೧೬೫
ಅದನ್ನು ಮರೆತು, ಬೇರೊಂದು ಹವ್ಯಾಸ. ಒಂದೊಂದು ಹವ್ಯಾಸದಲ್ಲಿಯೂ ಎಷ್ಟು ಆಸಕ್ತರಾಗುತ್ತಾರೆ, ಅಂತ ; ಇಷ್ಟೆಲ್ಲಾ ಶ್ರಮವನ್ನು ಇವರುಗಳೂ ಹೇಗೆ ಪಡಲು ಸಾಧ್ಯ ! ಇಷ್ಟು ಶಕ್ತಿ ಇವರಿಗೆಲ್ಲಿಂದ ಬಂದಿತು ? ಎಂದು ಆಶ್ಚರ್ಯ ಪಡುವಂತಾಗುತ್ತದೆ. ಒಬ್ಸೆಷನಲ್ ಬೇನೆಯ ಒಂದು ಅವತಾರ ; ಮುಸುರೆಯ ಪಿಶಾಚಿ.
ಮಾಲಕ್ಷಮ್ಮನ ಮಡಿ ಮಧುರೆಗೆ ಹೋಗಿದ್ದಾಗ ಮೀನಾಕ್ಷಿಯ ದೇವಸ್ಥಾನದಿಂದ ಹಿಂತಿರುಗುತ್ತಿದ್ದೆ. ಯಾರೋ ನನ್ನ ಹೆಸರನ್ನು ಕೂಗಿದಂತಾಯಿತು. ಈ ಊರಿನಲ್ಲಿ ನನ್ನ ಹೆಸರು ಯಾರಿಗೆ ಗೊತ್ತಪ್ಪಾ ಎಂದು ಹಿಂತಿರುಗಿ ನೋಡಿದೆ. ಅರೆ ! ಮಾಧು ! ಕಳೆದ ೨೦ ವರ್ಷಗಳಿಂದ ಅವನೆಲ್ಲಿದ್ದಾನೆ ಎನ್ನುವುದೂ ಗೊತ್ತಿರಲಿಲ್ಲ. ಕಾಲೇಜಿನಲ್ಲಿ ಓದುತ್ತಿದ್ದಾಗ, ತುಂಬಾ ಗಳಸ್ಯ ಕಂಠಸ್ಯ ಆದರೆ ಬಾಳಿನ ವಿಚಿತ್ರವು ತಿಳಿದೇ ಇದೆಯಲ್ಲ. ಅವ ಎಲ್ಲೋ ನೌಕರಿಗೆ ಹೋದ, ನಂತರ ಸಂಕಪರ್ಕವೇ ಇಲ್ಲ. ದೇವಸ್ಥಾನದ ಬಳಿಯಲ್ಲಿ ಹಳೆಯ ಗೆಳೆಯನು ಸಿಕ್ಕಿದ್ದು ಒಳ್ಳೆಯ ಶಕುನ ಎಂದುಕೊಂಡೆ.
'ಇಲ್ಲಿಗೆ ಯಾವಾಗ ಬಂದೆಯೋ? ಇಲ್ಲೇ ನಾನು ವಿಮಾ ಏಜೆಂಟನಾಗಿದ್ದೀನಿ. ಪುಟ್ಟ ಮನೆಯನ್ನೂ ಮಾಡಿಕೊಂಡಿದ್ದೀನಿ. ಒಂದು ಹೊತ್ತು ಊಟ ಮಾಡಿಕೊಂಡು ಹೋಗಲೇಬೇಕು, ತುಂಬಾ ಹರಟೆ ಕೊಚ್ಚಬೇಕು' ಎಂದು ಆದರದಿಂದ ಒತ್ತಾಯ ಪಡಿಸಿದ. ಒಂಟಿಯಾಗಿದ್ದೆ. ಮೇಲೆ ಬಿದ್ದುಕೊಂಡು ನಾನೇ ಊಟಕ್ಕೆ ಬರೀನಿ ಎಂದು ಹೇಳುವವನಿದ್ದೆ. ಅಂದಮೇಲೆ ಅವನೇ ಕರೆದರೆ ! ಸಂತೋಷದಿಂದ ಒಪ್ಪಿಕೊಂಡು, ಅವನೊಂದಿಗೆ ಹೊರಟೆ.
ಅವನ ಮನೆಯನ್ನು ಸೇರಿದಾಗ ಹತ್ತು ಗಂಟೆಯ ಸಮಯ. ಲಕ್ಷಣವಾದ ಮನೆ, ಬೀದಿಯ ಬಾಗಿಲ ಹೊಸಿಲು ದಾಟುತ್ತಲೇ ದೊಡ್ಡದೊಂದು ಹಜಾರ. ೧೬, ೧೪, ೧೨, ೮, ೬ ಈ ವಯಸ್ಸುಗಳ ಐದೂ ಮಕ್ಕಳು ಹಜಾರದಲ್ಲಿದ್ದರು. ಶಾಲೆಗೆ ಹೋಗಲು ಎಲ್ಲರೂ ಸಿದ್ಧರಾಗುತ್ತಿದ್ದರು. ಬ್ರೆಡ್ಡನ್ನು ತಿನ್ನುತ್ತಿದ್ದರು. ಮಕ್ಕಳ ಪರಿಚಯವನ್ನು ಮಾಡಿಕೊಟ್ಟ ನಾಲ್ಕು ಮಾತುಗಳನ್ನು ಅವರುಗಳೊಂದಿಗೆ ಆಡಿದೆ. ಪುಸ್ತಕದ ಚೀಲಗಳನ್ನು ತೆಗೆದುಕೊಂಡು ಅವರು ಸ್ಕೂಲಿಗೆ ಹೊರಟರು. ಬೆಳಗಿನ ಊಟವಿಲ್ಲದೆ, ಮಕ್ಕಳು ಶಾಲೆಗೆ ? ಕೌತುಕ ಉಂಟಾಯಿತು ನನಗೆ. ಮಾಧುವಿನ ಕಡೆ ದಿಟ್ಟಿಸಿ ನೋಡಿ ಹುಚ್ಚೆತ್ತಿದೆ, ಅರ್ಥವಾಯಿತು ಅವನಿಗೆ.