಾರದ ಧ್ವನಿಯಲ್ಲಿ ಹೇಳಿದರೆ, ರೋಗಿಯಮನಸ್ಸಿಗೆ ಅದು ಹಿಡಿಸುತ್ತದೆ. ನಿರ್ಧಾರದ ಧ್ವನಿಯು ವೈದ್ಯನಿಂದ ಹೊರಡಬೇಕಾದರೆ, 'ಇದರಿಂದ ಪೂರ್ಣವಾಗಿ ಗುಣವಾಗುತ್ತದೆ' ಎಂಬ ನಂಬಿಕೆಯು ಅವನಲ್ಲಿ ಭದ್ರವಾಗಿರಬೇಕು. 'ಆತ್ಮವಿಶ್ವಾಸ' ಎಂದು ಈ ಮಾನಸಿಕ ಪ್ರೌಢಿಮೆಯನ್ನು ನಮ್ಮ ಹಿರಿಯರು ಹೆಸರಿಸಿದ್ದರು. ಆತ್ಮವಿಶ್ವಾಸವು ವೈದ್ಯರಲ್ಲಿ ಹೊರವಾಗಿದ್ದಾಗ, ರೋಗಿಯ ಮನಸ್ಸಿನ ಮೇಲೆ ಸತ್ಪರಿಣಾಮವನ್ನು ಅದು ಬೀರುತ್ತದೆ. ರೋಗಿಗೆ ಗುಣವೂ ಆಗುತ್ತದೆ.

ದೃಢ ನಂಬಿಕೆಯಿಂದ, ಪೂರ್ಣ ಆತ್ಮವಿಶ್ವಾಸದಿಂದ ನುಡಿದ ಮಾತು, ನುರಿತ, ಕಲಿತ, ವೈದ್ಯಶಾಸ್ತ್ರಜ್ಞದಿಂದಲೇ ನಡೆಯಬೇಕು ಎಂದೇನೂ ಇಲ್ಲ. Suggestion ಅಂತಹವರಿಂದಲೇ ಆಗಬೇಕಾಗಿಲ್ಲ.

ಯಾವುದಾದರೂ ದೇವರ, ಒಂದು ರೂಪವನ್ನು, ದೃಢವಾದ ನಂಬಿಕೆಯಿಂದ ಉಪಾಸನೆಯನ್ನು ನಿತ್ಯ ಮಾಡುವವರು, ಈ ತೆರನ Suggestion ಇನ ಸತ್ಪರಿಣಾಮವನ್ನು ಉಂಟುಮಾಡಬಲ್ಲರು. ನಮ್ಮ ಸಮಾಜದಲ್ಲಿ ಹಲವಾರು ಮಾನಸಿಕ ಪಲ್ಲಟಗಳನ್ನು ಮಂತ್ರಗಳಿಂದ ಗುಣಪಡಿಸುವುದನ್ನು ಕಂಡಿದ್ದೇವೆ. ಆತ್ಮವಿಶ್ವಾಸವಿರುವ ಉಪಾಸಕನು, ರೋಗಿಯ ಮನಸ್ಸಿನ ಮೇಲೆ ಪರಿಣಾಮವನ್ನು