೧೫೩
ನಂಬಿಕೆ ಇದ್ದವರು ಕಡಿಮೆಯೇ? ಶಾಸ್ರೋಕ್ತವಾದ ವೈಜ್ಞಾನಿಕ Suggestion ಅನ್ನು, ನಮ್ಮಲ್ಲಿ ಪ್ರಚಲಿತವಾಗಿರುವ ವಿಧವಿಧ ವಿಧಾನಗಳನ್ನು ಬಳಸಿಕೊಳ್ಳುವುದರಲ್ಲಿ ತಪ್ಪೇನೂ ಇಲ್ಲ. ಹಾಗೂ ಬಳಸಿಕೊಳ್ಳದೇ ಇರುವುದು, ವೈಜ್ಞಾನಿಕ ದೃಷ್ಟಿಯಿಂದ ಮಹಾಪರಾಧ ಎಂದೂ ಅನ್ನಬಹುದು.
ಆದರೆ ಸಾಂಪ್ರದಾಯಿಕವಾದ ಈ ವಿಧಾನಗಳಿಂದ ದುಷ್ಪರಿಣಾಮವೊಂದು ಸಾಧ್ಯ. ಇದ್ದ ಮಾರಿ ಹೋಗಿ, ಇನ್ನೊಂದು ಹೆಮ್ಮಾರಿ ತಗುಲಿಕೊಳ್ಳಬಹುದು. ದೈವೀ ಉಪಾಸಕನಿಗೆ ಶರಣು ಬಿದ್ದವರು, ತಮ್ಮ ಮನಸ್ಸಿನಲ್ಲಿ ನೆಮ್ಮದಿಯನ್ನು ತುಸುಮಟ್ಟಿಗೆ ಪಡೆಯಬಹುದು ; ಪಡೆಯುತ್ತಾರೆ. ಆದರೆ ದೈವೀ ಉಪಾಸಕನು ಅವರ ಮನಸ್ಸನ್ನು ದೆವ್ವ ಹಿಡಿದಂತೆ ಹಿಡಿಯುತ್ತಾನೆ. ದೈವೀ ಉಪಾಸಕನಿಗೆ ಈ ರೀತಿ ಮಾನಸಿಕವಾಗಿ ಗಂಟು ಬೀಳುವುದು, ನಿತ್ಯ ಜೀವನದಲ್ಲಿ ಅಪಾರ ತೊಂದರೆಯನ್ನು ಉಂಟುಮಾಡುತ್ತದೆ. ಸಮಾಜದಲ್ಲಿ ರೂಢಿತವಾದ ಇಂತಹ ವಿಧಾನಗಳನ್ನು ಅನುಸರಿಸ ಹೋಗುವಾಗ ಈ ದುಷ್ಪರಿಣಾಮದ ಅರಿವೂ ಇರಬೇಕು. ಕೊಕ್ಕಾಟದಂತಾಗುವ ಈ ಪರಿಣಾಮವನ್ನು ಮರೆಯಬಾರದು.
ಮನೆಯಲ್ಲಿರುವ ನೆಂಟರಿಷ್ಟರು ಅದರ ಮತ್ತು ಅನುಕಂಪಗಳನ್ನು ತೋರಿಸುವುದರಿಂದ ರೋಗಿಗೆ ಹಾಯ್ ಎನಿಸುತ್ತದೆ. ಕೆಲವರಿಗಾದರೂ ನನ್ನನ್ನು ಕಂಡರೆ ಪ್ರೀತಿ, ಅವರಿಗೆ ನಾನು ಅಗತ್ಯ ಎನ್ನುವ ಭಾವನೆಯು ಹಿತಕರವಾಗಿರುತ್ತದೆ. ಹಿಸ್ಟಿರಿಯಾ ಪ್ರದರ್ಶನದ ಮೂಲ ಪ್ರೇರಕಗಳಲ್ಲೊಂದು, ಮನೆಯವರ ಮತ್ತಿತರರ ಸಹಾನುಭೂತಿ ಮತ್ತು ಅನುಕಂಪವನ್ನು ಪಡೆಯುವುದೇ ಆಗಿರುತ್ತದೆ.
ನಮ್ಮ ಸಮಾಜದಲ್ಲಿ ಅನುಕಂಪವೂ ಸೌಹಾರ್ದವೂ ಮನಸ್ಸಿನಲ್ಲಿದ್ದರೂ ಸಾಕಷ್ಟು ಸ್ಪಷ್ಟಪಡಿಸುವುದಿಲ್ಲ. 'ನಾವು ಹಿರಿಯರು, ಮನೆಗೆ ದೊಡ್ಡವರು ; ನಾವು ಹೇಳಿದಂತೆ, ಚಾಚೂ ತಪ್ಪದೆ ಕಿರಿಯರು ಕೇಳಿಕೊಂಡು ಬಿದ್ದಿರಬೇಕು. ಅವರ ಯೋಗಕ್ಷೇಮದ ಹೊಣೆಯು ನಮ್ಮದೇ ಅಲ್ಲವೇ ?' ಎಂದು ಮನೆಯ ಹಿರಿಯರು ಕಿರಿಯರಿಗೆ ಅನ್ನುವುದು ಸಾಮಾನ್ಯ. ಕಿರಿಯರು ಎನ್ನಿಸಿಕೊಂಡವರಿಗೆ ಪ್ರೌಢ ವಯಸ್ಸಾಗಿರುತ್ತದೆ. ಪ್ರತ್ಯೇಕವಾದ ವ್ಯಕ್ತಿತ್ವವೂ ಇರುತ್ತದೆ. ಅವರುಗಳ ವ್ಯಕ್ತಿತ್ವಕ್ಕೆ ಧಕ್ಕೆ ತಗಲುತ್ತದೆ. ಹಿಸ್ಟಿರಿಯಾ ಅಥವಾ ಇತರ ಮಾನಸಿಕ ಪಲ್ಲಟಗಳು ಉಂಟಾಗುತ್ತವೆ. ರುಚಿಯಾದ ಊಟವನ್ನು ಸಾಕಷ್ಟು ಬಡಿಸಬಹುದು. ಆದರೆ ಮುಖವನ್ನು ಸಿಂಡರಿಸಿಕೊಂಡು, ನಾಯಿಯ ತಟ್ಟೆಗೆ ಅನ್ನವನ್ನೆರಚುವಂತೆ, ಬಡಿಸಿದರೆ, ತಿನ್ನುವವರಿಗೆ ಬೇಸರವೂ ಜುಗುಪ್ಪೆಯೂ ಬರುತ್ತದೆ. ಊಟವೇ ಬೇಡ, ಎದ್ದು ಬಿಟ್ಟರೆ ಸಾಕು ಎನಿಸುತ್ತದೆ.