ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೧೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೧೬೪

ಮನಮಂಥನ


ಪದವೀಧರೆಯಾದ ಮೇಲೆ ಮದುವೆಯಾಯಿತು. ಉತ್ತರ ಹಿಂದೂಸ್ಥಾನದಲ್ಲಿ ಗಂಡನಿಗೆ ನೌಕರಿ, ಅತ್ತೆ, ನಾದಿನಿ, ಗಂಡ, ಹೆಂಡತಿ, ಇಷ್ಟೇ ಜನರಿರುವ ಪುಟ್ಟ ಸಂಸಾರ, ಮಧ್ಯಮ ವರ್ಗದ ಸಂಸಾರಕ್ಕೆ ಸಾಕಾಗುವಷ್ಟು ಸಂಪಾದನೆ. ಆಧುನಿಕ ನಡವಳಿಕೆಯಿದ್ದ ಸಂಸಾರ. ಮುಖ್ಯ ಎಲ್ಲವೂ ವಿಹಿತವಾಗಿತ್ತು. ಮೈ ಇಳಿದಾಗ, ಆತಂಕ ತುಂಬಿತು : ಯಾಕೆ ಹೀಗಾಯಿತು ಎಂದು. ನಂತರ ಮುಸುರೆಯ ಪಿಶಾಚಿಯು ಬಲವಾಗಿ ಹಿಡಿದುಕೊಂಡು ಜಗ್ಗಾಡಲಾರಂಭಿಸಿತು.

ನತದೃಷ್ಟರಿಗೆ ಬಡಿಯುವ ಈ ಮಾನಸಿಕ ಮುಸುರೆಯು ಒಬ್ಬೆಷನಲ್ ಬೇನೆಯೇ ! ಮುಸುರೆ ಎಂದು ಒದ್ದಾಡುವುದು ಶುದ್ಧ ಮೂರ್ಖತನ ಎಂದು ಅನಸೂಯಳಿಗೆ ಚೆನ್ನಾಗಿ ಗೊತ್ತಿರುತ್ತದೆ. ಆದರೆ ಮುಸುರೆ ಪಿಶಾಚಿಯು, ಅವಳನ್ನು ಬಿಗಿದುಕೊಂಡು, ಒದ್ದು, ನಡಸುತ್ತದೆ. ಮೂರ್ಖನಡವಳಿಕೆ ಎಂದು ತಿಳಿದಿದ್ದರೂ, ಬಲವಂತವಾಗಿ, ಅನಿವಾರ್ಯವಾದಂತೆ, ಆಕೆ, ನಡೆದ ಹೆಜ್ಜೆಯ ಗುರುತಿನ ಮೇಲೆ ನೀರನ್ನು ಚುಮಕಿಸುತ್ತಾಳೆ. ಅದರಿಂದ ಮುಸುರೆಯು ಹೋಯಿತು ಎಂದುಕೊಳ್ಳುತ್ತಾಳೆ. ಇದನ್ನು ಕಂಡು ಯಾರಾದರೂ ಹೀಯಾಳಿಸಿದರೆ, ಕೋಪವು ಬರುತ್ತದೆ. ಕೋಪವು ಉಕ್ಕಿ ಕೆರಳಿದಾಗ, ಆಡುವ ಮಾತುಗಳಿಗೆ ಸಭ್ಯತೆಯ ಚೌಕಟ್ಟಾಗಲೀ, ವಿಚಾರಪೂರಿತ ಸರಳತೆಯಾಗಲೀ ಇರುವುದಿಲ್ಲ. ಓದಿ ಬರೆದವರು, ಸುಸಂಸ್ಕೃತ ವಾತಾವರಣದಲ್ಲಿ ಬೆಳೆದವರು, ಇಂತಹ ಕೆಟ್ಟ ಕೆಟ್ಟ ಮಾತುಗಳನ್ನು ಆಡಬಹುದು ಎಂದು ನಂಬುವುದಕ್ಕೆ ಕಷ್ಟವಾಗುತ್ತದೆ ; ಅಂತಹ ಮಾತುಗಳನ್ನು ಕೇಳಿಸಿಕೊಳ್ಳುವ ತನಕ.

ಮುಸುರೆ ಪಿಶಾಚಿಯೊಂದಿಗೆ ತೀವ್ರ ಆತಂಕವೂ ಜತೆಗೂಡುತ್ತದೆ. ಎಂಥದೋ ಅವ್ಯಕ್ತವಾದ ತೀಕ್ಷ್ಮವಾದ ಭಯ. ತುಸು ಪೆಟ್ಟಾದರೆ ಸತ್ತೆ ಎಂದು ಬೊಬ್ಬೆ ಹೊಡೆಯುತ್ತಾರೆ. ಆದರೆ ಆಪರೇಷನ್ ಅಗತ್ಯ ಬಿದ್ದಾಗ, ವೈದ್ಯರು ಶಸ್ತ್ರಚಿಕಿತ್ಸೆಯನ್ನು ಕೈಗೊಳ್ಳುವಾಗ, ಆತಂಕವಿರದೆ ಧೈರ್ಯದಿಂದಿರುತ್ತಾರೆ. ನಿರುತ್ಸಾಹ ಮತ್ತು ಖಿನ್ನತೆಗಳು ಆಗಿಂದಾಗ್ಗೆ ಇಂತಹವರಲ್ಲಿ ಕಾಣಿಸಿಕೊಳ್ಳುತ್ತವೆ. ಇಂತಹ ಅವಧಿಯಲ್ಲಿ ಬೆಪ್ಪುಬಡಿದಂತಿರುತ್ತಾರೆ. ಮಿಕ್ಕಂತೆ ಯಾವುದಾದರೂ ಒಂದು ಗೀಳನ್ನು ಭದ್ರಮಾಡಿಕೊಳ್ಳುತ್ತಾರೆ. ರಂಗೋಲಿಯ ಚಿತ್ರಗಳನ್ನು ಬಿಡಿಸುವುದು; ಮೇಣದ ಬೊಂಬೆಗಳನ್ನು ಮಾಡುವುದು; ಮಣಿಪಠಗಳನ್ನು ಹಾಕುವುದು; ಕಾಗದದ ಹೂವುಗಳನ್ನು ರಚಿಸುವುದು; ಹೀಗೆ ಯಾವುದಾದರೂ ಒಂದು ಹವ್ಯಾಸವನ್ನು, ಅಹೋ ರಾತ್ರಿ ಮಾಡಲಾರಂಭಿಸುತ್ತಾರೆ, ಒಂದೆರಡು ತಿಂಗಳುಗಳ ಕಾಲ. ಅನಂತರ