೪. ಒಬ್ರೆಷನಲ್ 'ಬೇನೆಗಳು
Obsessional Syndromes
ವಿಜಯಲಕ್ಷ್ಮಿಯ ಗೋಳು ಎಂಟು ತಿಂಗಳ ಮಗುವಿಗೆ ಬ್ರಾಂಕೋನ್ಯುಮೋನಿಯಾ ಆಗಿತ್ತು. ಚೊಚ್ಚಲ ಆ ಮಗುವನ್ನು ಚಿಕಿತ್ಸೆಗೆ ಕರೆದು ತಂದ ತಾಯಿಯು ಸ್ವಾಭಾವಿಕವಾಗಿ ಕಾತರಳಾಗಿದ್ದಳು. ತುಂಬಾ ಕಾತರರಾದವರ ಮುಖದಲ್ಲಿ ಹುಬ್ಬು ಗಂಟಿಕ್ಕಿಕೊಂಡಿರುತ್ತದೆ. ಹಣೆಯ ಮೇಲಿನ ಗೆರೆಗಳು ಎದ್ದು ಕಾಣುವಂತಾಗುತ್ತದೆ. ಹುಬ್ಬುಗಳು ಗಂಟಿಕ್ಕಿಕೊಂಡಿರುವುದರಿಂದ, ಅಲ್ಲಿ ಕಾಣುವ ಗೆರೆಗಳು ಗ್ರೀಕ್ ಲ್ಯಾಮ್ಡಾ ಅಕ್ಷರದಂತೆ ಕಾಣಿಸುತ್ತದೆ. ತಲೆಕೆಳಗಾದ ಕ್ಯಾಟೇಬಿಲ್ಲಿನಂತೆ ಇರುತ್ತದೆ. ಹುಬ್ಬುಗಳ ಮಧ್ಯದಲ್ಲಿ ಈ ಗೆರೆಗಳು ಕಂಡುಬಂದರೆ, ಲ್ಯಾಮ್ಡಾ ಸೈನ್' ಇದ್ದರೆ, ಅಂತಹವನ ಮನಸ್ಸಿನಲ್ಲಿ ಎಂತದೋ ಆಗುತ್ತಿದೆ. ಬಲು ಆತಂಕದಿಂದಿದ್ದಾನೆ. ಎಂದು ಗುರುತಿಸಬಹುದು. ಈ ಗುರುತು, ತಾಯ ಹುಬ್ಬುಗಳ ಮಧ್ಯೆ ಸ್ಪಷ್ಟವಾಗಿ ಕಾಣಿಸುತ್ತಿತ್ತು. ಚೊಚ್ಚಲ ಮಗುವಿಗೆ ಕೆಂಡಾಮಂಡಲ ಜ್ವರವು ಬಂದು, ಉಸಿರಾಡಲು ತೊಂದರೆಯಾಗುತ್ತಿದ್ದರೆ, ತಾಯಿಗೆ, ಪಾಪ, ಆತಂಕವಿಲ್ಲದೇ ಇರುತ್ತದೆಯೇ?
ಮೂರು ದಿನದಲ್ಲಿ ಮಗುವು ಗುಣ ಹೊಂದಿತು. ಎಂದಿನಂತೆ ಆಹಾರವನ್ನು ತೆಗೆದುಕೊಂಡು ಆಡಲಾರಂಭಿಸಿತು. ಆದರೆ ತಾಯಿಯ ಭೂಮಧ್ಯದಲ್ಲಿದ್ದ ಲ್ಯಾಮ್ಡಾ ಗೆರೆಯು ಸ್ಥಿರವಾಗಿಯೇ ಇತ್ತು. ಮಗುವಿಗೆ ವಾಸಿಯಾದ ಮೇಲೂ ಈಕೆ ಯಾಕೆ ಆತಂಕದಿಂದಿದ್ದಾಳೆ ಎಂದು ಅಚ್ಚರಿಯಾಯಿತು. ಆದುದರಿಂದ 'ಇದ್ಯಾಕೆ, ವಿಜಯಲಕ್ಷ್ಮೀ ! ಇನ್ನೂ ಆತಂಕದಿಂದಿದ್ದೀಯೇ ! ಮಗುವಿಗೆ ಪೂರ್ಣವಾಗಿ ಗುಣವಾಗಿದೆ. ಮತ್ಯಾತರ ಕಾಳಜಿ, ಈಗ ಎಂದು ಕೇಳಿದೆ.
ಇಪ್ಪತ್ತೆರಡು ಇಪ್ಪತ್ತುಮೂರರ ಆ ತಾಯಿ, ನಾ ಕೇಳಿದ ಪ್ರಶ್ನೆಯಿಂದಲೋ, ಅಥವಾ ನುಡಿದ ಧ್ವನಿಯಿಂದಲೋ ಯಾವ ಕಾರಣದಿಂದಲೋ ಏನೋ ಬಿಕ್ಕಿ ಬಿಕ್ಕಿ ಅಳಲಾರಂಭಿಸಿದಳು. ದವಾಖಾನೆಯಲ್ಲಿ ನೆರೆದಿದ್ದ ಎಲ್ಲರೆದುರಿಗೂ ಬೆಳೆದ ಹೆಂಗಸು, ಆಳಲಾರಂಭಿಸಿದರೆ, ವೈದ್ಯನಿಗೆ ತುಸು ಮುಜುಗುರವೇ. ಆದುದರಿಂದ, ಒಳಗೆ ಬಾ, ವಿಜಯಲಕ್ಷ್ಮೀ, ಅಲ್ಲಿ ಸಮಾಧಾನ ಮಾಡಿಕೊಳ್ಳುವಿಯಂತೆ' ಎಂದು