ಮನಮಂಥನ
ಹೂಡುತ್ತಾನೆ ; Suggestion ಮೂಲಕ ಎನ್ನಬಹುದು. ಇಂತಹ 'Telepathy' or 'Teletherapy' ಹೇಗೆ ಸಾಧ್ಯ? ಹೇಗಾಗುತ್ತದೆ? ಎನ್ನುವುದು ಇಂದಿನ ಹಂತದ ವಿಜ್ಞಾನಕ್ಕೆ ಇನ್ನೂ ತಿಳಿದುಬಂದಿಲ್ಲ.
ಪ್ರಸಿದ್ಧಿಯನ್ನು ಬಹುಕಾಲದಿಂದಲೂ ಪಡೆದ ದೇವಮಂದಿರಕ್ಕೆ ಯಾತ್ರೆ ಹೋಗಿ, ದೇವರ ಸೇವೆಯನ್ನು ಮಾಡಿದರೆ ಗುಣವಾಗುತ್ತದೆ ಎಂದು ರೋಗಿಯು ನಂಬಿದ್ದರೆ, ಯಾತ್ರೆಗಳೂ ಗುಣಪಡಿಸಬಲ್ಲವು, ಇದೂ ಒಂದು ತೆರನ ಅವ್ಯಕ್ತವಾದ Suggestion ಎಂದೆಂದೋ ಯಾರಾರಿಂದಲೋ ಕೇಳಿದ್ದ ಸುದ್ದಿಗಳು, ರೋಗಿಯ ಮನಸ್ಸಿನ ಹಂದರಗಳಲ್ಲಿ ಪ್ರತಿಷ್ಠಿತವಾಗಿರುತ್ತವೆ ; ಜೀವಂತವೂ ಆಗಿರುತ್ತವೆ.
ಇಂತಹ ಸ್ಮರಣೆಗಳೂ, ಯಾತ್ರೆಗೊಳ್ಳುವ ರೋಗಿಯ ಮನಸ್ಸಿನ ಮೇಲೆ ಪ್ರಭಾವವನ್ನು ಬೀರುತ್ತವೆ. ಆಗ “Memory Suggestion' ಆಗುತ್ತದೆ. ವೈದ್ಯನ Suggestion ಅಂತೆಯೇ ಗುಣಪಡಿಸುತ್ತದೆ. ಇಂತಹ ಯಾತ್ರಾರ್ಥಿ ರೋಗಿಗಳಲ್ಲಿ ಹಲವರು 'ನಮಗೇನೂ ಇದರಲ್ಲಿ ನಂಬಿಕೆಯಿಲ್ಲ. ಆದರೆ ನೆಂಟರಿಷ್ಟರ ಪ್ರೀತ್ಯರ್ಥವಾಗಿ ಯಾತ್ರೆ ಮಾಡುತ್ತೇವೆ' ಎಂದನ್ನುತ್ತಾರೆ. ಅವರ ತೋರ ಮನಸ್ಸು, Conscious Mind ಹೀಗನಿಸುತ್ತದೆ. ತೋರ ಮನಸ್ಸು ಅಹಂಕಾರದಿಂದ ತುಂಬಿರುತ್ತದೆ. ವಿಚಾರಮಾಡಿ ನಿರ್ಧರಿಸುವ ಶಕ್ತಿ ನನಗಿದೆ ಎನ್ನುವ ಅಹಂಕಾರ! ವಿಚಾರಮಾಡುವ ಮನಸ್ಸು ಎತ್ತರದ ಕಂಬದ ಮೇಲಿರುವ ನಾವಿಕರ ದೀಪದಂತೆ. ಎತ್ತರದಿಂದ ಅದು ಬಲು ದೂರ ಸಮುದ್ರದ ಮೇಲೆ ತನ್ನ ದಾರಿದೀಪವನ್ನು ಹರಡುತ್ತದೆ. ಆದರೆ ಅದರ ಬುಡದಲ್ಲಿ, ಕತ್ತಲೋ ಕತ್ತಲು ! ವಿಚಾರವನ್ನು ಮಾಡುವ ಮನಸ್ಸಿನ ಅಂಶವು, ತನ್ನ ಬುಡದ ಸುತ್ತಲೂ ಗಾಢಾಂಧಕಾರದ ಮನಸ್ಸಿದೆ ಅದರ ಮೇಲೆ ಪ್ರತಿಷ್ಠಿತವಾಗಿದ್ದೇನೆ, ಎನ್ನುವುದನ್ನು ಅರಿಯುವುದಿಲ್ಲ. ಅದೇ ಅಹಂ-ಕಾರದ ಮಾಯಾ ಗೌಸು. 'ನನಗೇನೂ ಇಂತಹ ಯಾತ್ರೆಗಳಲ್ಲಿ ಯಾವ ತಿಲಾಂಶ ನಂಬಿಕೆಯೂ ಇಲ್ಲ' ಎಂದು ಘೋಷಿಸುತ್ತಾನೋ ಅವನ ಗಾಡಾಂಧಕಾರದ ಮನಸ್ಸು – “Personal and Total unconsciousn ಯಾತ್ರೆಯಿಂದ ಪ್ರಯೋಜನವಾದರೂ ಆದೀತು ಎಂದು ಸೂಚಿಸುತ್ತದೆ, ಅವ್ಯಕ್ತವಾಗಿ ಇದು ಕೂಡ ಒಂದು ತೆರನ “Auto-Suggestion” ಅಚ್ಚರಿಯನ್ನುಂಟು ಮಾಡುವಂತೆ, ಹಲವಾರು ಮಾನಸಿಕ ರೋಗಿಗಳು, ತೀರ್ಥಯಾತ್ರೆಯ ನಂತರ, ಗುಣಮುಖರಾಗುವುದಕ್ಕೆ, Auto-Suggestion ಮುಖ್ಯ ಪಾತ್ರವನ್ನು ವಹಿಸುತ್ತದೆ.
ನಮ್ಮ ದೇಶದಲ್ಲಿ ನಮ್ಮ ಸಮಾಜದಲ್ಲಿ ; ದೈವೀ ಉಪಾಸಕರ ಸಂಖ್ಯೆಗೆ ಮಿತಿ ಇದೆಯೇ? ತೀರ್ಥಯಾತ್ರಾ ಸ್ಥಳಗಳಿಗೆ ಕೊರತೆಯೇ? ಇಂತಹವುಗಳಲ್ಲಿ